ಮಗನನ್ನ ಶಾಲೆ ಬಿಡಿಸಲು ಮುಂದಾದ ಡಿ ಬಾಸ್ ದರ್ಶನ್ ಪತ್ನಿ ಶಾಕ್ ! ಏನಾಗಿದೆ ತಂದೆ ಮಗನ ನಡುವೆ ? ಡಿ ಬಾಸ್ ಹೇಳಿದ್ದೇನು ?

418

ಕ್ರಾಂತಿ ಚಿತ್ರದ ಪ್ರಮೋಷನ್ ವೇಳೆ ಇತ್ತೀಚಿಗೆ ಶಾಲೆಗಳು ತೆಗೆದುಕೊಳ್ಳುವ ಅತಿ ಹೆಚ್ಚು ಡೊನೇಷನ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದಾರೆ. ತಮ್ಮ ಮಗನಿಗೆ ಬರೋಬ್ಬರಿ ಎಷ್ಟು ಲಕ್ಷ ಪೀಸ್ ಕಟ್ಟುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಯಾವಾಗಲೂ ಅಭಿಮಾನಿಗಳನ್ನು ಅವರು ಪ್ರೀತಿಯ ಸೆಲೆಬ್ರಿಟಿಗಳು ಎಂದೇ ಸಂಪಾದಿಸಿದ್ದಾರೆ. ಕರ್ನಾಟಕದಲ್ಲಿ ದೊಡ್ಡಮಟ್ಟದ ಕ್ರೇಜ್ ಮತ್ತು ಅಭಿಮಾನ ಪಡೆದಿರುವ ನಟರಲ್ಲಿ ದರ್ಶನ್ ಕೂಡ ಒಬ್ಬರು. ಅವರನ್ನು ಕಂಡರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, ಸಂಭ್ರಮಿಸುತ್ತಾರೆ. ಕೇವಲ ನಟನೆ ಮಾತ್ರವಲ್ಲದೆ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುವ ಗೌರವದಿಂದ ನಡೆಸಿಕೊಳ್ಳುವುದರಲ್ಲಿ ದರ್ಶನ್ ಯಾವಾಗಿದ್ದರು ಎತ್ತಿದ ಕೈ.

ಅವರು ಕ್ರಾಂತಿ ಸಿನಿಮಾ ಮಾಧ್ಯಮಗೋಷ್ಠಿಗೆ ಭಾಗವಹಿಸಿದ್ದರು. ಅದರಲ್ಲಿ ಸಿನಿಮಾದ ಬಗ್ಗೆ, ತಮ್ಮ ಸಿನಿಮಾ ಜರ್ನಿಯ ಬಗ್ಗೆ ಸಾಕಷ್ಟು ಮಾತನಾಡಿದರು. ಇದೇ ವೇಳೆ ಅವರು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದರು. ಇನ್ನು ದರ್ಶನ್ ರವರು ಎಷ್ಟರಮಟ್ಟಿಗೆ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ಸಾಮಾನ್ಯವಾಗಿ ಹೊಸ ಹೊಸ ಚಿತ್ರಗಳು ಬಂದಾಗ ಆ ಚಿತ್ರದ ಪ್ರಚಾರಕ್ಕಾಗಿ ದರ್ಶನ್ ರವರನ್ನು ಆಹ್ವಾನಿಸಲಾಗುತ್ತದೆ. ದರ್ಶನ್ ರವರು ಒಂದೇ ಒಂದು ಮಾತು ಈ ಚಿತ್ರಕ್ಕೆ ಬೆಂಬಲ ನೀಡಿ ಎಂದರೆ ಸಾಕು ನಮ್ಮ ಚಿತ್ರ ಗೆದ್ದಂತೆ ಎಂದು ಹೊಸಬರು ತಯಾರಿಸಿರುವ ಚಿತ್ರತಂಡ ನಂಬುತ್ತದೆ. ಹೀಗಾಗಿಯೇ ಸಾಕಷ್ಟು ಹೊಸ ಹೊಸ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್ ಪ್ರಚಾರ ಕಾರ್ಯಕ್ರಮಗಳಿಗೆ ದರ್ಶನ್ ರವರನ್ನು ಕರೆಯಲಾಗುತ್ತದೆ. ಅವರು ಬಂದು ಸಿನಿಮಾದ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳನ್ನಾಡಿದರೆ ಸಾಕಷ್ಟು ಅಭಿಮಾನಿಗಳನ್ನು ತಾವು ಸೆಳೆಯಬಹುದು ಎಂದೆ ಚಿತ್ರತಂಡ ನಂಬುತ್ತದೆ.

ನಾನು ಓದುವಾಗ ತಿಂಗಳಿಗೆ ಬರಿ 30-40 ರೂಪಾಯಿ ಫೀಸ್ ಇತ್ತು, ಆದರೆ ಈಗ ಅದು ಲಕ್ಷಗಟ್ಟಲೆ ಏರಿದೆ. ನಮ್ಮ ದೇಶ ಕಂಡ ದೊಡ್ಡ ದೊಡ್ಡ ಮಹಾನ್ ವ್ಯಕ್ತಿಗಳು ಸರ್ಕಾರಿ ಶಾಲೆಗಳಲ್ಲಿಯೇ ಓದಿದವರಾಗಿದ್ದಾರೆ. ಆದರೂ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಖಾಸಗಿ ಶಾಲೆಯಲ್ಲಿಯೇ ಓದಬೇಕು ಎಂದೇನಿಲ್ಲ, ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಸಾಧನೆ ಮಾಡಬಹುದು ಎಂದು ಹೇಳಿದ್ದಾರೆ. ಇದರ ಜೊತೆಗೆ ಖಾಸಗಿ ಶಾಲೆಗಳು ಲಕ್ಷಾಂತರ ಫೀಸ್ ಸುಲಿಗೆ ಮಾಡುತ್ತಾರೆ. ನನ್ನ ಮಗ ಓದುತ್ತಿರುವ ಶಾಲೆಗೆ ಎಂಟರಿಂದ ಒಂಬತ್ತು ಲಕ್ಷ ಫೀಸ್ ತೆಗೆದುಕೊಳ್ಳುತ್ತಾರೆ. ಮತ್ತೊಂದೆಡೆ 26 ಲಕ್ಷ ವರ್ಷಕ್ಕೆ ಫೀಸ್ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ನಿಮ್ಮ ಮಗನನ್ನು ಚಿತ್ರರಂಗಕ್ಕೆ ತರುವುದಿಲ್ಲವಾ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಅವನೀಗ ಓದುತ್ತಿದ್ದಾನೆ, ಓದುವ ವಯಸ್ಸಿನಲ್ಲಿ ಚೆನ್ನಾಗಿ ಓದಲಿ. ನಾವು ಸರಿಯಾಗಿ ಓದದೆ ಈಗ ಅನುಭವಿಸುತ್ತಿರುವುದು ಸಾಕು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂದು ಹೇಳಿದ್ದಾರೆ. ಬಹು ನಿರೀಕ್ಷಿತ ಕ್ರಾಂತಿ ಚಿತ್ರವು ಮುಂದಿನ ವರ್ಷ ಜನವರಿ 26ರಂದು ಭರ್ಜರಿಯಾಗಿ ತೆರೆ ಕಾಣಲಿದೆ.