Lakshana: ಲಕ್ಷಣ ದಲ್ಲಿ ಎರಡು ಎಪಿಸೋಡ್ ಗೆ ಅತಿಥಿ ಪಾತ್ರದಲ್ಲಿ ನಟನೆ ಮಾಡಲು ವೈಷ್ಣವಿ ಪಡೆದ ಸಂಭಾವನೆ ಎಷ್ಟು ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.
Lakshana: ನಟಿ ವೈಷ್ಣವಿ ಗೌಡ (Vaishnavi Gowda) ಅವರು ಅಗ್ನಿಸಾಕ್ಷಿ (Agnisakshi) ಧಾರಾವಾಹಿಯ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡವರು. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತು. ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಈ ಧಾರವಾಹಿ ಆ ಸಮಯದ ಅತ್ಯಂತ ಜನಪ್ರಿಯ ನಂಬರ್ ವನ್ ಧಾರವಾಹಿಯಾಗಿತ್ತು. ಸನ್ನಿಧಿ ಸಿದ್ದಾರ್ಥ್ ಪಾತ್ರ ಜನರಿಗೆ ಬಹಳ ಮೆಚ್ಚುಗೆಯಾಗಿತ್ತು. ವೈಷ್ಣವಿ ಅವರಿಗೆ ಈ ಧಾರಾವಾಹಿ ದೊಡ್ಡ ಬ್ರೇಕ್ ನೀಡಿತ್ತು. ಆನಂತರ ಅವರು ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ನಡುವೆ ಬಿಗ್ ಬಾಸ್ (Bigg Boss) ನಲ್ಲಿ ಭಾಗವಹಿಸಿದ್ದರ ಜೊತೆಗೆ ಅವರ ಅದ್ಭುತ ಆಟ ಮತ್ತು ಪ್ರಸಿದ್ಧಿ ಅವರನ್ನು ಗ್ರಾಂಡ್ ಫಿನಾಲೆವರೆಗೂ ಕರೆದುಕೊಂಡು ಹೋಗಿತ್ತು. ಇದರ ಜೊತೆಗೆ ಅವರು ರಿಯಾಲಿಟಿ ಶೋ ಒಂದನ್ನು ಕೂಡ ಸುವರ್ಣದಲ್ಲಿ ನಿರೂಪಿಸಿದ್ದರು. ಇದೀಗ ಅವರು ಕಿರುತೆರೆಗೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಹೌದು. ಪಾಸಿಟಿವ್ ಪಾತ್ರದ ಮೂಲಕ ಹೆಸರು ಮಾಡಿದ್ದ ಸನ್ನಿಧಿ ವೈಷ್ಣವಿ ಇದೀಗ ವಿಲ್ಲನ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷಣ (Lakshana) ಧಾರವಾಹಿಯು ಅತ್ಯಂತ ಜನಪ್ರಿಯವಾಗಿದೆ. ಇದರಲ್ಲಿನ ಭೂಪತಿ ನಕ್ಷತ್ರ ಜೋಡಿ ಎಲ್ಲರಿಗೂ ಮೆಚ್ಚುಗೆಯಾಗಿದೆ. ಅಲ್ಲದೆ ಅಗ್ನಿಸಾಕ್ಷಿಯ ಅಂಜಲಿ ಪಾತ್ರಧಾರಿ ಈ ಧಾರಾವಾಹಿಯಲ್ಲಿ ಶ್ವೇತಾ ಪಾತ್ರವನ್ನು ಮಾಡುತ್ತಿದ್ದಾರೆ. ಇದೀಗ ವೈಷ್ಣವಿಯವರು ಈ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು ಭೂಪತಿಯ ಹೆಂಡತಿ ನಾನೇ, ಇನ್ನು ಮುಂದೆ ನೀನು ಭೂಪತಿ ಹೆಂಡತಿಯಲ್ಲ ಎಂದು ನಕ್ಷತ್ರಳಿಗೆ ಹೇಳುವ ಮೂಲಕ ವೈಷ್ಣವಿ ಧಾರವಾಹಿಗೆ ಭರ್ಜರಿ ಪ್ರವೇಶ ನೀಡಿದ್ದಾರೆ. ಇದನ್ನು ಕೇಳಿ ಬರಿ ಮನೆಯವರಿಗೆ ಮಾತ್ರವಲ್ಲದೆ ಸೀರಿಯಲ್ ನೋಡುವ ಪ್ರೇಕ್ಷಕರಿಗೂ ಅಚ್ಚರಿಯಾಗಿದೆ. ಇದೇ ಮೊದಲ ಬಾರಿ ವೈಷ್ಣವಿಯವರು ವಿಲನ್ ರೂಲ್ ನಲ್ಲಿ ಎಂಟ್ರಿ ಕೊಟ್ಟಿದ್ದು ಮಾತ್ರವಲ್ಲದೆ ಈ ರೀತಿಯಾಗಿ ನಕ್ಷತ್ರನ ಮನೆಯಿಂದ ಆಚೆ ದಬ್ಬಿದ್ದು ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾಡಿದೆ. ಖಡಕ್ಕಾಗಿ ಮನೆಯನ್ನು ಪ್ರವೇಶಿಸಿರುವ ನಟಿ ವೈಷ್ಣವಿ ಗೌಡ ಅವರು ಧಾರವಾಹಿಯಲ್ಲಿ ಕೂಡ ವೈಷ್ಣವಿ ಎನ್ನುವ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಮನೆಗೆ ಪ್ರವೇಶಿಸುವ ಅವರು ಭೂಪತಿ ಇನ್ನು ಮುಂದೆ ನನ್ನ ಗಂಡ ನೀನು ಇನ್ನು ಮುಂದೆ ಅವನ ಹೆಂಡತಿಯಲ್ಲ ಎಂದು ನಕ್ಷತ್ರಕ್ಕೆ ಹೇಳಿದ್ದಾಳೆ. ನಂತರ ಭೂಪತಿ ನನಗೆ ಮಾತು ಕೊಟ್ಟಿದ್ದಾನೆ, ಮದುವೆ ಆಗುತ್ತೇನೆ ಎಂದು ಅವನು ನನಗೆ ಹೇಳಿದ್ದ ಎಂದು ಹೇಳಿದ್ದಾರೆ. ಇದನ್ನು ಓದಿ.. Gandhadagudi: ಗಂಧದಗುಡಿ ನೋಡಿ ಭಾವುಕಳಾದ ಪುನೀತ್ ಪುತ್ರಿ, ಅಪ್ಪನನ್ನು ನೆನೆದು ಧೃತಿ ಮಾಡಿದ್ದೇನು? ಅಶ್ವಿನಿ ಪುನೀತ್ ಶಾಕ್

ಆಗ ಭೂಪತಿ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಕೇಳಿ ನಕ್ಷತ್ರ ಸೇರಿದಂತೆ ಮನೆಯವರೆಲ್ಲ ಶಾಕ್ ಆಗಿದ್ದಾರೆ. ವೈಷ್ಣವಿ ನಕ್ಷತ್ರಳನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಇನ್ನು ಮುಂದೆ ನಾನು ಈ ಮನೆಯ ಸೊಸೆ ಎಂದು ಹೇಳಿದ್ದಾಳೆ. ಹಾಗೆ ನಕ್ಷತ್ರ ವೈಷ್ಣವಿ ಕಾಲು ಹಿಡಿದು ನನ್ನ ಗಂಡನನ್ನು ನನಗೆ ಬಿಟ್ಟುಕೊಟ್ಟುಬಿಡು ಎಂದು ಹೇಳಿದ್ದಾಳೆ. ನಕ್ಷತ್ರ ಅಳುವನ್ನು ನೋಡಲಾಗದೆ ವೈಷ್ಣವಿ ತಾನು ಇಷ್ಟು ಹೊತ್ತು ಮಾಡಿದ್ದು ಫ್ರಾಂಕ್, ಭೂಪತಿ ಮತ್ತು ನಾನು ಇಬ್ಬರು ಮೊದಲಿನಿಂದಲೂ ಸ್ನೇಹಿತರು. ನಾವಿಬ್ಬರೂ ಬೇಕೆಂದೇ ಫ್ರಾಂಕ್ ಮಾಡಿದೆವು ಎಂದು ಹೇಳಿದ್ದಾಳೆ. ಈ ಮೂಲಕ ವೈಷ್ಣವಿಯವರು ವಿಲನ್ ರೋಲ್ ಮಾಡುತ್ತಿಲ್ಲ ಬದಲಾಗಿ ಭೂಪತಿಯ ಫ್ರೆಂಡ್ ಪಾತ್ರ ಮಾಡುತ್ತಿದ್ದಾರೆ ಎಂದು ತಿಳಿದಿದೆ. ಆದರೆ ಎಲ್ಲರಿಗೂ ಕುತೂಹಲ ಮೂಡಿಸಿರುವ ವಿಷಯವೆಂದರೆ ಸಾಕಷ್ಟು ವರ್ಷಗಳ ನಂತರ ಸೀರಿಯಲ್ ಗೆ ಎಂಟ್ರಿ ಕೊಟ್ಟಿರುವ ವೈಷ್ಣವಿಯವರು ಪಡೆದಿರುವ ಸಂಭಾವನೆ ಎಷ್ಟು ಎನ್ನುವುದು. ಸ್ನೇಹಿತರೆ ವೈಷ್ಣವಿಯವರು ಒಂದು ಎಪಿಸೋಡ್ ಗೆ 80,000 ಸಂಭಾವನೆ ಪಡೆದಿದ್ದಾರಂತೆ. ಹೌದು ಪ್ರತಿ ಎಪಿಸೋಡ್ಗು ಅವರು ಇಷ್ಟು ಸಂಭಾವನೆಯ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ.. ಸುಮ್ಮನೆ ಇರಲಾರದೆ ಇರುವೆ ಬಿಟ್ಕೊಂಡ್ರ ಅಮೂಲ್ಯ ಗೌಡ?? ಟ್ಯಾಟೂ ಹಿಂದಿರುವ ಗುಟ್ಟು ಏನು ಗೊತ್ತೇ?? ಇಂಟರ್ನೆಟ್ ಅನ್ನು ಶೇಕ್ ಮಾಡಿದ ಅಮೂಲ್ಯ.