Kannada Astrology: ಅಪ್ಪಿ ತಪ್ಪಿ ಕೂಡ ತುಳಸಿ ಗಿಡದ ಬಳಿ, ಈ ವಸ್ತುಗಳನ್ನು ಇಡಬೇಡಿ, ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ, ಯಾವ ವಸ್ತುಗಳನ್ನು ಇಡಬಾರದು ಗೊತ್ತೇ??

2,607

Kannada Astrology: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ (Tulasi Plant) ಪೂಜನೀಯ ಸ್ಥಾನ ನೀಡಲಾಗಿದೆ. ತುಳಸಿ ಗಿಡವನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಇದರ ಜೊತೆ ಜೊತೆಗೆ ತುಳಸಿಗೆ ಔಷಧಿಯ ಕೆಲವು ಗುಣಗಳಿವೆ. ದೈವಿಕ ಅಂಶಗಳ ಜೊತೆಗೆ ಔಷಧೀಯ ಅಂಶಗಳನ್ನು ತುಳಸಿ ಗಿಡ ಹೊಂದಿದೆ. ಹೀಗಾಗಿ ತುಳಸಿ ಗಿಡದ ಅಕ್ಕಪಕ್ಕ ಕೆಲವು ವಸ್ತುಗಳನ್ನು ಇಡುವುದರಿಂದಾಗಿ ಮನೆಯಲ್ಲಿ ಸಂತೋಷ ಹೋಗಿ ದುಃಖ ಉಂಟಾಗಬಹುದು. ಜನರನ್ನು ದುಃಖಿತರನ್ನಾಗಿ ಮಾಡಬಹುದು. ಹೀಗಾಗಿ ತುಳಸಿ ಗಿಡದ ಪಕ್ಕ ಯಾವೆಲ್ಲ ವಸ್ತುಗಳನ್ನು ಇಡಬಾರದು ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ. ಮನೆಯ ಮುಂದೆ ತುಳಸಿ ಗಿಡವನ್ನು ನೆಡುವುದು ಒಳ್ಳೆಯದು. ತುಳಸಿ ಗಿಡವನ್ನು ಬೆಳಗ್ಗೆ ಮತ್ತು ಸಂಜೆ ಪೂಜಿಸುವುದರಿಂದಾಗಿ ಒಳ್ಳೆಯ ಫಲಾಫಲಗಳು ದೊರೆಯುತ್ತವೆ. ಔಷಧೀಯ ಮತ್ತು ದೈವಿಕ ಅಂಶಗಳನ್ನು ಹೊಂದಿರುವ ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ತನ್ನದೇ ಆದ ಮಹತ್ವವಿದೆ. ದೇವರ ಪೂಜಾ ವೇಳೆಯಲ್ಲಿ ತುಳಸಿ ಎಲೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ.

ತುಳಸಿ ಗಿಡದಲ್ಲಿ ದೇವಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಐಶ್ವರ್ಯ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ತುಳಸಿ ಗಿಡದಲ್ಲಿ ವಾಸವಿರುತ್ತಾರೆ. ತುಳಸಿ ಗಿಡವನ್ನು ನೆಡುವುದರಿಂದ ಮತ್ತು ಪೂಜಿಸುವುದರಿಂದ ಲಕ್ಷ್ಮಿ ಒಲಿಯುತ್ತಾಳೆ. ಆದರೆ ಕೆಲವು ವಸ್ತುಗಳನ್ನು ತುಳಸಿ ಗಿಡದಲ್ಲಿ ಇಡುವುದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಹೀಗಾಗಿ ಯಾವೆಲ್ಲ ವಸ್ತುಗಳನ್ನು ತುಳಸಿ ಗಿಡದ ಬಳಿ ಯಾವುದೇ ಕಾರಣಕ್ಕೂ ಇಡಬಾರದು ಎಂಬುದರ ಬಗ್ಗೆ ತಿಳುವಳಿಕೆ ಇರಬೇಕು. ನಮಗೆ ತಿಳಿದು ತಿಳಿಯದೆಯೋ ತುಳಸಿ ಗಿಡದ ಬಳಿಯೇ ಪಾದರಕ್ಷೆ ಅಥವಾ ಚಪ್ಪಲಿಗಳನ್ನು ಬಿಡುತ್ತಿರುತ್ತೇವೆ. ಇದು ತಪ್ಪು. ತುಳಸಿ ಗಿಡ ಪೂಜೆಗೆ ಬಳಸಲಾಗುತ್ತದೆ, ಅಲ್ಲದೇ ಅಲ್ಲಿ ದೇವಿ ಲಕ್ಷ್ಮಿ ನೆಲೆಸಿದ್ದಾರೆ. ಅಲ್ಲಿ ಚಪ್ಪಲಿಗಳನ್ನು ಬಿಡುವುದು ಅಪಶಕುನ. ನಾವೇ ಲಕ್ಷ್ಮಿಗೆ ಅಪಮಾನ ಮಾಡಿದಂತೆ. ಹೀಗಾಗಿ ತುಳಸಿ ಗಿಡದ ಬಳಿ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಬಿಡಬೇಡಿ. ತುಳಸಿ ಗಿಡದ ಬಳಿ ಪೊರಕೆ ಇಡಬೇಡಿ. ಪೊರಕೆ ಮನೆಯನ್ನು ಸ್ವಚ್ಛಗೊಳಿಸುವ ಸಾಧನ. ಅಂತಹ ಪೊರಕೆಯನ್ನು ತುಳಸಿ ಗಿಡದ ಬಳಿ ಇಡಬಾರದು. ಹಾಗೆ ಇಟ್ಟರೆ ಮನೆಯಲ್ಲಿ ದಾರಿದ್ರ ನೆಲೆಸುತ್ತದೆ, ಬಡತನ ಆವರಿಸಿಕೊಳ್ಳುತ್ತದೆ. ಆಗ ದೇವಿ ಲಕ್ಷ್ಮಿ ಮನೆಯಲ್ಲಿ ಉಳಿಯುವುದಿಲ್ಲ.

ತುಳಸಿ ಗಿಡದ ಸುತ್ತ ಮುಳ್ಳುಗಳನ್ನು ನೆಡಬೇಡಿ ಅಥವಾ ಮುಳ್ಳಿನ ಸಸ್ಯಗಳನ್ನು ಅಕ್ಕಪಕ್ಕ ಬೆಳೆಸಬೇಡಿ. ಜ್ಯೋತಿಷ್ಯದ ಪ್ರಕಾರ ತುಳಸಿ ಗಿಡಕ್ಕೆ ದೈವಿಕ ಸ್ಥಾನಮಾನ ಇದೆ. ಹೀಗಿರುವಾಗ ಮುಳ್ಳು ಅಪಶಕುನದ ಸೂಚಕವಾಗಿದೆ. ಹಾಗಾಗಿ ಅಂತಹ ಗಿಡಗಳನ್ನು ನೆಡಬೇಡಿ. ತುಳಸಿ ಗಿಡದ ಸುತ್ತ ಮುಳ್ಳನ್ನು ಹಾಕಬೇಡಿ. ಹೀಗೆ ಮಾಡಿದರೆ ಮನೆಗೆ ಋಣಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ. ಹಲವಾರು ಸಮಸ್ಯೆಗಳು ಎದುರಾಗುವುದರ ಜೊತೆ ಜೊತೆಗೆ ಆರ್ಥಿಕವಾಗಿ ವೈಫಲ್ಯ ಕಾಣುವಿರಿ. ತುಳಸಿ ಗಿಡದ ಸುತ್ತಮುತ್ತ ಕಸ ಹಾಕಬಾರದು. ತುಳಸಿಯು ಲಕ್ಷ್ಮೀದೇವಿ ನೆಲೆಸಿರುವ ಸ್ಥಾನವಾಗಿದೆ. ಈಗಿರುವಾಗ ಅಲ್ಲಿ ಕಸ ಹಾಕುವುದರಿಂದ ತಾಯಿ ಲಕ್ಷ್ಮಿಗೆ ಕೋಪ ಬರಬಹುದು. ಕೆಲವರು ತಿಳಿದು ತಿಳಿಯದೆಯೋ ತುಳಸಿ ಗಿಡದ ಅಕ್ಕಪಕ್ಕ ಶಿವಲಿಂಗವನ್ನು ಇಡುತ್ತಾರೆ. ಆದರೆ ಇದು ತಪ್ಪು, ತುಳಸಿ ಗಿಡದ ಅಕ್ಕಪಕ್ಕ ಶಿವ ಪೂಜೆಗೆ ಸಂಬಂಧಿಸಿದ ಶಿವಲಿಂಗ ಅಥವಾ ಇತ್ಯಾದಿ ಶಿವನಿಗೆ ಸಂಬಂಧಿಸಿದ ಏನನ್ನು ಇಡಬಾರದು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತುಳಸಿ ಗಿಡದಲ್ಲಿ ಯಾವ ಯಾವ ವಸ್ತುಗಳನ್ನು ಇಡಬಾರದು ಎನ್ನುವುದನ್ನು ತಿಳಿದುಕೊಂಡರೆ, ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ತುಳಸಿ ಪೂಜೆ ಮಾಡುವುದರಿಂದ ತಾಯಿ ಲಕ್ಷ್ಮಿ ಮನೆಯಲ್ಲಿ ನೆಲೆಸಿರುತ್ತಾಳೆ. ಮನೆಯಲ್ಲಿ ನೆಮ್ಮದಿ, ಶಾಂತಿ ವಾತಾವರಣ ಸೃಷ್ಟಿಯಾಗುತ್ತದೆ.