T20 World Cup: ಮೊದಲ ಬಾರಿಗೆ ಫಾರ್ಮ್ ಕಂಡು ಕೊಂಡ ರಾಹುಲ್, ಪಂದ್ಯ ಮುಗಿದ ಬಳಿಕ ನೀಡಿದ ಷಾಕಿಂಗ್ ಹೇಳಿಕೆ ಏನು ಗೊತ್ತೆ??

848

T20 World Cup: ಇಷ್ಟು ದಿವಸಗಳ ಕಾಲ ಕಳಪೆ ಪ್ರದರ್ಶನದಿಂದ ಭಾರಿ ಟೀಕೆಗೆ ಒಳಗಾಗಿದ್ದ ಕರ್ನಾಟಕದ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ (KL Rahul) ಅವರು ಇಂದು ನಡೆದ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ವಿಶ್ವಕಪ್ ನಲ್ಲಿ ರಾಹುಲ್ ಅವರು ಆಡಿದ ಮೂರು ಪಂದ್ಯದಲ್ಲಿ ಒಂದಂಕಿಯ ಸ್ಕೋರ್ ಮಾಡಿ, ಬಹಳ ಬೇಗ ಔಟ್ ಆಗುತ್ತಿದ್ದರು. ರಾಹುಲ್ ಅವರ ಈ ಫಾರ್ಮ್ ಬಗ್ಗೆ ಭಾರಿ ಟೀಕೆಯಾಗಿತ್ತು. ಆರಂಭಿಕನಾಗಿ ರಾಹುಲ್ ಅವರನ್ನು ಕಳಿಸಬಾರದು ಎಂದೆಲ್ಲ ಕ್ರಿಕೆಟ್ ತಜ್ಞರು ಹೇಳಿದ್ದರು, ಆದರೆ ಮ್ಯಾನೇಜ್ಮೆಂಟ್ ಮತ್ತು ಕೋಚ್ ರಾಹುಲ್ ಅವರ ಮೇಲೆ ನಂಬಿಕೆ ಕಳೆದುಕೊಂಡಿರಲಿಲ್ಲ. ರಾಹುಲ್ ಅವರ ಮೇಲೆ ಭರವಸೆ ಇಟ್ಟು ಅವರಿಗೆ ಅವಕಾಶ ನೀಡುತ್ತಿದ್ದರು.

ಅದಕ್ಕೆ ತಕ್ಕ ಹಾಗೆ, ವೈಫಲ್ಯದ ಬಳಿಕ ಸತತ ಪರಿಶ್ರಮ ಪಟ್ಟು, ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಿದ್ದಾರೆ ರಾಹುಲ್. ರಾಹುಲ್ ದ್ರಾವಿಡ್ (Rahul Dravid) ಅವರು ಮತ್ತು ವಿರಾಟ್ ಕೋಹ್ಲಿ (Virat Kohli) ಅವರು ರಾಹುಲ್ ಅವರೊಡನೆ ಚರ್ಚಿಸಿ ಸಲಹೆ ನೀಡಿದ್ದರು, ಅವುಗಳನ್ನು ಅನುಸರಿಸಿದ ಕೆ.ಎಲ್.ರಾಹುಲ್ ಅವರು, ಇಂದು 31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು., ಇದರಲ್ಲಿ 4 ಸಿಕ್ಸರ್ ಮತ್ತು ಮೂರು ಬೌಂಡರಿ ಸೇರಿತ್ತು, ವಿರಾಟ್ ಕೋಹ್ಲಿ ಅವರೊಡನೆ ಉತ್ತಮ ಜೊತೆಯಾಟ ಸಹ ನಡೆಯಿತು. ಅರ್ಧಶತಕ ಪೂರ್ತಿಗೊಳಿಸಿದ ಬಳಿಕ ಕೆ.ಎಲ್.ರಾಹುಲ್ ಅವರು ಶಕೀಬ್ (Shakib Al Hasan) ಅವರ ಬೌಲಿಂಗ್ ನಲ್ಲಿ ಔಟ್ ಆದರು. ಇಂದಿನ ಪಂದ್ಯ ಮುಗಿದ ಬಳಿಕ ರಾಹುಲ್ ಅವರು ಮಾತನಾಡಿದ್ದು ಹೀಗೆ..

“ಇಂದಿನ ಇನ್ನಿಂಗ್ಸ್ ನನಗೆ ಮಿಶ್ರ ಅನುಭವ ನೀಡಿದೆ. ಇಲ್ಲಿಗೆ ಬರುವ ಮೊದಲು ಕೆಲವು ಇನ್ನಿಂಗ್ಸ್ ಆಡುವ ಅವಕಾಶ ಸಿಕ್ಕಿತ್ತು, ಮೊದಲ ಮೂರು ಪಂದ್ಯಗಳು ನನಗೆ ಸಹಕಾರಿಯಾಗಿ ನಡೆಯಲಿಲ್ಲ. ಈ ಮೊದಲು ನಾನು ಉತ್ತಮ ಪ್ರದರ್ಶನಗಳನ್ನು ನೀಡಿದ್ದ ಕಾರಣ, ಕಳೆದ ಮೂರು ಪಂದ್ಯಗಳು ಚೆನ್ನಾಗಿ ಆಗದೆ ಇದ್ದಾಗ ನಾನು ಚಿಂತೆಗೆ ಒಳಗಾಗಲಿಲ್ಲ. ಇಂದು ನಾನು ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಸಂತೋಷ ಇದೆ..” ಎಂದು ಹೇಳಿದ್ದಾರೆ ಕೆ.ಎಲ್.ರಾಹುಲ್. ಈ ಮೂಲಕ ತಾವು ಉತ್ತಮ ಇನ್ನಿಂಗ್ಸ್ ನೀಡಿರುವುದಕ್ಕೆ, ಸಂತೋಷವಾಗಿದ್ದಾರೆ.