ಮನೆಯ ಅದೊಂದು ಜಾಗದಲ್ಲಿ ಚಿಕ್ಕ ಬೆಳ್ಳಿಯನ್ನು ಇಟ್ಟರೆ, ನೀವು ಕೋಟ್ಯಧಿಪತಿಯ ಆಡುವುದನ್ನು ತಡೆಯಲು ಬ್ರಹ್ಮ ಬಂದರು ಸಾಧ್ಯವಿಲ್ಲ. ಎಲ್ಲಿ ಗೊತ್ತೇ??
ಕೆಲವು ಜನರಿಗೆ ಮಾಡಿದ ಕೆಲಸಕ್ಕೆ ಸರಿಯಾದ ಫಲಿತಾಂಶ ಪಡೆಯಲಾಗುವುದಿಲ್ಲ. ಎಷ್ಟೇ ಶ್ರಮವಹಿಸಿ ಆಸಕ್ತಿಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಿದರು ಅದಕ್ಕೆ ತಕ್ಕ ಪ್ರತಿಫಲ ದೊರೆಯುವುದೇ ಇಲ್ಲ. ಇದಕ್ಕಾಗಿ ಅವರು ಸಾಕಷ್ಟು ಯೋಚಿಸುತ್ತಾರೆ. ಒಳ್ಳೆಯ ಫಲಿತಾಂಶಕ್ಕಾಗಿ ಅವರು ಯಾವ ಯಾವ ದಾರಿಯನ್ನು ಹಿಡಿಯುತ್ತಾರೆ. ಹೋಮ, ಹವನ ಪೂಜೆ ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡಿದರು ಕೂಡ ಅವರಿಗೆ ಒಳ್ಳೆಯ ಫಲಿತಾಂಶ ಪ್ರಾಪ್ತಿಯಾಗುವುದೇ ಇಲ್ಲ. ಇದರಿಂದ ಅವರು ಚಿಂತಿತರಾಗಿರುತ್ತಾರೆ. ಆದರೆ ಇದೆಲ್ಲದಕ್ಕೂ ಕಾರಣ ನಕ್ಷತ್ರಪುಂಜ ಮತ್ತು ಗ್ರಹಗಳ ಚಲನೆ.
ಹೌದು, ಕೆಲವು ವ್ಯಕ್ತಿಗಳು ಯಾವ ಕೆಲಸ ಮಾಡಿದರೂ ಒಳ್ಳೆಯ ಫಲಿತಾಂಶ ಪಡೆಯದೇ ಇರುವುದಕ್ಕೆ ಕಾರಣ ಗ್ರಹಗಳ ಚಲನೆ ಮತ್ತು ನಕ್ಷತ್ರಪುಂಜಗಳೇ ಆಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಜನರಿಗೆ ಇಂತಹ ಪರಿಣಾಮಗಳು ಎದುರಾಗುತ್ತವೆ. ರಾಶಿ ಸಂಚಾರ, ಗ್ರಹ ಚಲನೆ ಮತ್ತು ನಕ್ಷತ್ರ ಪುಂಜಗಳಿಂದ ವ್ಯಕ್ತಿಯು ಯಶಸ್ಸನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇದಕ್ಕೆ ಪರಿಹಾರ ಲಾಲ್ ಕಿತಾಬ್ ನಲ್ಲಿ ಇದೆ. ಲಾಲ್ ಕಿತಾಬ್ ನ ಬೆಳ್ಳಿ ತುಂಡಿನ ಪರಿಹಾರದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಲಾಲ್ ಕಿತಾಬ್ ನಲ್ಲಿ ಸೂಚಿಸಿರುವ ಪರಿಹಾರಗಳಲ್ಲಿ ಒಂದು ಬೆಳ್ಳಿಯ ತುಂಡಿಗೆ ಸಂಬಂಧಿಸಿದೆ. ಹೌದು, ಬೆಳ್ಳಿ ತುಂಡಿನಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ಆರ್ಥಿಕ ಸ್ಥಿತಿಗತಿ ಸುಧಾರಿಸಲಿದೆ.

ಚೌಕಾಕಾರದಲ್ಲಿರುವ ಒಂದು ಬೆಳ್ಳಿ ತುಂಡನ್ನು ಹಣಕಾಸು, ಒಡವೆ ಇತ್ಯಾದಿ ಬೆಳೆಬಾಳುವ ವಸ್ತುಗಳನ್ನು ಇರಿಸುವ ಜಾಗಗಳಿಗೆ ಇಡುವುದರಿಂದ ಆರ್ಥಿಕ ಸಮಸ್ಯೆಗಳು ಸುಧಾರಿಸಲಿವೆ. ತಿಜೋರಿ, ಬೀರು, ಪೆಟ್ಟಿಗೆ ಇತ್ಯಾದಿ ಜಾಗಗಳಲ್ಲಿ ಚೌಕಾಕಾರದ ಬೆಳ್ಳಿ ತುಂಡನ್ನು ಇಡಬೇಕು. ಹಣಕಾಸನ್ನು ಇಡುವ ಬೀರು ಅಥವಾ ಇತ್ಯಾದಿ ಜಾಗಗಳಲ್ಲಿ ಈ ಬೆಳ್ಳಿ ತುಂಡನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಹಣ ಅನಗತ್ಯವಾಗಿ ಪೋಲಾಗುವುದಿಲ್ಲ. ಆರ್ಥಿಕ ಸ್ಥಿತಿಗತಿ ಉತ್ತಮವಾಗಿರಲಿದ್ದು, ಹಣಕಾಸಿನ ನೆರವು ಸೌಲಭ್ಯ ಸದಾ ಇರುತ್ತದೆ. ಬೆಳ್ಳಿಯ ತುಂಡನ್ನು ವ್ಯಕ್ತಿ ಜೇಬಿನಲ್ಲಿ ಇರಿಸಿಕೊಳ್ಳುವುದರಿಂದ ಆತ ಮಾಡಿದ ಕೆಲಸಕ್ಕೆ ಒಳ್ಳೆಯ ಫಲಿತಾಂಶ ಪಡೆಯುತ್ತಾನೆ. ಕರ್ಮಫಲಗಳನ್ನು ಯಥಾ ಪ್ರಕಾರ ಪಡೆಯುತ್ತಾನೆ ಎಂದು ನಂಬಲಾಗಿದೆ. ಆತನ ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸು ಸಿಗಲಿದ್ದು, ಆತ ಮಾಡಿದ ಪ್ರತಿ ಕೆಲಸದಲ್ಲೂ ಪ್ರಗತಿ ಸಾಧಿಸುತ್ತಾನೆ.