Gandhadagudi: ಗಂಧದಗುಡಿ ನೋಡಿ ಭಾವುಕಳಾದ ಪುನೀತ್ ಪುತ್ರಿ, ಅಪ್ಪನನ್ನು ನೆನೆದು ಧೃತಿ ಮಾಡಿದ್ದೇನು? ಅಶ್ವಿನಿ ಪುನೀತ್ ಶಾಕ್
Gandhadagudi: ಪುನೀತ್ (Puneeth Rajkumar) ಹಿರಿಯ ಮಗಳು ದೃತಿ (Dhriti Puneeth Rajkumar) ಗಂಧದಗುಡಿ ಚಿತ್ರವನ್ನು ನೋಡಿ ಅಚ್ಚರಿಯ ಪೋಸ್ಟ್ ಒಂದನ್ನು ಮಾಡಿದ್ದಾರೆ ಇದನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ ಧೃತಿ ವಿದೇಶದಲ್ಲಿ ಓದುತ್ತಿದ್ದು ಅಲ್ಲಿಯೇ ಉಳಿದುಕೊಂಡಿದ್ದಾರೆ ಇದೀಗ ಅಲ್ಲಿಂದಲೇ ಗಂಧದಗುಡಿ ಚಿತ್ರವನ್ನು ನೋಡಿರುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಚಿತ್ರ ಇತ್ತೀಚಿಗೆ ತೆರೆ ಕಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಚಿತ್ರವು ಒಂದು ಬಗೆಯ ಡಾಕ್ಯುಮೆಂಟರಿ ಆಗಿದ್ದು ಕರ್ನಾಟಕದ ಪ್ರಾಕೃತಿಕ ವೈಭವವನ್ನು (Karnataka Wildlife) ತೆರೆಯ ಮೇಲೆ ತೋರಿಸಲಾಗಿದೆ. ವನ್ಯಜೀವಿ ಸಂಪತ್ತು, ಪ್ರಾಣಿ ಸಂಪತ್ತು, ಪ್ರಾಣಿ, ಪಕ್ಷಿ ಪ್ರಕೃತಿ ಹೀಗೆ ಸಾಕಷ್ಟು ಅಂಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಕರ್ನಾಟಕದ ವಿವಿಧ ಪ್ರಾಕೃತಿಕ ಪರಂಪರೆಯ ಸ್ಥಳಗಳಿಗೆ ಭೇಟಿ ನೀಡಿರುವ ಪುನೀತ್ ಮತ್ತು ಚಿತ್ರತಂಡ ಅಲ್ಲಿನ ದೃಶ್ಯಗಳನ್ನು ಸೆರೆಹಿಡಿದು ನಮ್ಮ ಮುಂದೆ ತಂದಿಟ್ಟಿದ್ದಾರೆ. ಪುನೀತ್ ಅವರ ಕಣ್ಣಿನ ಮೂಲಕ ಇಡೀ ಕರ್ನಾಟಕ ಗಂಧದಗುಡಿಯ ವೈಭವ ಪ್ರೇಕ್ಷಕರಿಗೆ ಕಾಣುತ್ತದೆ. ಪುನೀತ್ ಅವರ ಹಿರಿಯ ಮಗಳು ಧೃತಿ ಚಿತ್ರವನ್ನು ನೋಡಿ ಅಪ್ಪನನ್ನು ನೆನೆದು ಒಂದು ಭಾವುಕ ಪೋಸ್ಟ್ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಒಂದು ವರ್ಷ ಕಳೆದಿದೆ. ಕೇವಲ ಅಭಿಮಾನಿಗಳಾಗಿ ಜನರಿಗೆ ಅವರ ಸಾವು ಅತೀವ ದುಃಖವನ್ನು ತಂದಿದೆ. ಅವರು ನೆನಪಾದಗಲೆಲ್ಲ ಸಾಕಷ್ಟು ನೋವಾಗುತ್ತದೆ, ಸಂಕಟವೆನಿಸುತ್ತದೆ. ಬರಿ ಅಭಿಮಾನಿಯಾಗಿ ಜನ ಸಾಕಷ್ಟು ದುಃಖ ಅನುಭವಿಸುತ್ತಿರುವುದಲ್ಲದೆ ಕೆಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಇಷ್ಟು ನೋವಿರುವಾಗ ಸ್ವಂತ ಕುಟುಂಬದವರಾಗಿ ಪುನೀತ್ ಅವರ ಅಗಲಿಕೆ ಅವರ ಮನೆಯವರಿಗೆ ಎಷ್ಟು ದುಃಖ ತರಿಸಬೇಡ. ಅದರಲ್ಲೂ ಧೃತಿ ಅವರಿಗೆ ಪುನೀತ್ ಎಂದರೆ ಪಂಚಪ್ರಾಣ. ತಂದೆಯ ಮೇಲೆ ದೃತೀಯವರಿಗೆ ಅಪಾರವಾದ ಪ್ರೀತಿ ಗೌರವವಿತ್ತು. ತನ್ನ ತಂದೆ ಎಂತಹ ದೊಡ್ಡ ವ್ಯಕ್ತಿ ಎನ್ನುವುದು ಅವರಿಗೆ ಸದಾ ಹೆಮ್ಮೆ ಪಡುವಂಥ ವಿಷಯವಾಗಿತ್ತು. ಆದರೆ ಆಕಾಲಿಕವಾಗಿ ತಂದೆಯನ್ನು ಕಳೆದುಕೊಂಡ ಅವರ ಕಷ್ಟ ಯಾರಿಗೂ ಬೇಡ. ಸದಾ ಅವರ ನೆನಪಿನಲ್ಲಿಯೇ ಇನ್ನೂ ಕೂಡ ನೊಂದುಕೊಳ್ಳುತ್ತಿರುತ್ತಾರೆ. ಸ್ಕಾಲರ್ಶಿಪ್ ಮೂಲಕ ವಿದೇಶದಲ್ಲಿ ತಮ್ಮ ಸ್ವಂತ ವಿದ್ಯಾರ್ಥಿ ವೇತನದಲ್ಲಿ ಧೃತಿಯವರು ವ್ಯಾಸಂಗ ಮಾಡುತ್ತಿದ್ದಾರೆ. ಅವರು ಪುನೀತ್ ಅವರ ಒಂದು ವರ್ಷದ ಪುಣ್ಯ ಸ್ಮರಣೆಗೆ ಬರಲಾಗಲಿಲ್ಲ. ಆದರೆ ಇದೀಗ ತಮ್ಮ ತಂದೆಯ ಡಾಕ್ಯುಮೆಂಟರಿ ಚಿತ್ರ ಗಂಧದಗುಡಿಯನ್ನು ಅವರು ನೋಡಿ ಒಂದು ಬಾವುಕ ಪೋಸ್ಟನ್ನು ಮಾಡಿದ್ದಾರೆ.
ತಂದೆಯನ್ನು ನೆನೆದು ಅವರು ಅಭಿಮಾನ ಮತ್ತು ನೋವು ಎರಡು ಭಾವನೆಗಳು ಅವರಿಗೆ ಒಟ್ಟೊಟ್ಟಿಗೆ ವ್ಯಕ್ತವಾಗಿವೆ. ಗಂಧದಗುಡಿ ಚಿತ್ರದಲ್ಲಿ ಪುನೀತ್ ಅವರು ಒಮ್ಮೆ “ನಾನು ಸೇಫ್ ಆಗಿ ಇದ್ದೀನಿ ಅಲ್ವಾ? ನನ್ನ ಹೆಂಡತಿ ಮಕ್ಕಳು ಮನೆಯಲ್ಲಿ ನನಗಾಗಿ ಕಾಯುತ್ತಿರುತ್ತಾರೆ. ನಾನು ವಾಪಸ್ ಹೋಗಬೇಕು” ಎಂದು ಹೇಳುತ್ತಾರೆ. ಈ ಒಂದು ಸಂಭಾಷಣೆ ನಿಜಕ್ಕೂ ಎಂಥವರನ್ನು ನೋವಿಗೆ ದೂಡುತ್ತದೆ. ತಂದೆಯ ಈ ಸಂಭಾಷಣೆ ಕೇಳಿ ಅವರು ಭಾವುಕರಾಗಿದ್ದಾರೆ. ತಂದೆಯನ್ನು ನಡೆದು ಪೋಸ್ಟ್ ಒಂದನ್ನು ಮಾಡಿ ಅವರನ್ನು ಸ್ಮರಿಸಿಕೊಂಡಿದ್ದಾರೆ.