ವಿಷ್ಣು ರವರು ಆಪ್ತ್ರಮಿತ್ರ ಮಾಡಿದ್ದೆ ತಪ್ಪಾಯಿತೇ? ಸಿನಿಮಾ ಮುಗಿದ ಬಳಿಕ ನಿಜಕೂ ಆಗಿದ್ದೇನು, ಅವಿನಾಶ್ ಹೇಳಿದ ಸತ್ಯ ಏನು ಗೊತ್ತೇ??

60

ಆಪ್ತಮಿತ್ರ ಮತ್ತು ಆಪ್ತರಕ್ಷಕ ಎರಡು ಚಲನಚಿತ್ರಗಳು ದೊಡ್ಡ ಮಟ್ಟದ ಸದ್ದು ಮಾಡಿದ ಚಿತ್ರಗಳಾಗಿವೆ. ಕನ್ನಡ ಚಿತ್ರರಂಗದಲ್ಲಿಯೇ ದೊಡ್ಡಮಟ್ಟದ ಹೆಸರು, ಹಣ ಗಳಿಸಿದ ಚಿತ್ರಗಳು. ಚಿತ್ರದ ಕಥೆ, ಹಾಡುಗಳು ಮೇಕಿಂಗ್ ಎಲ್ಲವೂ ಸೂಪರ್ ಹಿಟ್. ಈ ಚಿತ್ರದಲ್ಲಿ ನಟಿಸಿದ ಪ್ರತಿ ಕಲಾವಿದರಿಗೂ ದೊಡ್ಡ ಮಟ್ಟದ ಹೆಸರು ತಂದು ತಂದುಕೊಟ್ಟ ಚಿತ್ರಗಳಿವು. ಬರಿ ಹೆಸರು ಮಾತ್ರವಲ್ಲ ಸಾಕಷ್ಟು ಚರ್ಚೆ, ಭಯ ವಿವಾದಕ್ಕೂ ಕೂಡ ಈ ಚಿತ್ರಗಳು ಕಾರಣವಾಗಿದ್ದವು. ಆಪ್ತರಕ್ಷಕ ಚಿತ್ರವನ್ನು ದ್ವಾರಕೀಶ್ ಬ್ಯಾನರ್ ನಲ್ಲಿ ಮೂಡಿ ಬಂದ ಈ ಚಿತ್ರವನ್ನು ಸ್ವತಹ ದ್ವಾರಕೀಶ್ ರವರೆ ಅದ್ದೂರಿಯಾಗಿ ನಿರ್ಮಿಸಿದರು. ಪಿ ವಾಸು ಅವರು ಚಿತ್ರಕಥೆಯನ್ನು ಬರೆದು ಸಿನಿಮಾವನ್ನು ನಿರ್ದೇಶಸಿದರು. ಆಗಸ್ಟ್ 27 2018 ಈ ಚಿತ್ರವು ಭರ್ಜರಿಯಾಗಿ ತೆರೆಕಂಡಿತ್ತು. ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತ ನಿರ್ದೇಶನವಿದೆ.

ಮನೋ ವೈದ್ಯನ ಪಾತ್ರದಲ್ಲಿ ವಿಷ್ಣುವರ್ಧನ್, ಗಂಗಾ/ ನಾಗವಲ್ಲಿ ಪಾತ್ರದಲ್ಲಿ ಸೌಂದರ್ಯ, ಪತ್ನಿಯನ್ನು ಪ್ರೀತಿಸುವ ಪಾತ್ರದಲ್ಲಿ ರಮೇಶ್ ಅರವಿಂದ್, ಸೌಮ್ಯ ಪಾತ್ರದಲ್ಲಿ ಪ್ರೇಮ, ರಾಘವೇಂದ್ರ ಆಚಾರ್ಯರ ಪಾತ್ರದಲ್ಲಿ ಅವಿನಾಶ್ ರವರು ಕಾಣಿಸಿಕೊಂಡಿದ್ದರು. ಈ ಎಲ್ಲ ಕಲಾವಿದರು ಅವರವರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಲ್ಲದೆ ಪ್ರತಿ ಪಾತ್ರವು ದೊಡ್ಡ ಮಟ್ಟದ ಖ್ಯಾತಿ ಗಳಿಸಿತ್ತು. ಮೂಲ ಮಲಯಾಳಂ ಚಿತ್ರದ ರೀಮೇಕ್ ಚಿತ್ರವಾದ ಆಪ್ತಮಿತ್ರ ಬಿಡುಗಡೆಗೊಂಡ ನಂತರ ದೊಡ್ಡ ಮಟ್ಟದ ಹೆಸರು ಮಾಡಿದ್ದಲ್ಲದೆ ಚಂದ್ರಮುಖಿ ಹೆಸರಿನಲ್ಲಿ ತಮಿಳು ತೆಲುಗಿನಲ್ಲಿ ರೀಮೇಕ್ ಆಗಿ ತೆರೆಕಂಡಿತು. ಇದರ ಜೊತೆಗೆ ಹಿಂದಿಯಲ್ಲಿಯೂ ಕೂಡ ಇದು ರೀಮೇಕ್ ಆಗಿ ಯಶಸ್ವಿಯಾಯಿತು. 19 ಫೆಬ್ರವರಿ 20ರಂದು ಆಪ್ತಮಿತ್ರ ಚಿತ್ರದ ಮುಂದುವರಿದ ಭಾಗ ಆಪ್ತರಕ್ಷಕ ತೆರೆಕಂಡಿತು. ಆಪ್ತಮಿತ್ರದ ಯಶಸ್ಸಿನ ಆರು ವರ್ಷಗಳ ನಂತರ ಚಿತ್ರದ ಮುಂದುವರಿದ ಭಾಗವನ್ನು ಬಿಡುಗಡೆಗೊಳಿಸಲಾಯಿತು. ಆಪ್ತರಕ್ಷಕ ಚಿತ್ರ ಬಿಡುಗಡೆಯಾಗುವ ನಾಲ್ಕು ತಿಂಗಳ ಮೊದಲ ನಟಿ ಸೌಂದರ್ಯ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮರಣವನ್ನು ಅಪ್ಪಿದರು.

ಅದಾದ ನಂತರ ಎರಡು ತಿಂಗಳ ನಂತರ ಅಂದರೆ ಆಪ್ತರಕ್ಷಕ ಬಿಡುಗಡೆಯಾಗಲು ಇನ್ನೂ ಎರಡು ತಿಂಗಳು ಬಾಕಿ ಇರುವಾಗ ನಟ ವಿಷ್ಣುವರ್ಧನ್ ಅವರು ಹೃದಯಾಘಾತದಿಂದ ಮರಣವನ್ನಪ್ಪಿದರು. ಈ ಎರಡು ಘಟನೆಗಳಿಗೆ ನಾಗವಲ್ಲಿ ಲಿಂಕ್ ಬಳಸಿಕೊಂಡು ಈ ಚಿತ್ರ ಮಾಡಿದ್ದಕ್ಕೆ ಇವರು ಸಾವನ್ನಪ್ಪಿದ್ದರು ಎಂದು ಸುದ್ದಿ ಹಬ್ಬಿಸಲಾಗಿತ್ತು. ಚಿತ್ರದಲ್ಲಿ ಅಭಿನಯಿಸಿರುವವರಿಗೆ ಕೆಟ್ಟ ಕೆಟ್ಟ ಅನುಭವಗಳು ಆಗಿದ್ದವು ಎಂದು ಕೂಡ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಆದರೆ ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ಹಿರಿಯ ನಟ ಅವಿನಾಶ್ ರವರು ಚಿತ್ರದ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಅನುಭವಗಳನ್ನು ಅವರು ಹೀಗೆ ಹಂಚಿಕೊಂಡಿದ್ದಾರೆ – “ಇವೆಲ್ಲವೂ ಸುಳ್ಳು ಸುದ್ದಿ. ಚಿತ್ರಕ್ಕೂ ವಿಷ್ಣುವರ್ಧನ್ ಅಥವಾ ಸೌಂದರ್ಯ ಅವರ ಸಾವಿಗೂ ಯಾವ ಸಂಬಂಧವೂ ಇಲ್ಲ. ಇದು ಕೇವಲ ತಾಕತ್ತಾಳಿ ಅಷ್ಟೇ, ಇದುವರೆಗೆ ನನಗೆ ಚಿತ್ರದಿಂದ ಯಾವ ತೊಂದರೆಯೂ ಆಗಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ” ಎಂದು ಹೇಳಿದ್ದಾರೆ. ಇದರ ಜೊತೆ ಜೊತೆಗೆ ಜ್ಯೋತಿಷಿಗಳು ವಿಷ್ಣುವರ್ಧನ್ ಮತ್ತು ಸೌಂದರ್ಯ ರವರ ನಂತರ ಈ ಚಿತ್ರ ಮಾಡಿದ್ದಕ್ಕಾಗಿ ನೀವೇ ಸಾವನ್ನಪ್ಪುತ್ತಿರಿ ಎಂದು ಹೇಳಿದರಂತೆ. ಆದರೆ ಈ ಜ್ಯೋತಿಷ್ಯವನ್ನು ನಂಬದ ಅವಿನಾಶ್ ಅವರು ಅದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಶಾಂತಿ ಮಾಡಿಸಿ ಹೋಮ ಮಾಡಿಸಿ ಎಂದು ಸಾಕಷ್ಟು ಜನರು ಸಲಹೆ ನೀಡಿದ್ದರಂತೆ. ಇದ್ಯಾವುದನ್ನು ನಂಬದ ಅವಿನಾಶ್ ರವರು ತಮ್ಮ ಪಾಡಿಗೆ ತಾವು ಇದ್ದರು. “ಇದುವರೆಗೂ ನನಗೆ ಯಾವ ತೊಂದರೆಯೂ ಆಗಿಲ್ಲ, ಮೊದಲಿನಂತೆ ಆರಾಮವಾಗಿ ಓಡಾಡಿಕೊಂಡಿದ್ದೇನೆ. ಇಷ್ಟು ವರ್ಷಗಳಾದರೂ ಆ ಚಿತ್ರ ಮಾಡಿದ್ದಕ್ಕಾಗಿ ನಾನು ಯಾವ ಕೆಟ್ಟ ಪರಿಣಾಮವನ್ನು ಎದುರಿಸಿಲ್ಲ” ಎಂದು ಅವರು ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.