ಸುಮ್ಮನೆ ಇರಲಾರದೆ ಇರುವೆ ಬಿಟ್ಕೊಂಡ್ರ ಅಮೂಲ್ಯ ಗೌಡ?? ಟ್ಯಾಟೂ ಹಿಂದಿರುವ ಗುಟ್ಟು ಏನು ಗೊತ್ತೇ?? ಇಂಟರ್ನೆಟ್ ಅನ್ನು ಶೇಕ್ ಮಾಡಿದ ಅಮೂಲ್ಯ.
ಕನ್ನಡದ ಬಿಗ್ ಬಾಸ್ ಸೀಸನ್ ಒಂಬತ್ತು ಭರ್ಜರಿಯಾಗಿ ನಡೆಯುತ್ತಿದೆ. ಈ ಬಾರಿ ಪ್ರವೀಣರು ವರ್ಸಸ್ ನವೀನರು ಎಂಬ ಕಾನ್ಸೆಪ್ಟ್ ಅಡಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಮೊದಲು ಇದ್ದವರು ಹಾಗೂ ಬಿಗ್ ಬಾಸ್ ಮನೆ ಹೊಸತು, ಎನ್ನುವ ಹೊಸ ಸ್ಪರ್ಧಿಗಳನ್ನು ಸ್ಪರ್ಧಿಗಳ ನಡುವೆ ಹಣಹಣಿ ನಡೆಯುತ್ತಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಕಮಲಿ ಧಾರವಾಹಿ ಖ್ಯಾತಿಯ ನಟಿ ಅಮೂಲ್ಯ ಗೌಡ ಅವರು ಕೂಡ ಭಾಗವಹಿಸಿದ್ದಾರೆ. ತಮ್ಮ ನಗು, ಮಾತಿನ ಮೂಲಕವೇ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಅದ್ಭುತವಾಗಿ ಆಟ ಆಡುತ್ತಿದ್ದಾರೆ, ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಟ್ಯಾಟು ಕಾರಣಕ್ಕೆ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಅಮೂಲ್ಯ ಅವರ ಕೈ ಮೇಲೆ ಇರುವ ಟ್ಯಾಟೂ ಅರ್ಥ ಏನು ಎಂದು ರೂಪೇಶ್ ಶೆಟ್ಟಿ ಪ್ರಶ್ನಿಸಿದ್ದಾರೆ. ಅದಕ್ಕೆ ಅಮೂಲ್ಯ ಅವರು ಉತ್ತರಿಸಿದ್ದಾರೆ.
ಅಮೂಲ್ಯ ಗೌಡ ಅವರು ಈ ಮೊದಲು ಕಮಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆ ದಾರವಾಹಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದು ಕೊಟ್ಟಿತ್ತು. ಅದಕ್ಕೂ ಮೊದಲು ಅವರು ಜೀ ಕನ್ನಡದ ಯಾರಿಗುಂಟು ಯಾರಿಗಿಲ್ಲ ಎಂಬ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪ್ರವೇಶಿಸಿದರು. ಅದರ ನಂತರ ಅವರು ಉದಯ ವಾಹಿನಿಯ ಅರಮನೆ ಮತ್ತು ಜೀ ಕನ್ನಡದ ಪುನರ್ ವಿವಾಹ ಧಾರವಾಹಿಗಳಲ್ಲಿ ಕಾಣಿಸಿಕೊಂಡರು. ಆದರೆ ಅವರಿಗೆ ಕಮಲಿ ಧಾರಾವಾಹಿ ದೊಡ್ಡ ಮಟ್ಟದ ಜನಪ್ರಿಯತೆ ತಂದು ಕೊಟ್ಟಿತು. ಇದರ ಜೊತೆಜೊತೆಗೆ ಅವರು ತೆಲುಗು ನಂಬರ್ ಒನ್ ಧಾರವಾಹಿ ಆದ ಕಾರ್ತಿಕ ದೀಪಂ ಅಲ್ಲಿಯೂ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು. ಇದೀಗ ಅವರು ಬಿಗ್ ಬಾಸ್ ನಲ್ಲಿ ಎಲ್ಲರಿಗೂ ಮೋಡಿ ಮಾಡುತ್ತಿದ್ದಾರೆ. ಅಮೂಲ್ಯ ಮತ್ತು ರೂಪೇಶ್ ಶೆಟ್ಟಿ ಅವರು ಒಬ್ಬರಿಗೊಬ್ಬರು ಮಾತನಾಡುತ್ತಿರುವಾಗ ರೂಪೇಶ್ ಶೆಟ್ಟಿ ಅವರು ಅಮೂಲ್ಯ ಅವರ ಕೈಯ ಮೇಲಿರುವ ಟ್ಯಾಟು ಬಗ್ಗೆ ಪ್ರಶ್ನಿಸಿದ್ದಾರೆ.

ಇರಲಾರದೆ ಇರುವೆ ಬಿಟ್ಟುಕೊಳ್ಳುವುದು ಅಂತಾರಲ್ಲ ಆ ಮಾತನ್ನು ನೀವು ಕೇಳಿದ್ದೀರಾ ಎಂದು ಅಮೂಲ್ಯ ಪ್ರಶ್ನೆಸುತ್ತಾರೆ. ಅದಕ್ಕೆ ರೂಪೇಶ್, ಇದು ಇರುವೆನಾ ಇದು ಇರುವೆ ಅಲ್ಲ ಎಂದು ಹೇಳಿದ್ದಾರೆ. ಆಗ ಅಮೂಲ್ಯ ಇಲ್ಲ ಇದು ಇರುವೆ, ಇದರ ಹೆಸರು ಚಿಂಟು, ಪಿಂಟು, ಮಿಂಟು ಎಂದು ಹೇಳಿದ್ದಾರೆ. ಆಶ್ಚರ್ಯಗೊಂಡ ರೂಪೇಶ್ ಅವರು ಇದನ್ನು ಯಾರಾದರೂ ಇರುವೆ ಎಂದು ಒಪ್ಪಿಕೊಂಡರೆ ಅವರು ಯಾವ ಜಾಗದಲ್ಲಿ ಹೇಳುತ್ತಾರೋ ಅಲ್ಲಿಗೆ ಟ್ಯಾಟು ಹಾಕಿಸಿಕೊಳ್ಳುತ್ತೇನೆ ಎಂದು ಚಾಲೆಂಜ್ ಮಾಡಿದ್ದಾರೆ. ಇದನ್ನು ನೀವೇ ಡಿಸೈನ್ ಮಾಡಿ ಹೇಳಿ ಹಾಕಿಸಿಕೊಂಡಿರುವುದಾ ಎಂದು ಕೇಳಿದ್ದಕ್ಕೆ ಅಮೂಲ್ಯ ಅವರು ಟ್ಯಾಟು ಹಾಕುವವರು ಯಾವುದೋ ಜ್ಞಾನದಲ್ಲಿ ಏನೇನೋ ಮಾಡಿದ್ದಾರೆ, ಅದರ ಬಗ್ಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಇದನ್ನು ಕೇಳಿದ ರೂಪೇಶ್ ಅವರು ಈ ಟ್ಯಾಟು ಇರುವೆ ರೀತಿ ಇಲ್ಲ ಜೇಡ ಅಥವಾ ಚೇಳಿನ ರೀತಿ ಇದೆ ಎಂದು ಹೇಳುತ್ತಾರೆ. ಆಗ ಅಮೂಲ್ಯ ಅವರು ಇಲ್ಲ, ಇದು ಇರುವೆ ಟ್ಯಾಟೂನೇ. ಆದರೆ ಅದು ಮಲಗಿಕೊಂಡಿದೆ ಎಂದು ಫನ್ನಿ ಆಗಿ ಉತ್ತರಿಸಿದ್ದಾರೆ.