ಎಲ್ಲರೂ ಕಾಂತಾರ ಸಿನಿಮಾ ನೋಡಿ ಹೊಗಳುತ್ತಿರುವಾಗ ರಶ್ಮಿಕಾ ರವರು ಕೊಟ್ಟರು ಉಡಾಫೆ ಉತ್ತರ. ನಿಜಕ್ಕೂ ಇಂಗು ಇರ್ತಾರ?? ರಶ್ಮಿಕಾ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್.

100

ಕಾಂತಾರ ಸಿನಿಮಾ ಇಂದು ಅನೇಕ ದಾಖಲೆಗಳನ್ನು ಬರೆಯುತ್ತಿದೆ. ಕೆಜಿಎಫ್2 ಗಿಂತ ಹೆಚ್ಚು ಜನ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದಾರೆ ಎಂದು ಸ್ವತಃ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತಿಳಿಸಿದೆ. ದೇಶದ ಹಲವು ಸೆಲೆಬ್ರಿಟಿಗಳು ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ, ಸನ್ಮಾನ ಮಾಡಿ, ಗೋಲ್ಡ್ ಚೈನ್ ಗಿಫ್ಟ್ ಆಗಿ ನೀಡಿದರು. ಇನ್ನು ಶಿಲ್ಪಾ ಶೆಟ್ಟಿ ಅವರು ರಿಷಬ್ ಅವರಿಗೆ ಕರೆಮಾಡಿ ವಿಶ್ ಮಾಡಿದ್ದಾರೆ. ಟಾಲಿವುಡ್ ನ ಸೂಪರ್ ಸ್ಟಾರ್ ನಟ ಪ್ರಭಾಸ್ ಅವರು ಎರಡು ಸಾರಿ ಕಾಂತಾರ ನೋಡಿ ಫಿದಾ ಆಗಿದ್ದಾರೆ..

ನಟಿ ಅನುಷ್ಕಾ ಶೆಟ್ಟಿ, ನಟ ಧನುಷ್, ನಟ ಕಾರ್ತಿ, ಕನ್ನಡದ ಬಹುತೇಕ ಸೆಲೆಬ್ರಿಟಿಗಳು, ಬೇರೆ ಭಾಷೆಯ ನಟ ನಟಿಯರು, ನಿರ್ದೇಶಕರು ಎಲ್ಲರೂ ಕಾಂತಾರ ನೋಡಿ ಸಂತೋಷಪಟ್ಟು, ಥ್ರಿಲ್ ಆಗಿದ್ದಾರೆ. ಆದರೆ ಕನ್ನಡದವರೆ ಆದ ನಟಿ ರಶ್ಮಿಕಾ ಮಂದಣ್ಣ ಕಾಂತಾರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇತ್ತೀಚೆಗೆ ಇವರು ಮುಂಬೈನಲ್ಲಿ ಕಾಣಿಸಿಕೊಂಡಾಗ, ಪಾಪ್ಪಾರಾಜಿಗಳು ರಶ್ಮಿಕಾ ಅವರ ಫೋಟೋ ಕ್ಲಿಕ್ಕಿಸುತ್ತಾ, ಕಾಂತಾರ ಸಿನಿಮಾ ನೋಡಿದ್ರಾ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರವಾಗಿ, ‘ನೋಡಿಲ್ಲ..’ ಎಂದಿರುವ ರಶ್ಮಿಕಾ, ಬಳಿಕ, ‘ನೋಡುತ್ತೇನೆ.. ಬೆಂಗಳೂರಿಗೆ ಹೋದಮೇಲೆ ನೋಡುತ್ತೇನೆ..’ ಎಂದಿದ್ದಾರೆ. ಈ ಉತ್ತರ ಕೇಳಿ ನೆಟ್ಟಿಗರು ಇದೆಲ್ಲವೂ ಉಫಾಫೆ ಮಾತು ಎಂದಿದ್ದಾರೆ.

ರಶ್ಮಿಕಾ ಅವರಿಗೆ ನಟಿಸಲು ಮೊದಲ ಅವಕಾಶ ಕೊಟ್ಟಿದ್ದೆ ರಿಷಬ್ ಶೆಟ್ಟಿ ಅವರು, ತಮಗ ಅವಕಾಶ ಮತ್ತು ಸಕ್ಸಸ್ ಎರಡನ್ನು ಕೊಟ್ಟ ನಿರ್ದೇಶಕನನ್ನೇ ರಶ್ಮಿಕಾ ಮರೆತಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ. ಆದರೆ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಎಂಗೇಜ್ಮೆಂಟ್ ಮುರಿದುಕೊಂಡ ನಂತರ ರಶ್ಮಿಕಾ ಅವರು ಶೆಟ್ಟಿ ಗ್ಯಾಂಗ್ ಇಂದ ದೂರ ಉಳಿದಿರುವ ಕಾರಣ, ಸಿನಿಮಾ ನೋಡಿಲ್ಲದೆ ಇರಬಹುದು. ರಶ್ಮಿಕಾ ಶೆಟ್ಟಿ ಗ್ಯಾಂಗ್ ಅನ್ನು ತಮ್ಮ ವಿರೋಧಿಯಂತೆ ನೋಡುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದ್ದು. ಎಲ್ಲರೂ ಸಿನಿಮಾ ನೋಡಿ ಮೆಚ್ಚಿಕೊಂಡಿರುವಾಗ, ರಶ್ಮಿಕಾ ಮಂದಣ್ಣ ಅವರು, ಕರ್ನಾಟಕದವರಾಗಿ ಇನ್ನು ಕಾಂತಾರ ನೋಡದೆ ಇರುವುದು ಆಶ್ಚರ್ಯ ತರಿಸಿದೆ.