ಬಿಗ್ ನ್ಯೂಸ್: ಭಾರತಕ್ಕೆ ದಿನೇಶ್ ಕಾರ್ತಿಕ್ ಅಥವಾ ಪಂತ್, ಯಾರು ಬೇಕು ಎಂದಿದ್ದಕ್ಕೆ ಇದ್ದದನ್ನು ಇದ್ದ ಹಾಗೆ ಹೇಳಿದ ಕಪಿಲ್ ದೇವ್. ಯಾರು ಬೇಕಂತೆ ಗೊತ್ತೇ??

4,626

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆ ಆಯ್ಕೆ ಮಾಡಿದ ತಂಡದಲ್ಲಿ ಹಲವಾರು ಗೊಂದಲಗಳು ಇದ್ದವು. ಫಾರ್ಮ್ ಕಳೆದುಕೊಂಡಿದ್ದರು ಕೂಡ ಹಲವಾರು ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಇದರ ಜೊತೆಗೆ ಕೆಲವೊಂದು ಆಟಗಾರರಿಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಬಹುತೇಕ ಅನುಮಾನವಾಗಿದ್ದರೂ ಕೂಡ ಅವರನ್ನು ಆಯ್ಕೆ ಮಾಡಿ ಆಯ್ಕೆ ಸಮಿತಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಇನ್ನು ಹಲವಾರು ಆಟಗಾರರು ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡು ಕಳಪೆ ಪ್ರದರ್ಶನ ನೀಡುತ್ತಿದ್ದರು.

ಹೀಗೆ ವಿವಿಧ ಮಿಶ್ರ ಪ್ರತಿಕ್ರಿಯೆಗಳ ನಡುವೆ ಆಸ್ಟ್ರೇಲಿಯಾ ಗೆ ತೆರಳಿದ ಭಾರತ ಕ್ರಿಕೆಟ್ ತಂಡ ಮೊದಲ ಎರಡು ಪಂದ್ಯಗಳಲ್ಲಿ ಯಶಸ್ವಿಯಾಗಿ ಗೆಲುವು ದಾಖಲಿಸಿ ಮೂರನೇ ಪಂದ್ಯದಲ್ಲಿ ಸೋಲನ್ನು ಕಂಡಿದೆ, ಇವೆಲ್ಲ ತಿಳಿದಿರುವ ವಿಷಯವೇ. ಆದರೆ ವಿಶ್ವಕಪ್ ಟೂರ್ನಿಗೆ ತಂಡ ಆಯ್ಕೆಯಾದ ಕ್ಷಣದಿಂದಲೂ ಕೂಡ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಇಬ್ಬರಲ್ಲಿ ಯಾರು ಆಟವಾಡುವ 11 ರ ಬಳಗದಲ್ಲಿ ಸ್ಥಾನ ಪಡೆಯಬೇಕು ಹಾಗೂ ಯಾರು ವಿಕೆಟ್ ಕೀಪಿಂಗ್ ಮಾಡಬೇಕು ಎಂಬ ಪ್ರಶ್ನೆ ಇದೀಗಲೂ ಕೂಡ ಪ್ರಶ್ನೆಯಾಗಿಯೇ ಉಳಿದಿದೆ.

ಯಾಕೆಂದರೆ ದಿನೇಶ್ ಕಾರ್ತಿಕ್ ರವರು ಉತ್ತಮವಾಗಿ ಆಡುತ್ತಿಲ್ಲ ಇನ್ನು ರಿಷಬ್ ಪಂತ್ ರವರು ಹಲವಾರು ತಿಂಗಳುಗಳಿಂದ ಫಾರ್ಮ್ ಕಳೆದುಕೊಂಡಿದ್ದಾರೆ. ಇವರಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ರೋಹಿತ್ ಶರ್ಮಾ ರವರಿಗೆ ತಲೆ ನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ. ಈತನ್ಮದ್ಯೆ ನೆನ್ನೆಯ ಪಂದ್ಯ ಸೋಲುವ ಮುನ್ನವೇ ಕಪಿಲ್ ದೇವ್ ರವರು ಮಾತನಾಡಿದ್ದು ನಾಯಕ ರೋಹಿತ ಶರ್ಮ ಹಾಗೂ ದ್ರಾವಿಡ್ ಅವರಿಗೆ ಕಪಿಲ್ ಕಪಿಲ್ ದೇವ್ ರವರು ಸಲಹೆ ಒಂದನ್ನು ನೀಡಿದ್ದು ರಿಷಬ್ ಹಾಗೂ ದಿನೇಶ್ ಕಾರ್ತಿಕ್ ರವರ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಸಲಹೆ ನೀಡಿದ್ದಾರೆ.

ಹೌದು ಸ್ನೇಹಿತರೆ, ಇದೀಗ ಮಾತನಾಡಿರುವ ಕಪಿಲ್ ದೇವ್ ರವರು ಭಾರತ ಕ್ರಿಕೆಟ್ ತಂಡಕ್ಕೆ ದಿನೇಶ್ ಕಾರ್ತಿಕ್ ರವರ ಅಗತ್ಯಕ್ಕಿಂತ ಹೆಚ್ಚಾಗಿ ರಿಷಬ್ ಪಂತ್ ರವರ ಅಗತ್ಯ ಹೆಚ್ಚಾಗಿದೆ, ರಿಷಬ್ ಪಂತ್ ಇದೀಗ ಭಾರತಕ್ಕೆ ಹೆಚ್ಚು ಅಗತ್ಯವಾಗಿದ್ದಾರೆ, ದಿನೇಶ್ ಕಾರ್ತಿಕ್ ರವರು ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಆದರೆ ವೀಕೆಂಡ್ ಕೀಪಿಂಗ್ ನಲ್ಲೂ ಕೂಡ ಭಾರತ ಕ್ರಿಕೆಟ್ ತಂಡಕ್ಕೆ ಎಡಗೈ ಆಟಗಾರನ ಅವಶ್ಯಕತೆ ಇದೆ, ಆಗ ಮಾತ್ರ ತಂಡ ಸಂಪೂರ್ಣವಾಗಿ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಕಪಿಲ್ ದೇವ್ ರವರು ಹೇಳಿದ್ದಾರೆ