ಮುಂದೆ ಜೀವನದಲ್ಲಿ ಏನೂ ಮಾಡುತ್ತೀರಾ ಎಂದಾಗ ಪುನೀತ್ ರವರ ಮಗಳು ಕೊಟ್ಟ ಉತ್ತರ ಏನು ಗೊತ್ತೇ?? ಕಣ್ಣೀರು ಹಾಕಿದ ಅಶ್ವಿನಿ ಮೇಡಂ. ಯಾಕೆ ಗೊತ್ತೇ??
ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ಒಂದು ವರ್ಷ ಕಳೆದಿದೆ, ಬರಿ ನಟನೆ ಮಾತ್ರ ಅಲ್ಲದೆ ಸಮಾಜ ಸೇವೆ ಒಳ್ಳೆಯ ಕೆಲಸಗಳಿಂದ ಅವರು ಜನರ ಪ್ರೀತಿ ಗಳಿಸಿದವರು. ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಲ್ಲದೆ ಒಂದು ಕೈಯಲ್ಲಿ ಕೊಟ್ಟು ಮಾಡಿದ ದಾನ ಮತ್ತೊಂದು ಕೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ದಾನ ಧರ್ಮ ಮಾಡಿದ ಮಹಾನ್ ವ್ಯಕ್ತಿ. ಮಾಡಿದ ಒಳ್ಳೆಯ ಕೆಲಸಕ್ಕೆ ಪ್ರಚಾರ ಬಯಸಬಾರದು ಎಂಬ ರೀತಿಯಾಗಿ ಅವರು ಜೀವನವಿಡೀ ಬದುಕಿ ಹೋದವರು. ನಮ್ಮನೆಲ್ಲ ಬಿಟ್ಟು ಹೋದ ನಂತರ ಅವರಿಂದ ಸಹಾಯ ಪಡೆದ ಎಷ್ಟು ಜನರು ಆ ಸತ್ಯಗಳನ್ನೆಲ್ಲ ಹೇಳಿದಾಗ ಪುನೀತ್ ಇಂತಹ ದೊಡ್ಡ ಮನುಷ್ಯ ಎನ್ನುವುದು ಎಲ್ಲರಿಗೂ ಅರ್ಥವಾಯಿತು. ಹೇಗೆ ಬದುಕಬೇಕು ಎನ್ನುವುದನ್ನು ಅವರು ತಮ್ಮ ಕೆಲಸದ ಮೂಲಕ ತೋರಿಸಿ ಕೊಟ್ಟು ಹೋಗಿದ್ದಾರೆ ಎಂದು ಹೇಳಬಹುದು.
ಪುನೀತ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಧೃತಿ ಮತ್ತು ವಂದಿತ. ಇಬ್ಬರು ಹೆಣ್ಣು ಮಕ್ಕಳು ಕೂಡ ತಂದೆಯ ಹಾಗೆಯೇ ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದು ಓದಿನಲ್ಲಿ ಬಹಳ ಮುಂದಿದ್ದಾರೆ ಎಂದು ಹೇಳಬಹುದು. ಧೃತಿ ಮತ್ತು ವಂದಿತ ಇಬ್ಬರೂ ಕೂಡ ಒಳ್ಳೆಯ ಸಂಸ್ಕಾರ ಹೊಂದಿದ ಹೆಣ್ಣು ಮಕ್ಕಳಾಗಿದ್ದು ತಂದೆ ಮತ್ತು ತಾಯಿ ಹಾಗೂ ಇಡೀ ಕುಟುಂಬದವರನ್ನು ಬಹಳವಾಗಿ ಗೌರವಿಸುವ ಹೆಣ್ಣು ಮಕ್ಕಳಾಗಿದ್ದಾರೆ. ತಂದೆಯ ಹಾದಿಯಲ್ಲಿಯೇ ಇಬ್ಬರು ಹೆಣ್ಣು ಮಕ್ಕಳು ನಡೆಯುತ್ತಿದ್ದು ಸಾಮಾನ್ಯವಾಗಿ ಇಬ್ಬರೂ ಕೂಡ ಮಾಧ್ಯಮದವರ ಮುಂದೆ ಹೆಚ್ಚಿಗೆ ಕಾಣಿಸಿಕೊಂಡವರಲ್ಲ. ಅಶ್ವಿನಿ ಹಾಗೂ ಅವರ ಮಕ್ಕಳಾಗಲಿ ಮಾಧ್ಯಮದ ಮುಂದೆ ಬಂದವರಲ್ಲ. ಯಾವಾಗಲೂ ಪುನೀತ್ ಅವರು ತಮ್ಮ ನಟನ ಜೀವನ ತಮ್ಮ ಕುಟುಂಬದವರಿಗೆ, ಅವರ ಖಾಸಗಿ ತನಕ್ಕೆ ಧಕ್ಕೆ ತರಬಾರದು ಎಂದು ನಂಬಿದ್ದರು. ತಾವು ಎಷ್ಟೇ ದೊಡ್ಡ ನಟನಾಗಿದ್ದರೂ ಕೂಡ ತಮ್ಮ ಪತ್ನಿ ಮಕ್ಕಳಿಗೆ ತೊಂದರೆ ಆಗಬಾರದು, ಅವರ ಖಾಸಗಿತನಕ್ಕೆ ಧಕ್ಕೆ ಆಗಬಾರದು ಎಂದು ಅವರು ನಂಬಿದ್ದರು.

ಪುನೀತ್ ಅವರು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಹೆಂಡತಿ ಮಕ್ಕಳಿಗೆ ಸಮಯ ನೀಡುತ್ತಿದ್ದರು. ಪ್ರತಿ ವರ್ಷವೂ ಇಡೀ ಕುಟುಂಬ ಸಮೇತ ಅವರು ಹೊರಗೆಲ್ಲಾದರೂ ಪ್ರವಾಸಕ್ಕೆ ಹೋಗಿ ಬರುತ್ತಿದ್ದರು. ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ತಂದೆಯ ಗುಣವನ್ನು ಹೊಂದಿದ್ದಾರೆ. ಅಲ್ಲದೆ ಅವರ ಹಿರಿಯ ಮಗಳು ಧೃತಿ ಬಹಳ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಂಕ ಪಡೆದಿದ್ದು, ತಂದೆಯ ಹಣದಲ್ಲಿ ಓದದೇ ತಮ್ಮ ಬುದ್ಧಿವಂತಿಕೆಯಿಂದ ಸ್ಕಾಲರ್ಶಿಪ್ ಪರೀಕ್ಷೆ ಬರೆದು ಆ ವಿದ್ಯಾರ್ಥಿ ವೇತನದಲ್ಲಿ ಓದುತ್ತಿದ್ದಾರೆ. ಅದು ಸಹ ವಿದೇಶದಲ್ಲಿ, ತಮ್ಮ ಓದಿನ ಎಲ್ಲಾ ಖರ್ಚನ್ನು ತಮ್ಮ ಸ್ಕಾಲರ್ಶಿಪ್ ಮೂಲಕ ಪಡೆಯುತ್ತಾ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಹಿಂದೆ ರೋಟರಿ ಸಂಸ್ಥೆ ಹೈ ಡೊನೇಷನ್ ಕ್ಯಾಪ್ ನಲ್ಲೂ ಕೂಡ ಅವರು ಭಾಗವಹಿಸಿ ಶಿಬಿರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಜೊತೆಗೆ ತಂದೆಯಂತೆಯೇ ತಾನು ಬದುಕಬೇಕು, ಅವರ ಹಾಗೆ ಸಮಾಜಸೇವೆ ಮಾಡಬೇಕು ಎನ್ನುವುದು ದೃತೀಯವರ ಕನಸಂತೆ. ಇದನ್ನು ಕೇಳಿ ಅವರ ತಾಯಿ ಅಶ್ವಿನಿ ಪುನೀತ್ ಅವರು ಮಕ್ಕಳ ಗುಣ ನೋಡಿ ಕಣ್ಣೀರು ಹಾಕಿದ್ದಾರೆ.