ದೇಶವನ್ನೇ ಶೇಕ್ ಮಾಡಿದ ತೆಲುಗು ನಟನ ಪ್ರೇಮ ಕಥೆ; ಹಿರಿಯ ನಟ ಪ್ರೀತಿ ಮಾಡಿರುವ ಹುಡುಗಿ ವಯಸ್ಸು ಕೇಳಿದರೆ, ಮೈಂಡ್ ಬ್ಲಾಕ್ ಆಗುತ್ತದೆ.

3,952

ಯಾರಿಗೆ ಯಾರ ಮೇಲಾದರೂ ಪ್ರೀತಿಯಾಗಬಹುದು, ಆದರಲ್ಲೂ ಯಾವ ವಯಸ್ಸಿನಲ್ಲೂ ಬೇಕಾದರೂ ಆಗಬಹುದಾದ ಸಾಧ್ಯತೆ ಇದೆ ಎಂದು ಈ ಜೋಡಿ ನೋಡಿದರೆ ಅನಿಸದೆ ಇರದು. ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿನಂತೆ ಈ ನಟ ತಮಗಿಂತಲೂ 33 ವರ್ಷ ಕಡಿಮೆ ವಯಸ್ಸಿನ ಯುವತಿಯೊಂದಿಗೆ ಪ್ರೀತಿಯಾಗಿರುವುದರ ಕುರಿತು ಹೇಳಿದ್ದಾರೆ. ಬರೋಬ್ಬರಿ 56 ವರ್ಷಗಳಾಗಿರುವ ನಟ ಪೃಥ್ವಿರಾಜ್ ಅವರು ಇದೀಗ ತಮಗಿಂತಲೂ 33 ವರ್ಷ ಚಿಕ್ಕವಳಾದ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಸ್ವತ ಅವರೇ ಈ ವಿಷಯವನ್ನು ತಮ್ಮ instagram ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಹೌದು ನಟ ಪೃಥ್ವಿರಾಜ್ ಅವರು ತಮಗಿಂತಲೂ ಬಹಳ ಚಿಕ್ಕ ವಯಸ್ಸಿನ ಯುವತಿಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದು ಪ್ರೇಮಾಂಕುರವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಸೇರಿದ ಹಾಗೆ ವಿವಿಧ ಭಾಷೆಗಳಲ್ಲಿ ನಟ ಪೃಥ್ವಿರಾಜ್ ಅವರು ಅಭಿನಯಿಸಿದ್ದಾರೆ. ಇದೀಗ ಅವರು ತಮ್ಮ ಜಿಮ್ ಟ್ರೈನರ್ ಜೊತೆಗೆ ಪ್ರೀತಿಗೆ ಬಿದ್ದಿದ್ದಾರೆ. ತಮಗಿಂತಲೂ ಚಿಕ್ಕವರಾದ ಜಿಮ್ ಟ್ರೈನರ್ 23 ವರ್ಷದ ಶೀತಲ್ ಎಂಬ ಯುವತಿಯ ಮೇಲೆ ಅವರಿಗೆ ಪ್ರೀತಿಯಾಗಿದೆಯಂತೆ. ಇಬ್ಬರೂ ಕೂಡ ತುಂಬಾ ದಿನಗಳಿಂದ ಎಲ್ಲಾ ಕಡೆ ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಮೊದಲ ಬಾರಿಗೆ ಇವರಿಬ್ಬರ ಭೇಟಿ ಜಿಮ್ ನಲ್ಲಿಯೇ ಆಗಿತ್ತು. ಜಿಮ್ ಟ್ರೈನರ್ ಆಗಿದ್ದ ಶೀತಲ್ ಅವರೊಂದಿಗೆ ಮೊದಲಿಗೆ ಒಳ್ಳೆಯ ಸ್ನೇಹ ಸಂಪಾದಿಸಿದ ಪೃಥ್ವಿರಾಜ್ ಆನಂತರ ಇಬ್ಬರ ನಡುವೆ ಪರಸ್ಪರ ಅರ್ಥ ಮಾಡಿಕೊಳ್ಳುವ ಕಾರಣದಿಂದ ಇಬ್ಬರಿಗೂ ಪ್ರೀತಿ ಆಗಿದೆ.

ಇನ್ನು ಕೆಲವೇ ದಿನಗಳಲ್ಲಿ ಈ ಜೋಡಿ ಮದುವೆಯಾಗಲಿದೆ. ಪೃಥ್ವಿರಾಜ್ ಅವರು 1994 ರಲ್ಲಿ ದೀನಾ ಎಂಬುವರೊಂದಿಗೆ ಮದುವೆಯಾಗಿದ್ದರು. ಆರು ವರ್ಷಗಳ ಹಿಂದೆ ಈ ಜೋಡಿ ದೂರವಾಗಿತ್ತು. ಏಕಾಂಗಿಯಾಗಿ ಬದುಕುತ್ತಿದ್ದ ಪೃಥ್ವಿರಾಜ್ ರವರು ತಮಗೆ ಸರಿಹೊಂದುವ ಸಂಗಾತಿಗಾಗಿ ಕಾಯುತ್ತಿದ್ದರು. ಆ ಗುಣ ಶೀತಲ್ ಅವರಲ್ಲಿ ಕಂಡಿದೆ. ಹೀಗಾಗಿ ಪೃಥ್ವಿರಾಜ್ ರವರು ಅವರನ್ನು ಪ್ರೀತಿಸಿದ್ದಾರೆ, ವಯಸ್ಸಿಗೆ ಮನ್ನಣೆ ಕೊಡದೆ ಶೀತಲ್ ಅವರು ಪೃಥ್ವಿರಾಜ್ ಪ್ರೀತಿಯನ್ನು ಒಪ್ಪಿಕೊಂಡಿದ್ದು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇಬ್ಬರು ಮದುವೆಯಾಗಲಿದ್ದಾರೆ. ಇದೀಗ 33 ವರ್ಷ ವಯಸ್ಸಿನ ಅಂತರದ ಈ ಜೋಡಿಯ ಪ್ರೇಮ ಕಹಾನಿ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ.