ಚಿಂತೆ, ಸಂತೋಷ ಹೆಚ್ಚಿಸುತ್ತಿರುವ ಚಂದ್ರ ಗ್ರಹಣ. ಆ ನಾಲ್ಕು ರಾಶಿಗಳಿಗೆ ಮಾತ್ರ ಚಿನ್ನದಂತಹ ಕಾಲ ಬರಲಿದೆ, ಯಾವ ರಾಶಿಗಳಿಗೆ ಗೊತ್ತೇ??

7,423

ನವೆಂಬರ್ 8 2022 ರಂದು ಕಾರ್ತಿಕ ಮಾಸದಂದು ವರ್ಷದ ಕೊನೆಯ ಗ್ರಹಣ ಎರಡನೇ ಖಂಡಗ್ರಾಸ್ ಗ್ರಹಣ ಸಂಭವಿಸಲಿದೆ. ಈ ಗ್ರಹಣ ಜನರ ಮನಸ್ಸಿನಲ್ಲಿ ಆತಂಕ ಹೆಚ್ಚಿಸುತ್ತಿದೆ ಜೊತೆಗೆ 25 ಅಕ್ಟೋಬರ್ 2022 ರಂದು ಸಂಭವಿಸಿದ ಸೂರ್ಯಗ್ರಹಣದ 15 ದಿನಗಳ ನಂತರ ಸಂಭವಿಸುತ್ತಿದೆ. ಜ್ಯೋತಿಷ್ಯದ ಪ್ರಕಾರ 15 ದಿನಗಳಲ್ಲಿ ಎರಡು ಗ್ರಹಣಗಳು ಸಂಭವಿಸಿದರೆ ಅದು ಅಶುಭ ಮತ್ತು ಅನಿಷ್ಟ ಎಂದು ಪರಿಗಣಿಸಲಾಗುತ್ತದೆ. ಪ್ರಕೃತಿ ಮತ್ತು ಜನರು ಇದರ ಕೆಟ್ಟ ಪರಿಣಾಮವನ್ನು ಎದುರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜ್ಯೋತಿಷ್ಯದ ಪ್ರಕಾರ ಗ್ರಹಗಳ ನಡೆ ಮತ್ತು ಚಲನೆ ಎಲ್ಲಾ 12 ರಾಶಿಯ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಸೂರ್ಯಗ್ರಹಣವೇ ಆಗಿರಲಿ ಅಥವಾ ಚಂದ್ರಗ್ರಹಣವೇ ಆಗಿರಬಹುದು ಅದು ಜನರ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಗ್ರಹಣದ ನಂತರದ 30 ದಿನಗಳ ಅವಧಿ ಬಹಳ ಮುಖ್ಯವಾಗಿರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಈ ಬೆಳವಣಿಗೆಯಿಂದಾಗಿ ಯಾವೆಲ್ಲ ರಾಶಿಯವರ ಮೇಲೆ ಒಳ್ಳೆಯ ಪರಿಣಾಮ ಹಾಗೂ ಯಾವ ರಾಶಿಯ ಜನರ ಮೇಲೆ ಅಶುಭ ಫಲಗಳು, ಕೆಟ್ಟ ಪರಿಣಾಮ ಬೀರಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಜ್ಯೋತಿಷ್ಯದ ಪ್ರಕಾರ ನವೆಂಬರ್ 8ರಂದು ಸಂಭವಿಸುತ್ತಿರುವ ಈ ಗ್ರಹಣವು ಕೆಳಗಿನ 4 ರಾಶಿಯವರ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ಮಿಥುನ, ಕರ್ಕ, ವೃಶ್ಚಿಕ, ಕುಂಭ ಈ ನಾಲ್ಕು ರಾಶಿಯವರಿಗೆ ಈ ಗ್ರಹಣವು ಪ್ರಯೋಜನವಾಗಲಿದ್ದು ಅದೃಷ್ಟಗಳನ್ನು ಹೊತ್ತು ತರಲಿದೆ. ಇದರ ಜೊತೆ ಜೊತೆಗೆ ಕೆಳಗಿನ ನಾಲ್ಕು ರಾಶಿಗಳಿಗೆ ತೊಂದರೆ ಎದುರಾಗಲಿದೆ. ಮೇಷ, ವೃಷಭ, ಕನ್ಯಾ, ಮಕರ ಈ ರಾಶಿಯವರಿಗೆ ಅಶುಭ ಫಲಗಳು ದೊರೆಯಲ್ಲಿವೆ. ಇದಲ್ಲದೆ ಉಳಿದ ನಾಲ್ಕು ರಾಶಿಗಳಿಗೆ ಗ್ರಹಗಳ ಪರಿಣಾಮ ಸಾಧಾರಣವಾಗಿರಲಿದೆ.

ನವೆಂಬರ್ 8ರ ಕಾರ್ತಿಕ ಮಾಸದಂದು ಈ ವರ್ಷದ ಕೊನೆಯ ಗ್ರಹಣ ಜರುಗಲಿದೆ. ಚಂದ್ರ ಗ್ರಹಣದ ಆರಂಭ ಸಂಜೆ 5:35 ಕ್ಕೆ ಅಗಲಿದ್ದು ಇದರ ಮಧ್ಯ ಭಾಗವೂ 6.19ಕ್ಕೆ, ಜೊತೆಗೆ ಗ್ರಹಣದ ಮೋಕ್ಷವು 7.26 ಕ್ಕೇ ಸಂಭವಿಸಲಿದೆ. ಈ ಗ್ರಹಣದ ಸೂತಕ ಅವಧಿಯು ಗ್ರಹಣದಕ್ಕೂ 12 ಗಂಟೆ ಮೊದಲು ಆರಂಭವಾಗಿ ಬೆಳಿಗ್ಗೆ 05.53 ರಿಂದ ಶುರುವಾಗಿ ಮಾರನೇ ದಿನ ಮುಂಜಾನೆ 7 ರವರೆಗೂ ಇರಲಿದೆ. ಈ ವರ್ಷದ ಕೊನೆಯ ಚಂದ್ರಗ್ರಹಣವು ಭಾರತವು ಸೇರಿದ ಹಾಗೆ ಅಟ್ಲಾಂಟಿಕ್, ಫೆಸಿಫಿಕ್, ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಏಷ್ಯಾ, ದಕ್ಷಿಣ ಯುರೋಪ್, ಉತ್ತರ ಯುರೋಪ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ.