ಇದ್ದಕ್ಕಿದ್ದ ಹಾಗೆ ಲೈವ್ ಗೆ ಬಂದ ಮೇಘನ್ ರಾಜ್, ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತೇ?? ಅಪ್ಪು ಫ್ಯಾನ್ಸ್ ಗೆ ಸಿಹಿ ಸುದ್ದಿ.
ಪುನೀತ್ ರಾಜಕುಮಾರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವರ ಚಿತ್ರಗಳ ಮೂಲಕ, ಅವರ ಬದುಕಿನ ರೀತಿಯ ಮೂಲಕ ಎಲ್ಲರಿಗೂ ಒಂದು ದೊಡ್ಡ ಆದರ್ಶವಾದವರು. ಪುನೀತ್ ಅವರು ತಮ್ಮ ಚಿತ್ರದ ಕ್ವಾಲಿಟಿ ವಿಷಯದಲ್ಲಿ ಅವರು ಯಾವ ಹಂತದಲ್ಲೂ ರಾಜಿಯಾಗುತ್ತಿರಲಿಲ್ಲ. ಚಿತ್ರ ನೋಡಲು ಬಂದ ಪ್ರೇಕ್ಷಕರು ಕೊಟ್ಟ ಕಾಸಿಗೆ ಯಾವತ್ತೂ ಮೋಸ ಆಗಬಾರದು, ಪ್ರತಿಯೊಬ್ಬರು ಖುಷಿಯಿಂದ ಸಿನಿಮಾ ನೋಡಿ ಹೋಗಬೇಕು ಅಂತ ಬಯಸುತ್ತಿದ್ದ ದೊಡ್ಡ ಮನಸ್ಸು ಅವರದ್ದು. ಫಸ್ಟ್ ಡೇ ಫಸ್ಟ್ ಶೋ ಕನ್ನಡ ಸಿನಿಮಾ ನೋಡಿ ಸ್ಟಾರ್-ವಾರು ಯಾಕೆ ನಾವು ಒಂದೇ ಇಲ್ಲಿ ಎಂದು ಹಾಡಿದ ವ್ಯಕ್ತಿ ಅವರು. ಇದೀಗ ನಟಿ ಮೇಘನಾ ರಾಜ್ ಅವರು ಪುನೀತ್ ಅವರ ಬಗ್ಗೆ ಮಾತನಾಡಿದ್ದಾರೆ.
ಎಲ್ಲರೂ ಚೆನ್ನಾಗಿರಬೇಕು, ಖುಷಿಯಿಂದ ಇರಬೇಕು. ದುಡಿಬೇಕು, ದುಡ್ಡು ಸಂಪಾದಿಸಬೇಕು. ಸಾಧ್ಯವಾದರೆ ಒಂದಿಷ್ಟು ಜನರಿಗೆ ಸಹಾಯ ಮಾಡಬೇಕು ಎಂದು ಯಾವಾಗಲೂ ಹೇಳುತ್ತಿದ್ದರು. ಪುನೀತ್ ನಾನು ನನ್ನ ಮನಸ್ಸಾರೆ ಯಾವಾಗಲೂ ಒಬ್ಬರಿಗೆ ಒಳ್ಳೆಯದನ್ನೇ ಬಯಸುತ್ತೀನಿ ಅಂತ ಬರಿ ಹೇಳಿದ್ದು ಮಾತ್ರವಲ್ಲ ಹಾಗೆಯೇ ಬದುಕಿದ್ದರು. ಪುನೀತ್ ಅವರ ಒಳ್ಳೆಯತನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಒಬ್ಬ ನಟನಾಗಿ ಮಾತ್ರವಲ್ಲ ಒಬ್ಬ ಪರಿಪೂರ್ಣ ಮನುಷ್ಯನಾಗಿ ಅವರು ಎಂದೆಂದಿಗೂ ಎಲ್ಲರಿಗೂ ಪ್ರೇರಣೆಯಾಗುತ್ತಾರೆ. ಇವರನ್ನು ಇಷ್ಟಪಡದ ವ್ಯಕ್ತಿಯೇ ಇಲ್ಲವೇನೋ. ಅಂತಹ ಅದ್ಭುತ ಸರಳತೆಯ ಸಾಮ್ರಾಟ ಪುನೀತ್ ಆಗಿದ್ದರು. ಇಂದು ನಟಿ ಮೇಘನಾ ರಾಜ್ ರವರು ಪುನೀತ್ ಅವರನ್ನು ನೆನೆದಿದ್ದಾರೆ. ಜೊತೆಗೆ ಅವರ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ.

ವಿಡಿಯೋ ಮುಖಾಂತರ ಮಾತನಾಡಿರುವ ಅವರು ಪುನೀತ್ ಅವರ ಕುರಿತಾಗಿ ಕೆಲವು ಪ್ರಶಂಸೆಯ ಮಾತುಗಳನ್ನು ಹೇಳಿದ್ದಾರೆ. ನಟರು ತಮ್ಮ ಅಭಿಮಾನಿಗಳಿಗೆ ನೀಡಬಹುದಾದ ದೊಡ್ಡ ಉಡುಗೊರೆ ಎಂದರೆ ಅದು ಅರ್ಥಪೂರ್ಣವಾದ ಸಿನಿಮಾಗಳನ್ನು ಅಭಿಮಾನಿಗಳಿಗೆ ನೀಡುವುದು. ಹೌದು ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವುದು ಒಬ್ಬ ಕಲಾವಿದ ನೀಡಬಹುದಾದ ಅತಿ ದೊಡ್ಡ ಉಡುಗೊರೆಯಾಗಿದೆ. ಪುನೀತ್ ಅಂತಹ ಚಿತ್ರಗಳನ್ನು ನೀಡಿದ್ದಾರೆ. ಅವರೊಬ್ಬರು ಅದ್ಭುತ ವ್ಯಕ್ತಿ, ಅವರ ಬದುಕನ್ನ ನಾವೆಲ್ಲರೂ ಅನುಸರಿಸಬೇಕು. ಅವರು ಅತ್ಯಂತ ಅರ್ಥಪೂರ್ಣ ಚಿತ್ರಗಳನ್ನು ನಮಗೆ ನೀಡಿ ಹೋಗಿದ್ದಾರೆ. ಅವರ ಎಲ್ಲ ಚಿತ್ರಗಳನ್ನು ನೋಡುವುದೇ ಒಂದು ಹಬ್ಬ. ಪಕ್ಕ ಕ್ಲಾಸಿಕ್ ಸಿನಿಮಾಗಳನ್ನು ಅಪ್ಪು ಅವರು ನೀಡಿದ್ದಾರೆ. ಅವುಗಳಲ್ಲಿ ಅಪ್ಪು, ಆಕಾಶ್, ಮೌರ್ಯ, ಅಭಿ, ನಮ್ಮ ಬಸವ ಚಿತ್ರಗಳು ಸೇರಿವೆ. ಇದೀಗ ಈ ಚಿತ್ರಗಳನ್ನು ವೂಟ್ ಸೆಲೆಕ್ಟ್ ಅಲ್ಲಿ ಅಪ್ಲೋಡ್ ಮಾಡಲಾಗಿದೆ. ಎಲ್ಲರೂ ನೋಡಿ ಎಂದು ಅವರು ಕೇಳಿಕೊಂಡಿದ್ದಾರೆ. ಕೊನೆಯಲ್ಲಿ ಅವರು ಅಪ್ಪು ನೀವು ಸದಾ ಚಿರಂಜೀವಿ ಎಂದು ಹೇಳಿದ್ದಾರೆ.