ಕಾರ್ಯಕ್ರಮಕ್ಕೆ ಬರದೇ ಹೋದರೂ ಗಂಧದ ಗುಡಿ ಸಿನಿಮಾ ನೋಡಿ ದರ್ಶನ್ ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತೇ??

53

ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾದ ಗಂಧದಗುಡಿ ಚಿತ್ರವು ನಿನ್ನೆ ಕರ್ನಾಟಕದ ರಾಜ್ಯಾದ್ಯಂತ ತೆರೆಕಂಡಿದೆ. ಒಂದು ಬಗೆಯ ಡಾಕ್ಯುಮೆಂಟರಿ ಚಿತ್ರವಾದ ಗಂಧದಗುಡಿಯಲ್ಲಿ ಕರ್ನಾಟಕದ ಪ್ರಾಕೃತಿಕ ಸೊಬಗನ್ನು ಸೆರೆಹಿಡಿಯಲಾಗಿದೆ. ಕರ್ನಾಟಕದ ವಿವಿಧ ಅರಣ್ಯ, ಕಾಡು, ಬೆಟ್ಟ ಗುಡ್ಡ, ತೊರೆ ಜಲಪಾತ, ವನ್ಯಜೀವಿಧಾಮ ಮತ್ತು ಅಲ್ಲಿನ ಪ್ರಾಣಿ ಪಕ್ಷಿಗಳನ್ನು ಈ ಚಿತ್ರದ ಮೂಲಕ ಕಣ್ತುಂಬಿಕೊಳ್ಳಬಹುದು. ಕರ್ನಾಟಕದ ಪ್ರಕೃತಿ ವೈಭವ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ. ಇಡೀ ಚಿತ್ರದಲ್ಲಿ ಪುನೀತ್ ಸ್ವತಹ ಪುನೀತಾಗಿ ಒಬ್ಬ ಸಾಮಾನ್ಯ ಮನುಷ್ಯನ ಹಾಗೆ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಅವರ ಕಣ್ಣಿನ ಮೂಲಕ ಕಂಡ ಕರ್ನಾಟಕದ ಚೆಲುವನ್ನು ಪ್ರತಿ ಪ್ರೇಕ್ಷಕನ ಮುಂದೆ ತಂದಿದ್ದಾರೆ. ಇದೀಗ ಚಿತ್ರ ನೋಡಿ ನಟ ದರ್ಶನ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಸುಮಾರು ಒಂದು ವರ್ಷಗಳಿಗಿಂತ ಹೆಚ್ಚು ಕಾಲ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಸುತ್ತಾಡಿ ಅಲ್ಲಿನ ಪ್ರತಿ ಅನುಭವವನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಅಮೋಘವರ್ಷ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಚಿತ್ರವಿಡಿ ಪುನೀತ್ ಅವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಎಲ್ಲರೊಂದಿಗೆ ಬೆರೆತು ಒಡನಾಡಿದ್ದಾರೆ. ಈ ಚಿತ್ರದ ಮೂಲಕ ಅವರ ವ್ಯಕ್ತಿತ್ವ ನಮಗೆ ಇನ್ನಷ್ಟು ಹೆಚ್ಚು ಪರಿಚಯವಾಗುತ್ತದೆ. ಪುನೀತ್ ಅವರು ಕಂಡ ದೃಶ್ಯ ವೈಭವವನ್ನು ಅದ್ಬುತವಾಗಿ ತೆರೆ ಮೇಲೆ ಕಟ್ಟಿ ಕೊಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಇಂತಹದೊಂದು ಚಿತ್ರವನ್ನು ನೀಡಿದಕ್ಕಾಗಿ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು ಎಂದು ಚಿತ್ರ ನೋಡಿದ ಪ್ರತಿಯೊಬ್ಬರು ಹೇಳುತ್ತಿದ್ದಾರೆ.

ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳು ಈ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಇಡೀ ಮನೆ ಮಂದಿ ನಿಮ್ಮ ಮಕ್ಕಳೊಂದಿಗೆ ಬಂದು ಚಿತ್ರವನ್ನು ನೋಡಿ, ಈ ಚಿತ್ರದಿಂದ ಕಲಿಯುವಂತದ್ದು ಸಾಕಷ್ಟು ಇದೆ ಎಂದು ಹೇಳುತ್ತಿದ್ದಾರೆ. ಇದೀಗ ಚಿತ್ರ ನೋಡಿದ ನಂತರ ಪುನೀತ್ ಅವರ ಸ್ನೇಹಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಚಿತ್ರವನ್ನು ಮೆಚ್ಚಿಕೊಂಡು ಅಭಿಮಾನದಿಂದ ಮಾತನಾಡಿದ್ದಾರೆ. ದರ್ಶನ್ ರವರಿಗೂ ಕೂಡ ಪ್ರಾಣಿ-ಪಕ್ಷಿಗಳೆಂದರೆ ಅಚ್ಚು ಮೆಚ್ಚು. ಚಿತ್ರದಲ್ಲಿನ ಈ ಎಲ್ಲಾ ಅಂಶಗಳು ಅವರಿಗೆ ಬಹಳ ಇಷ್ಟವಾಗಿದೆ. ಪುನೀತ್ ಅವರ ಸರಳತೆ, ಮುಗ್ಧತೆ ಅವರ ದೊಡ್ಡತನವನ್ನು ದರ್ಶನ್ ರವರು ಕೊಂಡಾಡಿದ್ದಾರೆ. “ಚಿತ್ರದಲ್ಲಿ ಪುನೀತ್ ಅವರು ಸಾಕಷ್ಟು ಸಲ ನಾನು ಸೇಫ್ ಆಗಿ ಇದ್ದೀನಿ ಅಲ್ವಾ ಅಂತ ಕೇಳುತ್ತಿರುತ್ತಾರೆ, ಈಗ ಅದನ್ನು ನೆನಪಿಸಿಕೊಂಡರೆ ಬಹಳ ನೋವಾಗುತ್ತದೆ. ಚಿತ್ರ ನೋಡಿ ನಾನು ಮೂಕ ವಿಸ್ಮಿತನಾದೆ. ಈ ಚಿತ್ರ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ. ಈ ಚಿತ್ರವನ್ನು ನೆನಪಿಸಿಕೊಂಡರೆ ನನಗೆ ಈಗಲೂ ಅಳು ಬರುತ್ತದೆ, ದುಃಖವಾಗುತ್ತದೆ” ಎಂದು ದರ್ಶನ್ ಪ್ರತಿಕ್ರಿಯಿಸಿದ್ದಾರೆ. ನೆನ್ನೆ ತೆರೆಕಂಡ ಗಂಧದಗುಡಿ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸಾಕಷ್ಟು ದಾಖಲೆಗಳನ್ನು ಬರೆಯುವ ನಿರೀಕ್ಷೆ ಮೂಡಿಸಿದೆ.