ಲಕ್ಷಾಂತರ ಜನರಿಗೆ ಸಮಾಧಿ ಬಳಿ ಅಪ್ಪು ನೆನಪಿನಲ್ಲಿ ನಡೆಯುತ್ತಿದೆ ಅನ್ನಸಂತರ್ಪಣೆ. ಇದಕೆಲ್ಲ ದುಡ್ಡು ಕೊಡುತ್ತಿರುವುದು ಯಾರು ಗೊತ್ತೇ??

105

ಇಂದು ಪುನೀತ್ ಅವರು ನಮ್ಮನ್ನೆಲ್ಲ ಅಗಲಿ ಸರಿಯಾಗಿ ಒಂದು ವರ್ಷ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅವರ ಒಂದು ವರ್ಷದ ಪುಣ್ಯ ಸ್ಮರಣೆ ನಡೆಯುತ್ತಿದ್ದು ನೆನ್ನೆ ರಾತ್ರಿಯಿಂದಲೇ ಸಾಗರೋಪಾದಿಯಲ್ಲಿ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅಪ್ಪುವಿನ ದರ್ಶನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರವೇ ಜಮಾಹಿಸಿದೆ. ನೆಚ್ಚಿನ ನಟನ ನೆನಪಿನಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ಅಪ್ಪು ನೆನೆದು ಭಾವುಕರಾಗುತ್ತಿದ್ದಾರೆ, ಕಣ್ಣೀರು ಹಾಕುತ್ತಿದ್ದಾರೆ. ನಮ್ಮನ್ನೆಲ್ಲಾ ಯಾಕೆ ಬಿಟ್ಟು ಹೋದಿರಿ ಎಂದು ಅಭಿಮಾನಿಗಳು ಮುಗ್ಧವಾಗಿ ಕಣ್ಣೀರಿಡುತ್ತಾ ಕೇಳುತ್ತಿರುವ ಘಟನೆಗಳು ಕಂಡು ಬರುತ್ತಿವೆ. ಅಪ್ಪು ದರ್ಶನಕ್ಕೆ ಬರುವ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಎಲ್ಲರೂ ಮೆಚ್ಚಿಕೊಳ್ಳುವಂತೆ ಆದರ್ಶವಾಗಿ ಬದುಕು ಸಾಗಿಸಿದವರು ಪುನೀತ್ ರಾಜಕುಮಾರ್. ಅವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷವೇ ಕಳೆದರೂ ಕೂಡ ಅವರ ನೆನಪು ಇನ್ನೂ ಮಾಸಿಲ್ಲ. ಅಷ್ಟರಮಟ್ಟಿಗೆ ಅವರು ಬದುಕಿ ಹೋದವರು. ಯಾವ ಕಾರ್ಯಕ್ರಮವೇ ಇರಲಿ, ಸಮಾರಂಭವೇ ಇರಲಿ ಅವರನ್ನು ನೆನೆಯದ ಘಳಿಗೆ ಇಲ್ಲ. ಇದೀಗ ಅವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆದಿದೆ. ಅವರ ಪುಣ್ಯ ಸ್ಮರಣೆ ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಲಕ್ಷಾಂತರ ಅಭಿಮಾನಿಗಳು ಅಪ್ಪು ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಅಪ್ಪು ದರ್ಶನಕ್ಕೆ ಆಗಮಿಸುತ್ತಿರುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬ ಅಭಿಮಾನಿಯೂ ಹಸಿದುಕೊಂಡು ಇರಬಾರದು ಎನ್ನುವ ಕಾರಣಕ್ಕಾಗಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತಿದೆ.

ಆದರೆ ಲಕ್ಷಾಂತರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡುವುದು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ಹಣ, ಸಮಯ, ಶ್ರಮ ಖರ್ಚಾಗುತ್ತದೆ. ಹೀಗಾಗಿ ಅನ್ನ ಸಂತರ್ಪಣೆ ನಡೆಸುತ್ತಿರುವವರು ಯಾರು ಎನ್ನುವ ಕುತೂಹಲ ವ್ಯಕ್ತವಾಗಿದೆ. ಹೌದು ಅಪ್ಪು ಸ್ಮರಣೆಯಲ್ಲಿ ಅವರ ದರ್ಶನಕ್ಕಾಗಿ ಆಗಮಿಸುತ್ತಿರುವ ಪ್ರತಿ ಅಭಿಮಾನಿಗಳಿಗೂ ಊಟದ ವ್ಯವಸ್ಥೆಯ ಖರ್ಚನ್ನು ಅಭಿಮಾನಿಗಳೇ ನೋಡಿಕೊಳ್ಳುತ್ತಿದ್ದಾರೆ. ಪುನೀತ್ ಅವರ ಧರ್ಮಪತ್ನಿ ಅಶ್ವಿನಿ ರವರು ಈ ಕಾರ್ಯಕ್ರಮದ ಪೂರ್ತಿ ಖರ್ಚನ್ನು ತಾವೇ ಬರಿಸುವುದಾಗಿ ಹೇಳಿದ್ದರಂತೆ, ಅಲ್ಲದೆ ಶಿವರಾಜ್ ಕುಮಾರ್ ಅವರು ಸಹ ಅನ್ನಸಂತರ್ಪಣೆಯ ಖರ್ಚನ್ನು ತಾವೇ ವಹಿಸಿಕೊಳ್ಳುವುದಾಗಿ ಹೇಳಿದ್ದರಂತೆ. ಆದರೆ ಅಭಿಮಾನಿಗಳು ಇದಕ್ಕೆ ಒಪ್ಪದೆ ಪುನೀತ್ ಅವರ ಅಭಿಮಾನಿಗಳಾಗಿ ಅವರ ದರ್ಶನಕ್ಕೆ ಬರುವ ಜನರಿಗೆ ಅನ್ನ ಸಂತರ್ಪಣೆಯ ಎಲ್ಲ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆಂದು ಅಭಿಮಾನಿಗಳೇ ಪೂರ್ತಿ ಖರ್ಚನ್ನು ವಹಿಸಿಕೊಂಡಿದ್ದಾರೆ.