ಸುಲಭವಾಗಿ ಎರಡನೇ ಪಂದ್ಯ ಗೆದ್ದ ಮೇಲೆ ಕೂಡ ರೋಹಿತ್ ಶರ್ಮ ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೇ??
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವು ಗೆಲುವಿನ ನಾಗಾಲೋಟವನ್ನು ಆರಂಭಿಸಿದೆ. ನೆನ್ನೆ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. 56 ರನ್ ರೋಚಕ ವಿಜಯ ಸಾಧಿಸುವ ಮೂಲಕ ಭಾರತ ತಂಡವು ಪಾಯಿಂಟ್ ಟೇಬಲ್ ನಲ್ಲೂ ಕೂಡ ಅಗ್ರಸ್ಥಾನಕ್ಕೆ ಏರಿದೆ. ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ತಂಡದ ನಾಯಕ ರೋಹಿತ್ ಶರ್ಮ ಅವರು ಕೆಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ.
“ನಾವು ತಂಡದ ಎದುರಾಳಿಯ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ನಮ್ಮ ತಂಡದ ಬಗ್ಗೆ ಗಮನಹರಿಸುತ್ತೇವೆ. ನಾವು ಎಲ್ಲಿ ಬದಲಾಗಬೇಕು ಯಾವ ವಿಷಯದಲ್ಲಿ ಬಲಿಷ್ಠವಾಗಬೇಕು ಎನ್ನುವುದರ ಕುರಿತು ಯೋಚಿಸುತ್ತೇವೆ. ನಾವು ಹೀಗಾಗಿ ನಿಧಾನಕ್ಕೆ ಆಡಿದೆವು. ನಾನು ಮತ್ತು ವಿರಾಟ್ ಕೊಹ್ಲಿಯವರು ಹೇಗೆ ಆಡಬೇಕು ಎನ್ನುವುದನ್ನು ಸರಿಯಾಗಿ ಯೋಚಿಸಿ ಕಣಕ್ಕಿಳಿದೆವು. ನಾನು ಅರ್ಧ ಶತಕ ಗಳಿಸಿದಾಗಲೂ ನನಗೆ ಖುಷಿಯಾಗಿರಲಿಲ್ಲ. ಕೇವಲ ಪಂದ್ಯದ ಕೊನೆಯಲ್ಲಿ ಆ ರನ್ ಗಳಿಕೆ ನಮಗೆ ಖುಷಿ, ಸಮಾಧಾನವನ್ನು ತರುವಂತಿರಬೇಕು” ಎಂದು ಹೇಳಿದ್ದಾರೆ.

“ಈ ಗೆಲುವು ನಮಗೆ ಬಹಳ ಮುಖ್ಯವಾಗಿತ್ತು. ಜೊತೆಗೆ ಈ ಪಂದ್ಯವನ್ನು ಗೆಲ್ಲಲು ನಮಗೆ ಬಹಳ ಕಾಲಾವಕಾಶವಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ನೇರವಾಗಿ ಸಿಡ್ನಿಗೆ ಬಂದಿಳಿದೆವು. ಈ ಗೆಲುವು ನಮಗೆ ನೆನಪಿನಲ್ಲಿ ಉಳಿಯುತ್ತದೆ. ಆಟಗಾರರಿಗೆ ಮೊದಲ ಎರಡು ಗೆಲುವು ಬಹಳ ಮುಖ್ಯವಾಗಿರುತ್ತದೆ. ನೆದರ್ಲ್ಯಾಂಡ್ ತಂಡವು ಅರ್ಹತೆ ಸುತ್ತಿನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿ ಸೂಪರ್ 12 ಸ್ಥಾನದಲ್ಲಿ ಕ್ವಾಲಿಫಿಯರ್ ಆಗಿತ್ತು. ನಿಜಕ್ಕೂ ಆ ತಂಡವು ಬಲಿಷ್ಠವಾಗಿದೆ. ಅವರಿಗೂ ಕೂಡ ಕ್ರೆಡಿಟ್ ಸಲ್ಲಬೇಕು” ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಶುರು ಮಾಡಿದ ಭಾರತ ತಂಡವು ಆರಂಭದಲ್ಲಿ ಆಘಾತ ಎದುರಿಸಬೇಕಾಗಿತ್ತು. ಶುರುವಿನಲ್ಲೇ 9 ರನ್ ಗಳಿಸಿ ಕೆಎಲ್ ರಾಹುಲ್ ಔಟ್ ಆದರು. ನಂತರ ತಂಡವನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮುನ್ನಡೆಸಿದರು. ರೋಹಿತ್ ಶರ್ಮಾ ಔಟಾದ ನಂತರ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿ ಅವರ ಜೊತೆಗೂಡಿ ರೋಚಕ ಪ್ರದರ್ಶನ ತೋರಿದರು. ಅಂತಿಮವಾಗಿ ಭಾರತ ತಂಡವು 20 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 179 ರನ್ ಕಲೆ ಹಾಕಿದ್ದು, ಅಂತಿಮವಾಗಿ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ ತಂಡವು ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಕೊನೆಗೆ ಭಾರತ ತಂಡವು ಭರ್ಜರಿ ಗೆಲುವು ದಾಖಲಿಸಿತು. ಸೂರ್ಯ ಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.