ಇಡೀ ವಿಶ್ವವೇ ತಲೆಬಾಗಿರುವ ಕಾಂತಾರ ಬಗ್ಗೆ ಟೀಕೆ ಮಾಡಿದ ಖ್ಯಾತ ನಿರ್ದೇಶಕ . ಹೇಳಿದ್ದೇನು ಗೊತ್ತೇ?? ಸಿನಿಮಾದಲ್ಲಿ ಈತ ಕಂಡದ್ದು ಏನು ಅಂತೇ ಗೊತ್ತೇ??
ಕಾಂತಾರ ದೊಡ್ಡ ಮಟ್ಟದ ಹೆಸರು ಮಾಡಿದೆ. ಚಿತ್ರ ನೋಡಿದ ಪ್ರತಿ ಪ್ರೇಕ್ಷಕ ವರ್ಗವು ಕಾಂತಾರಕ್ಕೆ ತಲೆದೂಗುತ್ತಿದೆ. ಇಷ್ಟು ಮಾತ್ರವಲ್ಲ ಭಾರತೀಯ ಚಿತ್ರರಂಗದ ಸಿನಿ ದಿಗ್ಗಜರು ಕಾಂತಾರದ ಮೋಡಿಗೆ ಮಾರು ಹೋಗಿದ್ದಾರೆ. ಕನ್ನಡದ ಸಿನಿ ಸೆಲೆಬ್ರಿಟಿಗಳು ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಅದೆಷ್ಟೋ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಕಾಂತಾರ ಸಿನಿಮಾದ ಶ್ರೀಮಂತಿಕೆಗೆ ಶಭಾಷ್ ಹೇಳಿದ್ದಾರೆ. ಪ್ರಭಾಸ್, ಧನುಷ್, ಪೃಥ್ವಿರಾಜ್ ಸುಕುಮಾರನ್, ಕಾರ್ತಿ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ, ರಾಜಮೌಳಿ, ಕಂಗನಾ ರಣಾವತ್, ರಜನಿಕಾಂತ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಮೆಚ್ಚಿಕೊಳ್ಳುತ್ತಿರುವ ಚಿತ್ರದ ಬಗ್ಗೆ ಇದೀಗ ಅಚ್ಚರಿಯಾಗುವಂತೆ ನಿರ್ದೇಶಕ ಅಭಿರೂಪ್ ಬಸು ಅವರು ಪ್ರತಿಕ್ರಿಯಿಸಿದ್ದಾರೆ. ಚಿತ್ರ ನೋಡಿದ ಬಳಿಕ ಸಂದರ್ಶನ ಒಂದರಲ್ಲಿ ಹೇಳಿಕೆ ನೀಡಿರುವ ಅವರು ಚಿತ್ರದ ಬಗ್ಗೆ ಸಾಕಷ್ಟು ತಕರಾರು ತೆಗೆದಿದ್ದಾರೆ. ಎಲ್ಲರೂ ಮೆಚ್ಚಿಕೊಂಡಷ್ಟು ಚಿತ್ರ ಚೆನ್ನಾಗಿಲ್ಲ, ಸಾಕಷ್ಟು ಬಿಲ್ಡಪ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂದರ್ಶನ ಒಂದರಲ್ಲಿ ಕಾಂತಾರ ಚಿತ್ರದ ಬಗ್ಗೆ ಮಾತನಾಡಿರುವ ಅಭಿರೂಪ್ ಬಸು ಅವರು ಚಿತ್ರದ ಬಗ್ಗೆ ಸಾಕಷ್ಟು ತಕರಾರು ತೆಗೆದಿದ್ದಾರೆ. ಜನರ ಬುದ್ಧಿವಂತಿಕೆಯನ್ನು ಅಣಕಿಸುವ ರೀತಿ ಈ ಚಿತ್ರ ನನಗೆ ತೋರುತ್ತದೆ. ಚಿತ್ರವನ್ನು ಕಳಪೆಯಾಗಿ ಮಾಡಲಾಗಿದೆ ಹಾಗೂ ಈ ಚಿತ್ರದಲ್ಲಿ ಯಾವುದೇ ಪ್ರಗತಿಪರ ವಿಚಾರಗಳು ನನಗೆ ಕಾಣ ಸಿಗುವುದಿಲ್ಲ. ಕಥೆಯಲ್ಲಿನ ತಿರುವುಗಳು ಅಪ್ರಮಾಣಿಕವಾಗಿವೆ. ಇಡೀ ಚಿತ್ರ ಒಂದು ರೀತಿಯ ಗಿಮಿಕ್ ಆಗಿ ನನಗೆ ಕಾಣಿಸುತ್ತದೆ. ಹೀರೋ ಪಾತ್ರ ಕೊನೆಯಲ್ಲಿ ಒಳ್ಳೆಯವನಾಗಿ ಬದಲಾಗುವುದು ನನಗೆ ಚೂರು ಇಷ್ಟವಾಗಲಿಲ್ಲ, ಅಲ್ಲದೆ ಎಲ್ಲರೂ ಹಾಡಿ ಹೊಗಳುತ್ತಿರುವ ಅದ್ದೂರಿ ಅದ್ಬುತ ಎಂದು ಕೊಂಡಾಡುತ್ತಿರುವ ಕ್ಲೈಮ್ಯಾಕ್ಸ್ ದೃಶ್ಯವನ್ನು ನೋಡುವಾಗ ನನಗೆ ಚೂರು ಆಸಕ್ತಿ ಉಳಿದಿರಲಿಲ್ಲ ಎಂದು ಅವರು ಆಶ್ಚರ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾಂತಾರ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿದ ಬಳಿಕ ನಿರ್ದೇಶಕ ಅಭಿರೂಪ್ ಬಸು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. ಪೌರಾಣಿಕ ಕಥೆಗಳಿಗೂ ವೈಜ್ಞಾನಿಕ ಪುರಾವೆಗಳನ್ನು ಹುಡುಕುವ ಈ ಕಾಲದಲ್ಲಿ ಕಾಂತಾರ ನನಗೆ ಹಾಸ್ಯಾಸ್ಪದವಾಗಿ ಕಾಣುತ್ತದೆ ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಜನ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಬಸು ತಮ್ಮ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮತ್ತೆ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಇತ್ತೀಚಿಗೆ ಕಾಂತಾರ ಚಿತ್ರದ ವರಹ ರೂಪಂ ಗೀತೆಯನ್ನು ನವರಸಂ ಗೀತೆಯ ಟ್ಯೂನ್ ನಿಂದ ಕದಿಯಲಾಗಿದೆ ಎಂಬ ಆರೋಪವು ಕೇಳಿಬಂದಿತ್ತು. ಏನೇ ಆಗಲಿ ಕಾಂತಾರ ಚಿತ್ರವು ಫ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದೊಡ್ಡ ಮಟ್ಟದ ಗಳಿಕೆ ಕಾಣುತ್ತಿದೆ.