ಡಾನ್ಸ್ ನಲ್ಲಿ ರಾಜ, ಮನಸಿನಲ್ಲಿ ಮಹಾ ರಾಜ: ಆದರೂ ವಿನೋದ್ ರಾಜ್ ರವರನ್ನು ಯಾವುದೇ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಕರೆತರಲ್ಲ ಯಾಕೆ ಗೊತ್ತೇ??

1,105

ಹಿರಿಯ ನಟಿ ಲೀಲಾವತಿಯವರ ಮಗ ವಿನೋದ್ ರಾಜ್ ಅವರು ಒಂದು ಕಾಲದ ಪ್ರಖ್ಯಾತ ನಟರಾಗಿದ್ದವರು. ಆದರೆ ಇದೀಗ ಚಿತ್ರರಂಗದಿಂದ ದೂರ ದೂರ ಉಳಿದಿರುವ ಅವರು ಬೆಂಗಳೂರಿನ ಸೋಲದೇವನಹಳ್ಳಿ ಎಂಬಲ್ಲಿ ಕೃಷಿ ಕೆಲಸ ಮಾಡಿಕೊಂಡು ತಮ್ಮದೇ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ತಾಯಿಯ ಜೊತೆಗೆ ಜೀವನ ನಡೆಸುತ್ತಿದ್ದಾರೆ. ಹೀಗಾಗಲೇ ಲೀಲಾವತಿಯವರಿಗೆ ಸಾಕಷ್ಟು ವಯಸ್ಸಾಗಿದ್ದು ಇತ್ತೀಚಿಗೆ ಅವರ ಆರೋಗ್ಯವು ಹದಗಿಟ್ಟಿದೆ. ತಾಯಿಯ ಆರೈಕೆ ಮಾಡುತ್ತ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ವಿನೋದ್ ರಾಜ್ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಎಷ್ಟೇ ಕಷ್ಟವಿದ್ದರೂ ಕೂಡ ಈ ಕುಟುಂಬ ದಾನ ಧರ್ಮದಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಚೆನ್ನೈನಲ್ಲಿದ್ದ ತಮ್ಮ ಜಮೀನನ್ನು ಮಾರಿ ಇವರು ಸೋಲದೇವನಹಳ್ಳಿ ಎಂಬಲ್ಲಿ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಇತ್ತೀಚಿಗಷ್ಟೇ ಈ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದ್ದರು.

ವಿನೋದ್ ವಿನೋದ್ ರಾಜ್ ಅವರು ಒಂದು ಕಾಲದ ಜನಪ್ರಿಯ ನಟರಾಗಿದ್ದವರು. ತಾಯಿಯ ಹಾಗೆಯೇ ಇವರು ಕೂಡ ಸಿನಿಮಾದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದವರು. ಆ ಕಾಲದ ಅದ್ಭುತ ಡ್ಯಾನ್ಸರ್ ಎಂದು ಹೆಸರು ಮೂಡಿಸಿದ್ದ ಇವರು ಕನ್ನಡದ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುತ್ತಿದ್ದರು. ಅಷ್ಟರಮಟ್ಟಿಗೆ ಇವರು ನೃತ್ಯದಲ್ಲಿ ಪರಿಣಿತರಾಗಿದ್ದರು. ಜನಪ್ರಿಯ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಅವರ ಆರೋಗ್ಯದ ಕಾರಣದಿಂದಾಗಿ ಚಿತ್ರರಂಗದಿಂದ ದೂರ ಉಳಿದರು ಎಂದು ಹೇಳಲಾಗುತ್ತದೆ. ಜೊತೆಗೆ ಸಿನಿಮಾದಲ್ಲಿ ನಟಿಸಲು ಅವರ ಆರೋಗ್ಯ ಸಹಕರಿಸುತ್ತಿರಲಿಲ್ಲ ಹೀಗಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತವೆ. ಅಲ್ಲದೆ ಚಿತ್ರರಂಗವೇ ಇವರನ್ನು ದೂರ ಇಟ್ಟಿದೆ ಎಂದು ಕೂಡ ಕೆಲವು ಮಾತುಗಳು ಕೇಳಿಬರುತ್ತದೆ. ಇದೆಲ್ಲದರ ನಡುವೆ ಇಂತಹ ಅದ್ಭುತ ಡ್ಯಾನ್ಸರ್ ಅನ್ನು ಯಾಕೆ ಟಿವಿ ರಿಯಾಲಿಟಿ ಶೋಗಳಲ್ಲಿ, ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಮಾಡುವುದಿಲ್ಲ ಎಂದು ಎಷ್ಟೋ ಜನರು ಪ್ರಶ್ನೆ ಮಾಡುತ್ತಾರೆ.

ಹೌದು ಯಾವುದೇ ಟಿವಿ ವಾಹಿನಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಆರಂಭವಾಗುತ್ತಿದೆ ಎಂದಾಗ ಮೊದಲಿಗೆ ಕೇಳಿ ಬರುವುದು ವಿನೋದ್ ರಾಜ್ ಅವರ ಹೆಸರು. ಇವರನ್ನು ಈ ಕಾರ್ಯಕ್ರಮದ ತೀರ್ಪುಗಾರರನ್ನಾಗಿ ಮಾಡಿ ಎಂದು, ಆದರೆ ಇವತ್ತಿನ ವರೆಗೂ ಯಾವುದೇ ಶೋನಲ್ಲಿ ವಿನೋದ್ ರಾಜ್ ಅವರನ್ನು ತೀರ್ಪುಗಾರರಾಗಿ ಮಾಡಲಾಗಿಲ್ಲ. ಆದರೆ ಇದರ ಹಿಂದೆ ಬೇರೆದೇ ಕಾರಣ ಇದೆ, ಅದರ ಕುರಿತ ಮಾಹಿತಿ ಇಲ್ಲಿದೆ ನೋಡಿ. ಸಿನಿಮಾ ರಂಗದಿಂದ ದೂರ ಉಳಿದ ವಿನೋದ್ ರಾಜ್ ಅವರು ನೆಲಮಂಗಲದ ಹಳ್ಳಿ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ 2009ರಲ್ಲಿ ಇವರ ಕಾರಿನ ಮೇಲೆ ಎರಡು ಬಾರಿ ಅಟ್ಯಾಕ್ ಮಾಡಲಾಗಿತ್ತು. 2011ರಲ್ಲಿ ಇವರ ತೋಟಕ್ಕೆ ಬೆಂಕಿ ಹಚ್ಚಲಾಗಿತ್ತು. ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ವಿನೋದ್ ರಾಜ್ ಅವರಿಗೆ ಇದನ್ನು ಕಂಡು ಬಹಳ ನೋವಾಗಿತ್ತು. 2012ರಲ್ಲಿ ಅವರಿಗೆ ಹೃದಯಘಾತವಾಗಿತ್ತು ಜೊತೆಗೆ 2020ರಲ್ಲಿ ಮತ್ತೆ ಅವರ ತೋಟದ ಮೇಲೆ ಬೆಂಕಿ ಹಚ್ಚಲಾಗಿತ್ತು. ಕಾಣದ ಕೈಗಳು ವಿನೋದ್ ರಾಜ್ ಅವರನ್ನು ಎಂದಿಗೂ ದ್ವೇಷಿಸುತ್ತಲೇ ಇವೆ. ಹಾಗೂ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ.