ದೊಡ್ಡವರು ಚಿಕ್ಕವರು ಎಲ್ಲರೂ ಕೈ ಬಿಟ್ಟಾಗ ಮೆಜೆಸ್ಟಿಕ್ ಸಮಯದಲ್ಲಿ ದರ್ಶನ್ ಕೈ ಹಿಡಿದ ಏಕೈಕ ನಟ ಯಾರು ಗೊತ್ತೇ?? ತೆರೆ ಹಿಂದಿರುವ ಯಾರಿಗೂ ತಿಳಿಯದ ಘಟನೆ.

3,759

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸದ್ಯ ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅವರು ಜನಪ್ರಿಯ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಆದರೆ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಹಿಟ್ ಚಿತ್ರಗಳನ್ನು ಕೊಡುವುದಕ್ಕೂ ಮೊದಲು ದರ್ಶನ್ ರವರು ಪಟ್ಟ ಕಷ್ಟ ಅಸ್ಟಿಷ್ಟಲ್ಲ. ಖ್ಯಾತ ಖಳನಟನ ಪುತ್ರನಾಗಿದ್ದರೂ ಕೂಡ ದರ್ಶನ್ ರವರಿಗೆ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ನಾಯಕ ನಟನಾಗಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಅವರು ಎಷ್ಟೋ ವರ್ಷ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಅನೇಕ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೂ ಕೂಡ ಯಾರು ಅವರನ್ನು ಗುರುತಿಸುತ್ತಿರಲಿಲ್ಲ ಅವರು ನಾಯಕನಟನಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಮಹಾಭಾರತ, ಎಲ್ಲರ ಮನೆ ದೋಸೆನು, ಮಿಸ್ಟರ್ ಹರಿಶ್ಚಂದ್ರ, ದೇವರ ಮಗ, ಭೂತಯ್ಯನ ಮಕ್ಕಳು ಇಂತಹ ಸಾಕಷ್ಟು ಚಿತ್ರಗಳಲ್ಲಿ ಅವರು ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಅವರಿಗೆ ಹೆಚ್ಚಿನ ಗೌರವ ಮನ್ನಣೆ ದೊರೆತಿರಲಿಲ್ಲ.

ನಟ ದರ್ಶನ್ ರವರು ನಾಯಕನಟನಾಗಿ ಎಂಟ್ರಿ ಕೊಟ್ಟಿದ್ದು ತಮ್ಮ ಮೊದಲ ಚಿತ್ರವಾದ ಮೆಜೆಸ್ಟಿಕ್ ಮೂಲಕ. ಹೌದು ಮೆಜೆಸ್ಟಿಕ್ ಚಿತ್ರ 2002ರಂದು ತೆರೆಕಂಡಿತು. 20 ವರ್ಷಗಳ ಹಿಂದೆ ನಟ ದರ್ಶನ್ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟರು. ದರ್ಶನ್ ರವರಿಗೆ ಈ ಚಿತ್ರ ಸ್ಟಾರ್ ಗಿರಿ ತಂದು ಕೊಟ್ಟಿತ್ತು. ಮೊದಲ ಚಿತ್ರದಲ್ಲಿಯೇ ದರ್ಶನ್ ಗೆದ್ದಿದ್ದರು. ಫೆಬ್ರವರಿ 8 2002 ರಲ್ಲಿ ತೆರೆಕಂಡ ಈ ಚಿತ್ರ ಈ ವರ್ಷ ಫೆಬ್ರವರಿಗೆ ಸರಿಯಾಗಿ 20 ವರ್ಷದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ನಟ ದರ್ಶನ್ ರವರು ಈ ಚಿತ್ರ ನನ್ನನ್ನು ನಾಯಕನಟನಾಗಿ ಪರಿಚಯಿಸಿತು. ನೀವು ಈ ಚಿತ್ರವನ್ನು ಗೆಲ್ಲಿಸಿದ್ದೀರಿ. ನನ್ನ ನಂಬಿಕೆಯನ್ನು ಗೆಲ್ಲಿಸಿದ್ದೀರಿ. ನಾನು ಯಾವಾಗಲೂ ನನ್ನ ಅಭಿಮಾನಿಗಳಿಗೆ ಋಣಿಯಾಗಿರುತ್ತೇನೆ ಎಂದು ಹೇಳಿದ್ದರು.

ಇದೇ ವೇಳೆ ಅವರು ಆರಂಭದಲ್ಲಿ ತಮಗೆ ಸಹಾಯ ಮಾಡಿದವರನ್ನು ನೆನೆದಿದ್ದಾರೆ. ಹೌದು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೂ ಮೊದಲು ದರ್ಶನ್ ರವರು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅವರಿಗೆ ಯಾರು ಕೂಡ ಸಹಾಯ ಮಾಡಿರಲಿಲ್ಲ. ಈ ಸಂದರ್ಭದಲ್ಲಿ ದರ್ಶನ್ ರವರಿಗೆ ಹೊಸ ಸಿನಿಮಾದಲ್ಲಿ ನಾಯಕನಾಗಲು ಅವಕಾಶ ಕೇಳಿ ಬರುತ್ತದೆ. ಅವರಿಗೆ ಪರಿಚಿತರು ಒಬ್ಬರು ಹೀಗೆ ಮೆಜೆಸ್ಟಿಕ್ ಅನ್ನುವ ಚಿತ್ರ ಬರುತ್ತಿದೆ, ಅದಕ್ಕೆ ನಾಯಕನ ಹುಡುಕಾಟದಲ್ಲಿದ್ದಾರೆ, ನೀನು ಒಮ್ಮೆ ಪ್ರಯತ್ನಿಸು ಎಂದು ಹೇಳುತ್ತಾರೆ. ಆದರೆ ನಿರ್ಮಾಪಕ ಮತ್ತು ನಿರ್ದೇಶಕರನ್ನು ಕಾಣಲು ಹೋಗುವುದಕ್ಕಾಗಿ ಆಗ ದರ್ಶನ್ ಬಳಿ ಕಾರಾಗಲಿ ಬೈಕಾಗಲಿ ಇರುವುದಿಲ್ಲ. ಇದನ್ನು ತಿಳಿದ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮದೇ ಬೈಕನ್ನು ದರ್ಶನ್ ರವರಿಗೆ ಕೊಟ್ಟು ಅವರನ್ನು ಕಳಿಸಿ ಕೊಟ್ಟಿರುತ್ತಾರೆ. ಇದನ್ನು ನೆನಪಿಸಿಕೊಂಡಿರುವ ದರ್ಶನ್ ಆ ಸಮಯದಲ್ಲಿ ನನಗೆ ಆ ಸಹಾಯ ಬಹಳ ದೊಡ್ಡದಾಗಿತ್ತು. ಹಾಗಾಗಿ ಗಣೇಶ್ ಅವರನ್ನು ನಾನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.