ಪುನೀತ್ ರವರು ಗೌರವ ಪ್ರೀತಿ ಮಾಡಿದ್ದೆ ತಪ್ಪಾಯಿತೇ?? ಕಾರ್ಯಕ್ರಮಕ್ಕೆ ಕೈ ಕೊಟ್ಟ ಸುದೀಪ್ ಹಾಗೂ ದರ್ಶನ್. ಈಗ ಏನಾಗಿದೆ ಗೊತ್ತೇ??

39

ಮೊನ್ನೆ ಮೊನ್ನೆಯಷ್ಟೇ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಎಂದೇ ಹೇಳಲಾಗುತ್ತಿರುವ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಭವೋಪೇತವಾಗಿ ಜರುಗಿತು. ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಯ ಸಿನಿ ಜಗತ್ತಿನ ತಾರೆಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ದೊಡ್ಮನೆಯ ಇಡೀ ಕುಟುಂಬ, ಸ್ಟಾರ್ ಸೆಲೆಬ್ರಿಟಿಗಳು, ನಟರು, ಕಲಾವಿದರು, ರಾಜಕಾರಣಿಗಳು, ನಿರ್ದೇಶಕರು ಹೀಗೆ ದೊಡ್ಡ ತಾರಾ ಬಳಗವೇ ಈ ಕಾರ್ಯಕ್ರಮಕ್ಕೆ ಜಮಾಯಿಸಿತ್ತು. ಪುನೀತ್ ಅವರ ಕನಸಿನ ಕೊನೆಯ ಸಿನಿಮಾವನ್ನು ಸಂಭ್ರಮಿಸುವ ಹಾಗೂ ಪುನೀತ್ ಅವರಿಗೆ ಗೌರವಿಸುವ ಒಂದು ಅರ್ಥಪೂರ್ಣ ಕಾರ್ಯಕ್ರಮ ಇದಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಪುನೀತ್ ಅವರ ಆತ್ಮೀಯ ಸ್ನೇಹಿತರಾದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಬಾರದೇ ಇದ್ದಿದ್ದು ನೆಟ್ಟಿಗರ ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕಾರ್ಯಕ್ರಮ ನಡೆದು ಕೆಲವು ದಿನಗಳೆ ಕಳೆದರೂ ಇಂದಿಗೂ ಕೂಡ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಅವರು ಕಾರ್ಯಕ್ರಮಕ್ಕೆ ಬರದೇ ಇದ್ದುದರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ, ವಾದ ನಡೆಯುತ್ತಿದೆ.

ಪುನೀತ್ ಅವರ ಮೇಲೆ ನಟ ದರ್ಶನ್ ಹಾಗೂ ಸುದೀಪ್ ಇಬ್ಬರಿಗೂ ಕೂಡ ಅಪಾರವಾದ ಪ್ರೀತಿ, ಗೌರವ ಇದೆ. ಪುನೀತವರು ನಮ್ಮನೆಲ್ಲ ಅಗಲಿದಾಗ ಈ ಇಬ್ಬರು ನಟರು ಸಾಕಷ್ಟು ನೊಂದುಕೊಂಡಿದ್ದರು. ಆತ್ಮೀಯ ಗೆಳೆಯನನ್ನು ಕಳೆದುಕೊಂಡು ದುಃಖಿಸಿದ್ದರು. ನಟ ದರ್ಶನ್ ಆಗಲಿ ಅಥವಾ ಕಿಚ್ಚ ಸುದೀಪ್ ಆಗಲಿ ಪುನೀತ್ ಅವರ ಜೊತೆಗೆ ಆತ್ಮೀಯವಾಗಿರುವ ಹಾಗೂ ಪುನೀತ್ ಅಪ್ಪಿಕೊಂಡಿರುವ ಅದೆಷ್ಟೋ ಫೋಟೋಗಳು ಇಂದಿಗೂ ಕೂಡ ಅಭಿಮಾನಿಗಳ ಮೆಚ್ಚುಗೆಗೆ ವ್ಯಕ್ತವಾಗುತ್ತದೆ. ಜೊತೆಗೆ ದೊಡ್ಡ ಮನೆಯ ಮೇಲೆ ಈ ಇಬ್ಬರು ನಟರಿಗೆ ಅಪಾರವಾದ ಗೌರವ ಅಭಿಮಾನವಿದೆ. ಇತ್ತೀಚಿಗೆ ನಡೆದ ಬನಾರಸ್ ಚಿತ್ರದ ಪ್ರಮೋಷನ್ ನಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದರು. ಅಲ್ಲಿ ಪುನೀತ್ ಅವರ ವಿಡಿಯೋ ಒಂದನ್ನು ಪ್ಲೇ ಮಾಡಲಾಯಿತು. ಆಗ ದರ್ಶನ್ ಅವರು ತಮಗೆ ಅರಿವಿಲ್ಲದಂತೆ ಅತ್ತರು.

ಈ ಇಬ್ಬರು ನಟರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಪುನೀತಪರ್ವಕ್ಕೆ ಆಗಮಿಸಲಾಗಲಿಲ್ಲ. ಆದರೆ ನೆಟ್ಟಿಗರು ಈ ವಿಷಯವನ್ನು ಇನ್ನೂ ಬಿಟ್ಟಿಲ್ಲ. ದರ್ಶನ್, ಸುದೀಪ್ ಕಾರ್ಯಕ್ರಮಕ್ಕೆ ಬಾರದೆ ಇದ್ದುದ್ದಕ್ಕೆ ಇಂದಿಗೂ ಕೂಡ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಇಲ್ಲ ಸಲ್ಲದ ಪ್ರತಿಕ್ರಿಯೆ, ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಗಲಾಟೆ, ಚರ್ಚೆ ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೆ ಗೊತ್ತಿಲ್ಲ. ಆದರೆ ಇಬ್ಬರೂ ನಟರಿಗೆ ಪುನೀತ್ ಅವರ ಮೇಲೆ ಇರುವ ಪ್ರೀತಿ, ಗೌರವವಾಗಲಿ ಚೂರು ಕಡಿಮೆಯಾಗಿಲ್ಲ ಎನ್ನುವುದು ಅಷ್ಟೇ ಸತ್ಯ. ಇದನ್ನು ಇಂತಹ ಅನಗತ್ಯ ಚರ್ಚೆ ಮಾಡುತ್ತಿರುವವರು ಯಾವಾಗ ಅರ್ಥ ಮಾಡಿಕೊಳ್ಳುವವರೋ ಕಾದು ನೋಡಬೇಕಿದೆ.