ವಿವಾದ ಸೃಷ್ಟಿ ಮಾಡಲು ಪ್ರಯತ್ನ ಪಟ್ಟ ಚೇತನ್ ರವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರಕೊಟ್ಟ ರಿಷಬ್ ಪತ್ನಿ ಹೇಳಿದ್ದೇನು ಗೊತ್ತೇ??

141

ಕನ್ನಡದ ಕಥೆ ಕಾಂತಾರವು ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲೂ ಎಲ್ಲಾ ಮನಸ್ಥಿತಿಯ ಜನರನ್ನು ಮನಸೂರೆ ಗೊಳ್ಳುತ್ತಿದೆ. ಕಳೆದ ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡ ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರಕ್ಕೆ ಇಂದಿಗೂ ಕೂಡ ಹೌಸ್ ಫುಲ್ ಪ್ರದರ್ಶನ ಸಿಗುತ್ತಿದೆ. ಎಲ್ಲಾ ಜನರು ಚಿತ್ರವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಕಾಂತಾರ ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಬಿಡುಗಡೆಗೊಂಡ ಎಲ್ಲಾ ಐದು ಭಾಷೆಗಳಲ್ಲಿ ಜನರು ಚಿತ್ರವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಕೇವಲ ಸಿನಿ ಪ್ರೇಮಿಗಳು ಮಾತ್ರವಲ್ಲದೆ ದೊಡ್ಡ ದೊಡ್ಡ ಸ್ಟಾರ್ ನಟರು, ನಿರ್ದೇಶಕರು ಸಿನಿಮಾವನ್ನು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಚಿತ್ರದ ಬಗ್ಗೆ ನಟ ಚೇತನ್ ರವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಅದು ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು.

ರಿಶಭ್ ಅವರು ಈ ಚಿತ್ರ ಹಿಂದೂ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದಿದ್ದರು, ಆದರೆ ಭೂತ ಕೋಲ ನೃತ್ಯಗಳು ನಮ್ಮ ಹಿಂದೂ ಸಂಸ್ಕೃತಿಯಲ್ಲ ಎಂದು ಚೇತನ್ ಅವರು ಹೇಳಿಕೆ ನೀಡಿದ್ದರು. ಆದರೆ ಕನ್ನಡ ನಾಡಿನ ಕಲೆಯನ್ನು ಬೆಳ್ಳಿ ಪರದೆಯ ಮೇಲೆ ತರುವಲ್ಲಿ ಚಿತ್ರತಂಡ ಗೆದ್ದಿದೆ. ಇಂತಹ ಚಿತ್ರಗಳಿಗೂ ಜನರಿದ್ದಾರೆ ಎಂಬುದನ್ನು ಕಾಂತಾರ ಸಾಬೀತುಪಡಿಸಿದೆ. ಚಿತ್ರದ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಾವಳಿ ಚಿತ್ರ ನೋಡಿದ ನಂತರವೂ ವೀಕ್ಷಕರ ತಲೆಯಲ್ಲಿ ಗಿರ್ ಎನ್ನುವಂತೆ ಕುಳಿತುಬಿಡುತ್ತದೆ. ಅಷ್ಟರಮಟ್ಟಿಗೆ ದೈವವನ್ನು ಆವಾಹಿಸಿಕೊಂಡವರಂತೆ ರಿಷಭ್ ಅಭಿನಯಿಸಿದ್ದಾರೆ. ಕಾಂತಾರ ಸಿನಿಮಾ ಇದೀಗ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡವೂ ಸೇರಿದಂತೆ ಬಹುತೇಕ ಕಡೆ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದೆ. ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತ ಆಗಿದ್ದ ರಿಷಬ್, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. ಕಾಂತಾರ ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ.

ಚಿತ್ರದ ಚಿತ್ರೀಕರಣಕ್ಕೂ ಮೊದಲೇ ರಿಷಬ್ ಶೆಟ್ಟಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರನ್ನು ಅವರ ದರ್ಶನ ಮಾಡಿದ್ದರು. ಈ ಸಮಯದಲ್ಲಿ ಇಂತಹದೊಂದು ಚಿತ್ರ ಮಾಡುತ್ತಿರುವುದಾಗಿ ಹೇಳಿ ಸಲಹೆ ಕೇಳಿದರು, ಆಗ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಆಶೀರ್ವದಿಸಿ ಕಳುಹಿಸಿದ್ದರಂತೆ. ಇಂತಹದೊಂದು ಚಿತ್ರ ಮಾಡುತ್ತಿರುವದಾಗಿ ರಿಷಭ್ ಅವರು ದೈವದ ಬಳಿಗೆ ತಿಳಿಸಿದಾಗ ದೈವವೂ ತನ್ನ ಮುಖದ ಮೇಲಿದ್ದ ಬಣ್ಣವನ್ನು ರಿಷಭ್ ಅವರ ಮುಖದ ಮೇಲೆ ಹಾಕಿ ಆಶೀರ್ವಾದ ಮಾಡಿದ್ದರಂತೆ. ಆದರೆ ಆದರೆ ಚೇತನ್ ಮಾತ್ರ ಚಿತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಇದು ನಮ್ಮ ಹಿಂದೂ ಸಂಸ್ಕೃತಿಯಲ್ಲ. ಇದು ಅದಕ್ಕೂ ಮೊದಲ ಇದ್ದ ಆಚರಣೆಯಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಾಕಷ್ಟು ಜನರ ವಿರೋಧ ವ್ಯಕ್ತವಾಗುತ್ತಿದೆ. ಚಿತ್ರದ ನಟ ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ಇದರ ಬಗ್ಗೆ ಸಮರ್ಥನೆ ನೀಡಿದ್ದಾರೆ. ಇದು ನಮ್ಮ ಸಂಸ್ಕೃತಿ, ನಮ್ಮ ಆಚರಣೆ. ಸಂಸ್ಕೃತಿಗೆ ಅಪಮಾನ ಮಾಡುವ ಏನನ್ನು ನಾವು ಚಿತ್ರದಲ್ಲಿ ಅಳವಡಿಸಿಕೊಂಡಿಲ್ಲ, ತೋರಿಸಿಲ್ಲ ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಶೆಟ್ಟಿ ಅವರ ಪತ್ನಿ ಪ್ರಗತಿ ರಿಷಭ್ ಅವರು ಈ ವಿವಾದದ ಕುರಿತು ಏನನ್ನು ಹೇಳಿಲ್ಲ, ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ.