ಮನೆಯಿಂದ ಕೆಲವೇ ವಾರಗಳಲ್ಲಿ ಹೊರ ಹೋದ ಮಯೂರಿಗೆ ವಾಪಸ್ಸು ಬಂದ ತಕ್ಷಣವೇ ಉಡುಗೊರೆ ಕೊಟ್ಟ ಕಿಚ್ಚ. ಏನು ಗೊತ್ತೇ??

4,280

ಕನ್ನಡದ ಬಿಗ್ ಬಾಸ್ 9ನೇ ಆವೃತ್ತಿಯು ಭರ್ಜರಿಯಾಗಿ ಶುರುವಾಗಿದ್ದು, ಈಗಾಗಲೇ ನಾಲ್ಕು ವಾರಗಳನ್ನು ಪೂರ್ಣಗೊಳಿಸಿದೆ. ಸ್ಪರ್ಧಿಗಳಿಗೆ ವಿವಿಧ ಚಟುವಟಿಕೆಗಳನ್ನು ನೀಡುವ ಮೂಲಕ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರತಿ ವಾರವು ಒಬ್ಬೊಬ್ಬ ಸ್ಪರ್ಧೆಯನ್ನು ಮನೆಯಿಂದ ಎಲಿಮಿನೇಟ್ ಮಾಡಲಾಗುತ್ತದೆ. ಪ್ರತಿ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಈ ಎಲಿಮಿನೇಷನ್ ಪ್ರಕ್ರಿಯೆಯನ್ನು ನಡೆಸಿಕೊಡುತ್ತಿದ್ದರು. ಆದರೆ ಈ ಕಳೆದ ವಾರ ಕಿಚ್ಚ ಸುದೀಪ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಅವರು ಕಾರ್ಯಕ್ರಮದಿಂದ ಹೊರಗುಳಿದಿದ್ದರು. ಹೌದು ಕಳೆದ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಬೇಕಿದ್ದ ಕಿಚ್ಚ ಸುದೀಪ್ ಅವರು ತಮ್ಮ ಮದುವೆ ವಾರ್ಷಿಕೋತ್ಸವದ ಕಾರಣದಿಂದಾಗಿ ಪತ್ನಿಯೊಂದಿಗೆ ವಿದೇಶ ಪ್ರವಾಸದಲ್ಲಿದ್ದಾರೆ. ಹೀಗಾಗಿ ಕಳೆದ ಶನಿವಾರ ಮತ್ತು ಭಾನುವಾರ ಅವರು ಶೋ ನಿರೂಪಿಸಲಿಲ್ಲ.

ಈ ವಾರ ನಾಮಿನೇಟ್ ಆಗಿದ್ದ ಸ್ಪರ್ಧಿಗಳ ಪೈಕಿ ನಟಿ ಮಯೂರಿ ಮನೆಯಿಂದ ಹೊರ ನಡೆದಿದ್ದಾರೆ. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸುದೀಪ್ ಪಾಲ್ಗೊಳ್ಳದ ಕಾರಣ ಮಯೂರಿಗೆ ಗಿಫ್ಟ್ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ವಾರದ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ನಿರೂಪಿಸದೆ ಇದ್ದ ಕಾರಣದಿಂದಾಗಿ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡುವ ಕೆಲಸವನ್ನು ವಿವಿಧ ರೀತಿಯಲ್ಲಿ ಕೈಗೊಳ್ಳಲಾಗಿತ್ತು. ಹಂತ ಹಂತವಾಗಿ ನಾಮಿನೇಟ್ ಆಗಿದ್ದ ಸ್ಪರ್ಧಿಗಳಿಗೆ ವಿವಿಧ ಟಾಸ್ಕ್ ಗಳನ್ನು ನೀಡುವ ಮೂಲಕ ಒಬ್ಬೊಬ್ಬರನ್ನು ಗ್ರಾಂಡ್ ಫಿನಾಲೆ ರೀತಿಯಲ್ಲಿ ಸೇವ್ ಮಾಡುತ್ತಾ ಬರಲಾಯಿತು. ಕೊನೆಯಲ್ಲಿ ಮಯೂರಿ ಮತ್ತು ನೇಹಾ ಗೌಡ ಅವರು ಉಳಿದುಕೊಂಡಿದ್ದರು.

ಆಗ ಹೊರಗಿಂದ ಮನೆಯೊಳಗೆ ಇಬ್ಬರು ಬೈಕ್ ರೇಸರ್ ಬಂದರು. ನೇಹಾ ಮತ್ತು ಮಯೂರಿ ಬೈಕ್ ಮೇಲೆ ಕುಳಿತರು. ಯಾರ ಬೈಕ್ ಹೊರಡುವುದು ಅವರು ಮನೆಯಿಂದ ಹೊರ ಹೋಗುವರು ಎಂದು ಬಿಗ್ ಬಾಸ್ ತಿಳಿಸಿದ್ದು, ಅದರಂತೆ ಮಯೂರಿಯವರು ಕುಳಿತ ಬೈಕ್ ಮನೆಯಿಂದ ಹೊರ ನಡೆಯಿತು. ಹೀಗೆ ಮಯೂರಿಯವರು ಕಳೆದ ವಾರ ಶೋನಿಂದ ಹೊರ ನಡೆದಿದ್ದಾರೆ, ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ನಿಂದ ಹೊರ ನಡೆದ ನಂತರ ಮಯೂರಿ ಅವರಿಗೆ ಕರೆ ಮಾಡಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಅವರಿಗೆ ಶುಭಾಶಯಗಳು ಕೋರಿದ್ದು ನಿಮಗೆ ಯಾವ ಸಹಾಯವೂ ಬೇಕಾದರೂ ನನ್ನನ್ನು ಕೇಳಿ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಆಶ್ವಾಸನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕಾರ್ಯಕ್ರಮದಿಂದ ಹೊರಬಂದ ತಕ್ಷಣವೇ ಮಯೂರಿಯವರಿಗೆ ಕಿಚ್ಚ ಸುದೀಪ್ ಅವರ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ ಎಂದು ಹೇಳಬಹುದು.