ಸ್ನೇಹಿತನ ಜೊತೆ ವಿಡಿಯೋ ಕಾಲ್ ನಲ್ಲಿ ಇದ್ದ ಹುಡುಗಿಯ ರೂಮಿಗೆ ಬಂದ ಮಾಜಿ ಲವರ್ ಮಾಡಿದ ಕೆಲಸ ಏನು ಗೊತ್ತೇ? ಮೈಂಡ್ ಬ್ಲಾಕ್ ಘಟನೆ.

77

ಮೊನ್ನೆ ಮೊನ್ನೆಯಷ್ಟೇ ಕೇರಳದ ಕಣ್ಣೂರು ಜಿಲ್ಲೆಯ ಪನೋರ್ ಪಟ್ಟಣದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತ ದೇಹ ಆಕೆಯ ಮನೆಯ ಬೆಡ್ರೂಮ್ ನಲ್ಲೆ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿ ಶ್ಯಾಮಜಿತ್ ಸ್ವತ ಪೊಲೀಸರ ಮುಂದೆ ಶರಣಾಗಿದ್ದು ಇದೊಂದು ಬರ್ಬರ ಹತ್ಯೆ ಪ್ರಕರಣ ಎಂಬುದು ತಿಳಿದು ಬಂದಿದೆ. ಕೊಲೆಯಾದ ಯುವತಿ ವಿಷ್ಣುಪ್ರಿಯ ಆಗಿದ್ದು ಪ್ರೇಮ ವೈಫಲ್ಯವೇ ಕೊಲೆಗೆ ಕಾರಣವಾಗಿತ್ತು ಎಂದು ತಿಳಿದು ಬಂದಿದೆ. ಆರೋಪಿ ಶಾಮಜಿತ್ ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ವಿಷ್ಣುಪ್ರಿಯ ಸ್ನೇಹಿತೆಯ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವಾಗಲೇ ಶ್ಯಾಮಜಿತ್ ಮನೆಗೆ ಅತಿಕ್ರಮವಾಗಿ ಪ್ರವೇಶಿಸುತ್ತಾನೆ. ಆತನನ್ನು ನೋಡಿ ಗಾಬರಿಗೊಂಡ ವಿಷ್ಣುಪ್ರಿಯ ಅವನ ಹೆಸರನ್ನು ಸ್ನೇಹಿತೆಗೆ ಜೋರಾಗಿ ಕಿರುಚಿ ಹೇಳಿದ್ದಾಳೆ.

ಇದಾದ ಮರುಕ್ಷಣವೇ ಫೋನ್ ಸಂಭಾಷಣೆ ಕಡಿತಗೊಂಡಿದೆ. ಸುತ್ತಿಗೆ ಮತ್ತು ಚಾಕು ತೆಗೆದುಕೊಂಡು ವಿಷ್ಣುಪ್ರಿಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿರುವ ಆರೋಪಿ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ನಂತರ ಕತ್ತು ಸೀಳಿದ್ದಾನೆ ಎಂಬ ಅಂಶ ತಿಳಿದು ಬಂದಿದೆ. ಅತ ರೂಮಿಗೆ ಬಂದಾಗ ವಿಷ್ಣುಪ್ರಿಯ ಫೋನ್ ಸಂಭಾಷಣೆ ಅಲ್ಲಿರುತ್ತಾಳೆ. ಏಕಾಏಕಿ ಮನೆಗೆ ಬಂದ ಶ್ಯಾಮಜಿತ್ ನೋಡಿ ಭಯಗೊಂಡ ಆಕೆ ಅವನ ಹೆಸರನ್ನು ಸ್ನೇಹಿತೆಗೆ ವಿಡಿಯೋ ಕಾಲ್ ನಲ್ಲಿ ಹೇಳಿದ್ದಾಳೆ. ಈ ವೇಳೆ ಆರೋಪಿ ಜೋರಾಗಿ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಇದಾದ ನಂತರ ಚಾಕುವಿನಿಂದ ಅವಳ ಕುತ್ತಿಗೆಯನ್ನು ಸೀಳಿ ಕೈಗಳನ್ನು ಕತ್ತರಿಸಿದ್ದಾನೆ. ವಿಷ್ಣುಪ್ರಿಯ ದೇಹದಲ್ಲಿ 18 ಕತ್ತರಿಸಿದ ಗುರುತುಗಳು ಕಂಡುಬಂದಿವೆ. ಆರೋಪಿ ಈ ಮೊದಲು ನಿತ್ಯವೂ ವಿಷ್ಣುಪ್ರಿಯಳನ್ನು ಹಿಂಬಾಲಿಸುತ್ತಿದ್ದ. ಆಕೆ ಒಂಟಿಯಾಗಿರುವ ಸಮಯಕ್ಕಾಗಿ ಕಾಯುತ್ತಿದ್ದ. ಈ ವೇಳೆ ಮನೆಯಲ್ಲಿ ಆಕೆ ಒಂಟಿಯಾಗಿದ್ದ ಸಮಯದಲ್ಲಿ ಈ ದುಷ್ಕೃತ್ಯ ನಡೆಸಿದ್ದಾನೆ.

ಆಕೆಯ ಮೇಲೆ ದಾಳಿ ನಡೆಸಿ, ಅವಳು ಸತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ಮನೆಯಿಂದ ಪರಾರಿಯಾಗಿದ್ದಾನೆ. ಶ್ಯಾಮಜಿತ್ ಮತ್ತು ವಿಷ್ಣುಪ್ರಿಯ ಈ ಮೊದಲು ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು ಎಂದು ಪೊಲೀಸರಿಂದ ತಿಳಿದು ಬಂದಿದೆ. ಆದರೆ ಅವರು ಇತ್ತೀಚಿಗಷ್ಟೇ ಬೇರೆ ಬೇರೆಯಾಗಿದ್ದರು. ಈ ಸಂಬಂಧವನ್ನು ನನಗೆ ಇನ್ನೂ ಮುಂದುವರಿಸಲು ಇಷ್ಟವಿಲ್ಲವೆಂದು ವಿಷ್ಣುಪ್ರಿಯ ಹೇಳಿದ್ದಳಂತೆ, ಆದರೆ ಇದು ಶ್ಯಾಮಜಿತ್ ಗೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ವಿಷ್ಣುಪ್ರಿಯ ತನಗೆ ಮೋಸ ಮಾಡಿದ್ದಾಳೆ ಎಂದು ಕಿಡಿ ಕಾರುತ್ತಾ ದ್ವೇಷಿಸತೊಡಗಿದ್ದ. ಏನೇ ಮಾಡಿದರು ಶ್ಯಾಮಜಿತ್ ಮಾತನ್ನು ವಿಷ್ಣುಪ್ರಿಯ ಕೇಳದೆ ಹೋದಾಗ ಆಕೆಯನ್ನು ಕೊಲ್ಲುವ ನಿರ್ಧಾರ ಮಾಡಿದ್ದಾನೆ ಎನ್ನಲಾಗಿದೆ.