ದೀಪಾವಳಿ ಹಬ್ಬ ಮುಗಿದ ಕೂಡ ಲಕ್ಷ್ಮಿ-ಶನಿ ದೇವರ ಕೃಪೆಯಿಂದ ಒಂದು ವಾರದಲ್ಲಿ ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ??

5,980

ಯಾವುದೇ ಗ್ರಹವು ತನ್ನದೇ ಸ್ಥಳದಲ್ಲಿ ನೇರ ಹಾಗೂ ಇಮ್ಮುಖವಾಗಿ ಚಲಿಸುವುದು ಎಲ್ಲಾ 12 ರಾಶಿಚಕ್ರದ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜುಲೈನಲ್ಲಿ ಶನಿದೇವನ ಹಿಮ್ಮೆಟ್ಟುವಿಕೆ ನಂತರ ಇದೆ ಅಕ್ಟೋಬರ್ 23ರಿಂದ ಮಕರ ರಾಶಿ ಕಡೆಗೆ ಮುಖ ಮಾಡಿದ್ದಾರೆ. ಈ ಕ್ರಿಯೆ ಪರಿಣಾಮ ಎಲ್ಲಾ 12 ರಾಶಿಯ ಜನರ ಮೇಲೆ ಬೀಳಲಿದೆ. ಆದರೂ ಇದೇ ಸಮಯದಲ್ಲಿ ಶನಿದೇವನ ಜೊತೆಗೆ ಲಕ್ಷ್ಮೀದೇವಿಯ ಅದೃಷ್ಟವನ್ನು ಪಡೆಯುವ ಕೆಲವು ರಾಶಿಗಳಿವೆ. ಜ್ಯೋತಿಷ್ಯದ ಪ್ರಕಾರ ಶನಿಯ ಸಂಚಾರದಿಂದಾಗಿ ಅನೇಕ ರಾಶಿಯ ಜನರ ಬಹುಕಾಲದ ಕೆಲಸ ಇದೀಗ ಪೂರ್ಣಗೊಳ್ಳಲಿದೆ. ಶನಿಯು ಈಗ ಮಕರ ರಾಶಿಯಲ್ಲಿದ್ದಾನೆ. ಹೀಗಿರುವಾಗ ಇದು ಯಾವೆಲ್ಲ ರಾಶಿಯವರ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಿರಿ.

ಮೇಷ ರಾಶಿ: ಈ ಅವಧಿಯಲ್ಲಿ ಮೇಷ ರಾಶಿಯವರ ಮಾರ್ಗ ನೋವಿನಿಂದ ಕೂಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೀವನದಲ್ಲಿ ಹೆಚ್ಚಿನ ತೊಂದರೆಯನ್ನು ಎದುರಿಸಲಿದ್ದಾರೆ. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ಕಾರಣವಿಲ್ಲದೆ ವಿವಾದ ಸೃಷ್ಟಿಯಾಗುವ ಸಾಧ್ಯತೆ. ಹೆಚ್ಚಿನ ಹಣ ಖರ್ಚಾಗಲಿದೆ.

ವೃಷಭ ರಾಶಿ: ಅನಗತ್ಯ ಖರ್ಚು ಹೆಚ್ಚಾಗಲಿದ್ದು, ಗೃಹ ಹಾಗೂ ಆರ್ಥಿಕ ಸಮಸ್ಯೆಗಳು ತಲೆದೂರಲ್ಲಿವೆ. ಜೀವನದಲ್ಲಿ ಒತ್ತಡ ವಾತಾವರಣ ಸೃಷ್ಟಿಯಾಗಲಿದೆ. ಯಾವುದೋ ಮಹತ್ವಕಾಂಕ್ಷಿಯ ಕೆಲಸ ಮಧ್ಯಕ್ಕೆ ನಿಲ್ಲಬಹುದು. ಜೀವನದಲ್ಲಿ ಏರಿಳಿತ ಕಾಣಲಿದ್ದೀರಿ. ಆದರೂ ಕೂಡ ಈ ಎಲ್ಲದರ ನಡುವೆ ಅದೃಷ್ಟ ನಿಮ್ಮನ್ನು ಬೆಂಬಲಿಸಲಿದೆ.

ಮಿಥುನ ರಾಶಿ: ದಿಢೀರ್ ಹಣದ ಲಾಭ ಹರಿದು ಬರಲಿದೆ. ಕೌಟುಂಬಿಕ ಕಲಹ, ಅತ್ತೆಯ ಕಾಟ ಎದುರಿಸಬೇಕಾಗುತ್ತದೆ. ಹೆಚ್ಚಿನ ಆದಾಯವನ್ನು ಕಾಣಲಿದ್ದೀರಿ. ಸೋಮಾರಿತನದಿಂದ ದೂರವಿದ್ದು, ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ವ್ಯಾಯಾಮ ಒಳ್ಳೆಯದು.

ಕರ್ಕಾಟಕ ರಾಶಿ:- ವ್ಯಾಪಾರದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಆದಾಯ ಕಡಿಮೆಯಾಗಲಿದ್ದು, ಅನಗತ್ಯ ಖರ್ಚು ಏರಿಕೆಯಾಗಲಿದೆ. ವೈವಾಹಿಕ ಜೀವನದಲ್ಲಿ ಏರಿಳಿತ ಕಾಣಲಿದ್ದೀರಿ. ಆರ್ಥಿಕವಾಗಿ ನಷ್ಟ ಎದುರಿಸ ಬೇಕಾಗಬಹುದು.

ಸಿಂಹ ರಾಶಿ: ಹೆಚ್ಚಿನ ಜವಾಬ್ದಾರಿಯನ್ನು ಹೊರಲಿದ್ದೀರಿ. ಸಾಕಷ್ಟು ದಿನಗಳಿಂದ ಹಾಗೆ ಉಳಿದುಕೊಂಡಿದ್ದ ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳಲಿದ್ದು, ಗೆಲುವು ಸಾಧಿಸಲಿದ್ದೀರಿ. ಯಾರದ್ದೋ ತಪ್ಪು ಸಲಹೆಯಿಂದಾಗಿ ನೀವು ನಷ್ಟ ಎದುರಿಸುವ ಸಾಧ್ಯತೆ. ಹಾಗಾಗಿ ಎಚ್ಚರಿಕೆ ವಹಿಸಿ. ಯಾವುದೇ ವ್ಯವಹಾರದಲ್ಲಿ ಬುದ್ದಿವಂತಿಕೆಯಿಂದ ಹೆಜ್ಜೆ ಹಾಕಿ, ವೃತ್ತಿಯಲ್ಲಿ ಉತ್ತಮ ಅವಕಾಶಗಳು ಒದಗಿ ಬರಲಿವೆ.

ಕನ್ಯಾ ರಾಶಿ: ವೃತ್ತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಲಿವೆ. ಆರಂಭಿಸಿದ್ದ ಕೆಲವು ಕೆಲಸಗಳು, ಯೋಜನೆಗಳಿಗೆ ಅಡೆತಡೆ ಉಂಟಾಗಬಹುದು. ಸಂಬಂಧಿಕರಿಂದ ಮನಸ್ತಾಪ ಎದುರಾಗಲಿದ್ದು, ಅನಗತ್ಯ ಕಿರಿಕಿರಿಯನ್ನು ತಪ್ಪಿಸಿಕೊಳ್ಳಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ.

ತುಲಾ ರಾಶಿ: ಈ ರಾಶಿಯವರಿಗೆ ಈ ಅವಧಿಯು ಶುಭಕರವಾಗಿದೆ. ಉತ್ತಮ ಅವಕಾಶಗಳು ಕೇಳಿ ಬರಲಿವೆ. ಸಾಕಷ್ಟು ದಿನಗಳಿಂದ ಯೋಚಿಸುತ್ತಿದ್ದ ವಿದೇಶ ಪ್ರವಾಸ ಪೂರೈಸಲಿದೆ. ವ್ಯವಹಾರಕ್ಕೆ ಸಂಬಂಧಪಟ್ಟ ಹೊಸ ಒಪ್ಪಂದಕ್ಕೆ ಸಹಿ ಹಾಕಲಿದ್ದೀರಿ. ಕೌಟುಂಬಿಕ ಕಲಹ ಏರ್ಪಡುವ ಸಾಧ್ಯತೆ ಇದ್ದು, ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಅನಗತ್ಯ ವಾದವನ್ನು ತಪ್ಪಿಸಿ.

ವೃಶ್ಚಿಕ ರಾಶಿ: ವೃತ್ತಿ ಜೀವನದಲ್ಲಿ ಲಾಭದ ನಿರೀಕ್ಷೆ. ಹೆಚ್ಚಿನ ಆದಾಯವನ್ನು ಕಾಣಲಿದ್ದೀರಿ. ಒಡಹುಟ್ಟಿದವರ ಜೊತೆಗಿನ ಸಂಬಂಧ ವೃದ್ಧಿಯಾಗಲಿದೆ. ಕುಟುಂಬದಲ್ಲಿ ಸಂತಸ ಮನೆ ಮಾಡಲಿದೆ. ವಾದ, ಜಗಳದಿಂದ ದೂರವಿರಿ. ದೀರ್ಘಕಾಲದ ಪ್ರಯಾಣ ಬೇಡ.

ಧನು ರಾಶಿ: ಈ ಅವಧಿಯಲ್ಲಿ ಧನು ರಾಶಿಯವರು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ಅನಗತ್ಯ ಖರ್ಚನ್ನು ಕಡಿಮೆ ಮಾಡಿ. ಆದಾಯ ಮತ್ತು ಉಳಿತಾಯ ಹೆಚ್ಚಿನ ಮೊತ್ತದಲ್ಲಿ ಆಗಲಿದೆ. ನಿಮ್ಮ ಹಾಗೂ ನಿಮ್ಮ ತಾಯಿಯ ಆರೋಗ್ಯದ ಕಡೆಗೆ ನಿಗ ವಹಿಸಿ. ಸುಳ್ಳು ಹೇಳುವುದನ್ನು ತಪ್ಪಿಸಿ.

ಮಕರ ರಾಶಿ: ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳು ಒದಗಿ ಬರಲಿದ್ದು, ಈ ಅವಧಿಯಲ್ಲಿ ಉಂಟಾಗುವ ಸಮಸ್ಯೆಗಳು ಅತಿ ಶೀಘ್ರದಲ್ಲಿ ನಿವಾರಣೆಯಾಗುತ್ತವೆ. ಸೋಮಾರಿತನವನ್ನು ಬಿಟ್ಟು ಕಠಿಣ ಪರಿಶ್ರಮದ ಕಡೆಗೆ ಗಮನವಹಿಸಿ, ಆಗ ಅನೇಕ ಬಗೆಯ ಲಾಭಗಳನ್ನು ಕಾಣಲಿದ್ದೀರಿ. ಹಿರಿಯರೊಂದಿಗೆ ಒಳ್ಳೆಯ ಭಾಂದವ್ಯ ಕಾಪಾಡಿಕೊಳ್ಳುವಿರಿ.

ಕುಂಭ ರಾಶಿ: ಅವಶ್ಯಕತೆ ಗಿಂತ ಹೆಚ್ಚಿನ ಖರ್ಚು ಬೇಡ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ವಿದೇಶ ಪ್ರವಾಸವನ್ನು ಕೈಗೊಳ್ಳಲಿದ್ದೀರಿ, ಹಾಗೆಯೇ ಪ್ರಯಾಣದ ವೆಚ್ಚ ಅತಿಯಾಗಲಿದೆ.

ಮೀನ ರಾಶಿ: ಈ ರಾಶಿಯವರಿಗೆ ಹೆಚ್ಚಿನ ಅನುಕೂಲಗಳು ದೊರೆಯಲ್ಲಿದ್ದು, ಕೆಲವು ಲಾಭ ಫಲ ದೊರೆಯಲಿದೆ. ಸಾಕಷ್ಟು ದಿನಗಳಿಂದ ಬಯಸಿದ್ದ ಆಸೆ ಈಡೇರಲಿದೆ. ಪ್ರೀತಿಯಲ್ಲಿ ಸ್ಥಿರತೆ ಕಾಣದಿದ್ದೀರಿ. ಕುಟುಂಬದಲ್ಲಿ ಪ್ರಗತಿ. ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ಯಶಸ್ವಿಯಾಗಲಿದ್ದಾರೆ.