ನಿಮ್ಮನ್ನು ನೋಡಿದರೆ ನಗು ಬರುತ್ತಿದೆ, ಕೊಹ್ಲಿ ರವರನ್ನು ಟೀಕಿಸಿದವರಿಗೆ ಬ್ರೆಟ್ ಲೀ ಹೇಳಿದ್ದೇನು ಗೊತ್ತೇ??

2,987

ನನಗೆ ಈಗ ನಿಮ್ಮನ್ನೆಲ್ಲ ನೋಡಿ ನಗು ಬರುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್ ಲೀ. ಅದು ಕೂಡ ವಿರಾಟ್ ಕೊಹ್ಲಿ ಅವರು ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಎನ್ನುವುದು ಆಶ್ಚರ್ಯ. ಹೌದು ಟೀಮ್ ಇಂಡಿಯಾ ರೋಚಕ ಗೆಲುವು ಗಳಿಸಿದ ನಂತರ ಹಾಗೂ ವಿರಾಟ್ ಕೊಹ್ಲಿಯ ಅದ್ದೂರಿ ಪ್ರದರ್ಶನದ ನಂತರ ಹೀಗೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಅವರು ಅಚ್ಚರಿ ಸೃಷ್ಟಿ ಮಾಡಿದ್ದಾರೆ. ಆದರೆ ಅವರು ಹೀಗೆ ಹೇಳಿರುವುದು ಟೀಕಾಕಾರರಿಗೆ ಎನ್ನುವುದು ವಿಶೇಷ. ಹೌದು, 53 ಎಸೆತಗಳಿಗೆ 82 ರನ್ ಕಲೆ ಹಾಕುವ ಮೂಲಕ ಪಾಕಿಸ್ತಾನದ ವಿರುದ್ಧ ನಡೆದ ಭಾರತದ ಭರ್ಜರಿ ಪಂದ್ಯದಲ್ಲಿ ಭಾರತ ತಂಡವು ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನ ಜೊತೆಗೆ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ತಂಡಕ್ಕೆ ಅದ್ದೂರಿ ಜಯ ದೊರಕಿಸಿ ಕೊಟ್ಟಿದ್ದಾರೆ.

ಈ ಪಂದ್ಯದ ಗೆಲುವಿನ ನಂತರ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್ ಲೀಯವರು ವಿರಾಟ್ ಕೊಹ್ಲಿ ಅವರ ಆಟವನ್ನು ಮೆಚ್ಚಿ ಕೊಂಡಾಡಿದ್ದಾರೆ. ಅವರ ಅದ್ಭುತ ಆಟವನ್ನು ಪ್ರಶಂಸಿರುವ ಅವರು “ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೂಲಕವೇ ಎಲ್ಲರಿಗೂ ಉತ್ತರ ನೀಡಿದ್ದಾರೆ, ಅವರನ್ನು ಟೀಕೆ ಮಾಡುತ್ತಿರುವವರು ಅವರ ಈ ಮೊದಲ ಭರ್ಜರಿ ಆಟಗಳನ್ನು ನೋಡಿರಲಿಲ್ಲವೆಂದು ಕಾಣುತ್ತದೆ. ನನಗೆ ಈ ಟೀಕಾಕಾರರು ತಮಾಷೆಯಾಗಿ ಕಾಣುತ್ತಾರೆ. ಅವರಿಗೆ ವಿರಾಟ್ ಕೊಹ್ಲಿಯ ನಿಜವಾದ ಸಾಮರ್ಥ್ಯ ಗೊತ್ತಿಲ್ಲ. ಎಲ್ಲಾ ಆಟಗಾರರಿಗೂ ಕೆಟ್ಟ ಸಮಯ ಎನ್ನುವುದು ಇರುತ್ತದೆ. ಆದರೆ ವಿರಾಟ್ ಅವರು ಆ ಸಮಯವನ್ನು ಮೀರಿದ್ದಾರೆ. ಟೀಕೆ ಮಾಡುವವರು ಬಹುಶಹ ವಿರಾಟ್ ಅವರ ದಾಖಲೆಗಳ ಬಗ್ಗೆ ತಿಳಿದುಕೊಂಡಿಲ್ಲ ಎನಿಸುತ್ತದೆ” ಎಂದು ಹೇಳಿದ್ದಾರೆ. ಏಷ್ಯಾಕಪ್ ಗೂ ಮೊದಲು ಕೊಹ್ಲಿಯನ್ನು ಎಲ್ಲಾ ಕಾರಣಗಳಿಗೂ ಅವರೇ ಕಾರಣವೆಂದು ಗುರಿಯಾಗಿಸಲಾಗಿತ್ತು. ಅವರ ಆಟವನ್ನು ಟೀಕಿಸಲಾಗಿತ್ತು. ಈ ಕಾರಣದಿಂದಾಗಿ ಕೊಹ್ಲಿ ಸಂಪೂರ್ಣವಾಗಿ ಕುಗ್ಗಿಹೋಗಿದ್ದರು.

ಮರಳಿ ಅವರು ಫಾರ್ಮ್ ಗೆ ಬರುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಛಲ ಬಿಡದ ಅವರು ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ತೋರಿಸಿದ್ದಾರೆ. ಅವರಂತ ಆಟಗಾರರನ್ನು ಹೆಚ್ಚು ದಿನ ಕೆಳಗೆ ಇಳಿಸಲು ಸಾಧ್ಯವಿಲ್ಲ, ಅವರು ಏನು ಎನ್ನುವುದು ಈಗ ಎಲ್ಲರಿಗೂ ಅರ್ಥವಾದಂತಿದೆ. ಅವರನ್ನು ಟೀಕಿಸಿದವರನ್ನು ನೆನೆದರೆ ನನಗೆ ಈಗ ನಗು ಬರುತ್ತದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಭಾರತ ತಂಡದ ಪಂದ್ಯದಲ್ಲಿ ವಿರಾಟ್ ಅದ್ಭುತ ಆಟವನ್ನು ಪ್ರದರ್ಶಿಸಿದರು. 53 ಎಸೆತಗಳಿಗೆ 82 ರನ್ ಸಿಡಿಸುವ ಮೂಲಕ ವಿರಾಟ್ ಭರ್ಜರಿ ಪ್ರದರ್ಶನ ನೀಡಿದರು. ತಮ್ಮ ಅದ್ಭುತ ಆಟದಿಂದಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಅವರು ಅತಿ ಹೆಚ್ಚು ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾದರು. ಈ ಮೂಲಕ ಅವರು ಕ್ರಿಕೆಟ್ ಅಲ್ಲಿ ಮತ್ತೊಂದು ಇತಿಹಾಸವನ್ನು ನಿರ್ಮಿಸಿದರು.