ಯಶ್ ಹೇಳಿದ ಒಂದು ಮಾತಿಗೆ ಕಣ್ಣೀರಿಟ್ಟ ಅಪ್ಪು ಮಗಳು ವಂದಿತಾ. ಕಾರ್ಯಕ್ರಮದಲ್ಲಿ ನಡೆದಿದ್ದೇನು ? ಎಲ್ಲರೂ ಶಾಕ್

111

ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತಪರ್ವ ಕಾರ್ಯಕ್ರಮ ಕಳೆದ ಶುಕ್ರವಾರ ನಡೆಯಿತು. ಬಹು ನಿರೀಕ್ಷಿತ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇದಾಗಿದ್ದು, ಅರಮನೆ ಮೈದಾನದಲ್ಲಿ ತಾರಾ ಲೋಕವೇ ಧರೆಗಿಳಿದಿತ್ತು. ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ತೆಲುಗು,ತಮಿಳು, ಮಲಯಾಳಂ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ಗಾಯಕರು ಸಮಾರಂಭದಲ್ಲಿ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಆ್ಯಂಬುಲೆನ್ಸ್ ನೀಡುವುದಾಗಿ ಘೋಷಿಸಿದ್ರು. ಇನ್ನು ವಿಡಿಯೋ ಸಂದೇಶ ಕಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಪುನೀತ್ ರಾಜ್‌ಕುಮಾರ್‌ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ್ರು. ಡಾ. ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡರು. ಈ ವೇಳೆ ಯಶ್ ಅವರ ಮಾತು ಕೇಳಿ ಪುನೀತ್ ಪುತ್ರಿ ವಂದಿತಾ ಭಾವುಕರಾಗಿದ್ದಾರೆ. ಪುನೀತ್ ಕುರಿತು ಯಶ್ ಆಡಿದ ಮಾತುಗಳಿಂದ ವಂದಿತ ಅವರು ಅತ್ತಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್, ಪುನೀತ್ ರಾಜ್‌ಕುಮಾರ್ ಅವರ ಸಮಾಜ ಸೇವೆ ಬಗ್ಗೆ ಮಾತನಾಡಿದರು. ನಾನು ಆಸ್ಪತ್ರೆಗೆ ಆ್ಯಂಬುಲೆನ್ಸ್ ಕೊಡೋದಕ್ಕೆ ಮುಂದಾಗಿದ್ದೆ. ಆದರೆ ಮೂರು ಆ್ಯಂಬುಲೆನ್ಸ್ ಕೋಡೋದಕ್ಕೆ ಸಾಧ್ಯವಾಯ್ತು. ಅದರಲ್ಲಿ ಒಂದು ಶಿವಣ್ಣನವರ ಪತ್ನಿ ಗೀತಾ ಕೊಟ್ಟಿದ್ದರು, ಇನ್ನೊಂದು ಚಿರಂಜೀವಿ ಅಂತ ಹೇಳಿದರು. ಬಳಿಕ ವೇದಿಕೆ ಮೇಲೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಉಳಿದ ಎಲ್ಲಾ ಜಿಲ್ಲೆಗಳಿಗೆ ತಾವೇ ಆ್ಯಂಬುಲೆನ್ಸ್ ಕೊಡುವುದಾಗಿ ಘೋಷಿಸಿದ್ದಾರೆ. ಉಳಿದ ಎಲ್ಲಾ ಜಿಲ್ಲೆಗಳಿಗೆ ತಮ್ಮದೇ ಯಶೋಮಾರ್ಗ ಫೌಂಡೇಶನ್‌ನಿಂದ ಆ್ಯಂಬುಲೆನ್ಸ್ ಕೊಡುವುದಾಗಿ ಯಶ್ ಘೋಷಿಸಿದ್ದಾರೆ. ಅದರಲ್ಲೂ ಎಲ್ಲಾ ಆ್ಯಂಬುಲೆನ್ಸ್‌ಗಳನ್ನು ಪುನೀತ್ ರಾಜ್‌ ಕುಮಾರ್ ಹೆಸರಲ್ಲೇ ನೀಡುವುದಾಗಿ ಯಶ್ ಘೋಷಿಸಿದ್ದಾರೆ.

ವೇದಿಕೆ ಮೇಲೆ ಅಪ್ಪು ನೆನಪನ್ನು ಸ್ಮರಿಸಿಕೊಂಡ ರಾಕಿಂಗ್ ಸ್ಟಾರ್ ಯಶ್, ಗಂಧದಗುಡಿಗೆ ಶುಭ ಹಾರೈಸಿದರು. ಗಂಧದಗುಡಿಯು ಕೆಜಿಎಫ್ ದಾಖಲೆಗಳನ್ನು ಬ್ರೇಕ್ ಮಾಡಲಿ ಅಂತ ಶುಭ ಹಾರೈಸಿದರು. ಇನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ವಿಡಿಯೋ ಸಂದೇಶ ಕಳಿಸಿದ್ದರು. ಪುನೀತ್ ರಾಜ್‌ ಕುಮಾರ್ ಅಕಾಲಿಕ ನಿಧನಕ್ಕೆ ಸಂತಾಸ ಸೂಚಿಸಿದ ಅವರು, ಅಪ್ಪು ತಮ್ಮ ಅಭಿನಯ ಹಾಗೂ ಸಮಾಜಸೇವೆಯಿಂದ ನೆನಪಿನಲ್ಲಿ ಉಳಿಯುತ್ತಾರೆ ಅಂತ ಹೇಳಿದರು. ಇನ್ನು ಡಾ. ರಾಜ್‌ಕುಮಾರ್ ಅವರನ್ನು, ಹಿಂದೆ ಅವರನ್ನು ಭೇಟಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಇನ್ನು ಕಮಲ್ ಹಾಸನ್ ಕೂಡ ವಿಡಿಯೋ ಸಂದೇಶ ಕಳಿಸಿ, ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡರು. ಹೆಚ್ಚು ಕಡಿಮೆ ಇದೇ ದಿನ ಒಂದು ವರ್ಷದ ಹಿಂದೆ ನಾನು, ಪುನೀತ್, ಶಿವಣ್ಣ ಎಲ್ಲರೂ ಒಂದೇ ವೇದಿಕೆಯ ಮೇಲೆ ಜೊತೆಯಾಗಿದ್ದೆವು. ಒಟ್ಟಿಗೆ ಮಾತನಾಡಿ ಹರಟೆ ಹೊಡೆದು ನಕ್ಕಿದ್ದೆವು. ಒಟ್ಟಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದೆವು. ಆ ನೆನಪುಗಳು ಇಂದಿಗೂ ಕಾಡುತ್ತವೆ ಎಂದಾಗ ಪುನೀತ್ ಪುತ್ರಿ ಕಣ್ತುಂಬಿಕೊಂಡಿದ್ದಾರೆ. ಯಶ್ ಮಾತು ಕೇಳಿ ತಂದೆಯನ್ನು ನೆನೆದು ವಂದಿತಾ ಅತ್ತಿದ್ದಾರೆ.