ದೀಪಾವಳಿ ಬರಲಿ ನಿಮ್ಮದೇ ಆಟ: ಆಕಾಶದೆತ್ತರಕ್ಕೆ ಬೆಳೆದು ಮೆರೆಯುತ್ತೀರಾ. ಆರು ರಾಶಿಗಳಿಗೆ ಅದೃಷ್ಟದ ಸಮಯ ಯಾರ್ಯಾರಿಗೆ ಗೊತ್ತೇ??

4,137

ದೀಪಾವಳಿ ಲಕ್ಷ್ಮೀದೇವಿಯನ್ನು ಪೂಜೆ ಮಾಡಿ, ಲಕ್ಷ್ಮಿಯನ್ನು ಆರಾಧಿಸುವ ಹಬ್ಬ. ಈ ಹಬ್ಬದ ದಿನ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು, ಎಲ್ಲರೂ ವಿಶೇಷ ಪೂಜೆ ಮಾಡಿ, ತಮ್ಮ ಮನೆಗಳಲ್ಲಿ ಲಕ್ಷ್ಮೀದೇವಿ ಸದಾ ಇರಬೇಕು ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ದೀಪಾವಳಿ ಭಬ್ಬದ ಸಮಯದಲ್ಲಿ ಲಕ್ಷ್ಮೀದೇವಿ ಕೂಡ ಕೆಲವು ರಾಶಿಗಳಿಗೆ ಅದೃಷ್ಟ ಕರುಣಿಸುತ್ತಾರೆ, ಲಕ್ಷ್ಮೀದೇವಿ ಆಶೀರ್ವಾದ ಪಡೆದ ಆ ರಾಶಿಗಳು ಜೀವನದಲ್ಲಿ ಎಲ್ಲಾ ಅದೃಷ್ಟ ಯಶಸ್ಸು ಪಡೆಯುತ್ತಾರೆ. ಆ 6 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ದೀಪಾವಳಿ ಬಳಿಕ ಈ ಇಡೀ ವರ್ಷ ಚೆನ್ನಾಗಿರುತ್ತದೆ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ. ಆರ್ಥಿಕ ವಿಚಾರ ಮತ್ತು ಆಸ್ತಿ ವಿಚಾರದಲ್ಲಿ ಒಳ್ಳೆಯ ವಿಷಯ ಕೇಳುತ್ತೀರಿ. ಹೊಸ ವಾಹನ ಖರೀದಿ ಮಾಡುವ ಅವಕಾಶ ಸಿಗಬಹುದು. ವರ್ಷದ ಶುರುವಿನಲ್ಲಿ ಸ್ಥಳ ಬದಲಾವಣೆ ಆಗಬಹುದು.

ಕನ್ಯಾ ರಾಶಿ :- ವೃತ್ತಿ ಜೀವನದಲ್ಲಿ ಹೊಸದೇನೋ ಶುರುವಾಗಬಹುದು. ದೀಪಾವಳಿ ನಂತರ ಇವರಿಗೆ ಶುಭವಾಗುತ್ತದೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ಶಿವನ ಆರಾಧನೆ ಮಾಡುವುದು ಒಳ್ಳೆಯದು.

ತುಲಾ ರಾಶಿ :- ದೀಪಾವಳಿ ನಂತರ ಈ ರಾಶಿಯವರ ಜೀವನದಲ್ಲಿ ಬಹಳಷ್ಟು ಬದಲಾವಣೆ ಆಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ, ಬದಲಾವಣೆ ಕೂಡ ಆಗುತ್ತದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ನಿಮ್ಮ ಕನಸು ನನಸಾಗುತ್ತದೆ.

ಧನು ರಾಶಿ :- ದೀಪಾವಳಿ ಹಬ್ಬದ ನಂತರ ನಿಮ್ಮ ರಾಶಿ ಹಣಕಾಸಿನ ವಿಚಾರದಲ್ಲಿ ಒಳ್ಳೆಯದನ್ನು ಮಾಡುತ್ತದೆ. ಈ ಸಮಯದಲ್ಲಿ ನಿಮಗೆ ಕೆಲಸದ ವಿಚಾರದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ದೇವರ ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಒಳ್ಳೆಯದಾಗುತ್ತದೆ.

ಮಕರ ರಾಶಿ :- ಈ ಸಮಯದಲ್ಲಿ ನೀವು ಶನಿದೇವರ ಪೂಜೆ ಮಾಡುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ ನೀವು ಹೆಚ್ಚು ಹಣಗಳಿಕೆ ಮಾಡುತ್ತೀರಿ. ಎಲ್ಲಾ ಬಗೆಯ ಸಾಲಗಳಿಂದ ನಿಮಗೆ ಮುಕ್ತಿ ಸಿಗುತ್ತದೆ. ಹೆಚ್ಚು ಹಣವನ್ನು ಸಹ ಗಳಿಸುತ್ತೀರಿ.

ಮೀನ ರಾಶಿ :- ನೀವು ಶನಿದೇವರ ಮಂತ್ರವನ್ನು ಹೇಳಿ, ದೇವರನ್ನು ಪೂಜೆ ಮಾಡುತ್ತಾ ಬಂದರೆ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಿಮಗೆ ಸಿಗುವ ಹೊಸ ಕೆಲಸದಿಂದ ಲಾಭವಾಗುತ್ತದೆ. ಹಣಕಾಸಿನ ಸಮಸ್ಯೆಗಳು ಸಹ ಕಡಿಮೆಯಾಗುತ್ತದೆ.