ಬೇರೆ ವೇದಿಕೆ ಮೇಲೆ ಅಪ್ಪು ಹಾಡು ಬರುತ್ತಿದ್ದಂತೆ ಕಣ್ಣೀರು ಹಾಕಿದ ನಟ ದರ್ಶನ್ ! ಅಪ್ಪು ಕಾರ್ಯಕ್ರಮಕ್ಕೆ ಬರಲಿಲ್ಲ ಗೊತ್ತಾ??

226

ಅಪ್ಪು ಅವರ ಗಂಧದಗುಡಿ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಪುನೀತ ಪರ್ವ ಕಾರ್ಯಕ್ರಮಕ್ಕೆ ನಟ ದರ್ಶನ್ ಅವರು ಬರಲಿಲ್ಲ ಎಂದು ಸ್ವತಃ ದರ್ಶನ್ ಅವರ ಅಭಿಮಾನಿಗಳು ಸಹ ಬೇಸರ ಮಾಡಿಕೊಂಡಿದ್ದರು. ದರ್ಶನ್ ಅವರು ಒಂದೆರಡು ನಿಮಿಷ ಆದರೂ ಪುನೀತಪರ್ವ ಕಾರ್ಯಕ್ರಮಕ್ಕೆ ಬಂದು ಹೋಗಬೇಕಿತ್ತು ಎಂದು ಎಲ್ಲರೂ ಸೋಷಿಯಲ್ ಮೀಡಿಯಾ ಮೂಲಕ ಪರ ವಿರೋಧದ ಚರ್ಚೆ ಮಾಡುತ್ತಿದ್ದಾರೆ. ಪುನೀತಪರ್ವ ಕಾರ್ಯಕ್ರಮಕ್ಕೆ ಬರದ ಬರದ ದರ್ಶನ್ ಅವರು ಮರುದಿನ ನಡೆದ ಬನಾರಸ್ ಸಿನಿಮಾಡ ಪ್ರೀರಿಲೀಸ್ ಇವೆಂಟ್ ಗೆ ಬಂದಿದ್ದರು.

ಶಾಸಕ ಜಮೀರ್ ಅಹ್ಮದ್ ಅವರ ಮಗ ನಟಿಸಿರುವ ಮೊದಲ ಸಿನಿಮಾ ಬನಾರಸ್, ಈ ಸಿನಿಮಾದಲ್ಲಿ ದರ್ಶನ್ ಅವರು ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಪ್ಪು ಅವರು ಮತ್ತು ದರ್ಶನ್ ಅವರು ಆತ್ಮೀಯರಾಗಿದ್ದರು, ಅಂತಹ ಅಪ್ಪು ಅವರ ಸಿನಿಮಾ ಕಾರ್ಯಕ್ರಮಕ್ಕೆ ಬರದೆ, ಬನಾರಸ್ ಪ್ರೀ ರಿಲೀಸ್ ಇವೆಂಟ್ ಗೆ ಹೋಗಿದ್ದರು ಎನ್ನುವ ಕಾರಣಕ್ಕೆ ದರ್ಶನ್ ಅವರ ಮೇಲೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ದರ್ಶನ್ ಅವರೇ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅವರೇ ಹೇಳಿದ ಹಾಗೆ ಆ ದಿನ ಇಡೀ ರಾತ್ರಿ ಕ್ರಾಂತಿ ಸಿನಿಮಾ ಫೈಟ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿತ್ತಂತೆ. ಆ ಕಾರಣದಿಂದ ದರ್ಶನ್ ಅವರು ಗಂಧದಗುಡಿ ಪ್ರೀರಿಲೀಸ್ ಇವೆಂಟ್ ಗೆ ಬರಲು ಆಗಲಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಬನಾರಸ್ ಸಿನಿಮಾ ಪ್ರೀ ರಿಲೀಸ್ ಇವೆಂಟ್ ನಲ್ಲಿ ಅಪ್ಪು ಅವರಿಗೆ ಗೌರವ ನೀಡುವ ಸಲುವಾಗಿ, ಸ್ಟೇಜ್ ಮೇಲೆ ಬೊಂಬೆ ಹೇಳುತೈತೆ ಹಾಡನ್ನು ಹಾಡಿದರು, ಆಗ ದರ್ಶನ್ ಅವರು ಮತ್ತು ಅಲ್ಲಿದ್ದ ಎಲ್ಲರೂ ಸಹ ಎದ್ದು ನಿಂತು ಗೌರವ ಸೂಚಿಸಿದರು. ಅಷ್ಟೇ ಅಲ್ಲದೆ, ಬೊಂಬೆ ಹೇಳುತೈತೆ ಹಾಡು ಕೇಳಿ ಕಣ್ಣಂಚಲ್ಲಿ ನೀರು ತುಂಬಿಕೊಂಡರು. ಅಪ್ಪು ಅವರ ನೆನಪಲ್ಲಿ ದರ್ಶನ್ ಅವರ ಕಣ್ಣು ತುಂಬಿ ಬಂದಿತ್ತು. ಹಾಡು ಮುಗಿದ ಬಳಿಕ, ಜೊತೆಯಲ್ಲಿದ್ದವರು ದರ್ಶನ್ ಅವರ ಕೈಗೆ ಕರ್ಚಿಫ್ ನೀಡಿದರು, ದರ್ಶನ್ ಅವರು ತಮ್ಮ ಕಣ್ಣನ್ನು ಒರೆಸಿಕೊಂಡರು. ಇದನ್ನು ನೋಡಿದರೆ, ದರ್ಶನ್ ಅವರಿಗೆ ಅಪ್ಪು ಅವರ ಮೇಲೆ ಎಷ್ಟು ಪ್ರೀತಿ ಗೌರವ ಇದೆ ಎನ್ನುವುದು ಗೊತ್ತಾಗುತ್ತದೆ.