ಬಿಗ್ ನ್ಯೂಸ್: ಪುನೀತ್ ಪರ್ವ ಕಾರ್ಯಕ್ರಮಕ್ಕೆ ಅನುಶ್ರೀ ರವರು ಪಡೆದ ಸಂಭಾವನೆ ಅದೆಷ್ಟು ಗೊತ್ತೇ??

1,658

ನಿರೂಪಕಿ ಅನುಶ್ರೀ ಇಂದು ಕರ್ನಾಟಕದ ಎಲ್ಲೆಡೆ ಬಹಳ ಹೆಸರು ಮಾಡಿದ್ದಾರೆ. ಇವರ ಎನರ್ಜಿಟಿಕ್ ನಿರೂಪಣೆಯನ್ನು ಎಂಜಾಯ್ ಮಾಡದೆ ಇರುವವರಿಲ್ಲ. ಜೀಕನ್ನಡ ವಾಹಿನಿಯ ಪರ್ಮನೆಂಟ್ ನಿರೂಪಕಿ ಆಗಿದ್ದಾರೆ ಅನುಶ್ರೀ. ಸರಿಗಮಪ ಕಾರ್ಯಕ್ರಮ ಹಲವು ಸೀಸನ್ ಗಳನ್ನು ಅನುಶ್ರೀ ನಿರೂಪಣೆ ಮಾಡಿದ್ದಾರೆ. ಡಿಕೆಡಿ ಕಾರ್ಯಕ್ರಮವನ್ನು ಸಹ ಅನುಶ್ರೀ ಅವರು ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಇವಿಷ್ಟೇ ಅಲ್ಲದೆ, ಜೀಕುಟುಂಬ ಅವಾರ್ಡ್ಸ್ ಸೇರಿದಂತೆ, ಇನ್ನು ಹಲವು ಕಾರ್ಯಕ್ರಮಗಳನ್ನು ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ..

ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ಅನುಶ್ರೀ ಅವರು, ಕನ್ನಡದ ಹಲವು ಸ್ಟಾರ್ ಗಳನ್ನು ಇಂಟರ್ವ್ಯೂ ಮಾಡುತ್ತಾರೆ. ಹಾಗೆಯೇ, ಕನ್ನಡ ಸಿನಿಮಾಗಳ ಪ್ರೊಮೋಷನ್ ಸಹ ಮಾಡುತ್ತಾರೆ. ಅನುಶ್ರೀ ಅವರು ಇಂದು ನಂಬರ್1 ನಿರೂಪಕಿ ಎನ್ನಿಸಿಕೊಂಡಿದ್ದಾರೆ, ಇಂದು ಬಹಳಷ್ಟು ಬೇಡಿಕೆಯಲ್ಲಿರುವ ಅನುಶ್ರೀ ಅವರು ಈ ಸ್ಥಾನಕ್ಕೆ ಏರಲು ಬಹಳ ಕಷ್ಟಪಟ್ಟವರು. ಸಣ್ಣ ಪುಟ್ಟ ಅವಕಾಶಗಳನ್ನು ಉಪಯೋಗಿಸಿಕೊಂಡು ಇಂದು ಸ್ಟಾರ್ ನಿರೂಪಕಿ ಆಗಿದ್ದಾರೆ. ಕನ್ನಡ ಸಿನಿಮಾ ಯಾವುದೇ ಇವೆಂಟ್ ನಡೆದರು ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಇತ್ತೀಚೆಗೆ ಆರ್.ಆರ್.ಆರ್ ಸಿನಿಮಾದ ಕನ್ನಡ ಪ್ರೊಮೋಷನ್ ಇವೆಂಟ್ ಅನ್ನು ಸಹ ಅನುಶ್ರೀ ಅವರೇ ನಿರೂಪಣೆ ಮಾಡಿದ್ದರು.

ಅನುಶ್ರೀ ಅವರು ಒಂದು ಕಾರ್ಯಕ್ರಮ ನಿರೂಪಣೆ ಮಾಡಲು ದುಬಾರಿ ಸಂಭಾವನೆಯನ್ನೇ ಪಡೆಯುತ್ತಾರೆ. ರಿಯಾಲಿಟಿ ಶೋಗಳಲ್ಲಿ ಒಂದು ಎಪಿಸೋಡ್ ಗೆ 1,20,000 ಲಕ್ಷ ರೂಪಾಯಿ ಪಡೆಯುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಅನುಶ್ರೀ ಅವರು ಮೊನ್ನೆಯಷ್ಟೇ ನಡೆದ ಪುನೀತ ಪರ್ವ ಕಾರ್ಯಕ್ರಮವನ್ನು ಸಹ ನಿರೂಪಣೆ ಮಾಡಿದರು, ಅಪ್ಪು ಅವರ ದೊಡ್ಡ ಅಭಿಮಾನಿ ಆಗಿರುವ ಅನುಶ್ರೀ ಅವರು ಬಹಳ ಸಂತೋಷದಿಂದ, ಗಂಧದಗುಡಿ ಪ್ರೀ ರಿಲೀಸ್ ಇವೆಂಟ್, ಪುನೀತ ಪರ್ವದ ನಿರೂಪಣೆಯನ್ನು ಅದ್ಧೂರಿಯಾಗಿ ಮಾಡಿದರು, ಈ ಕಾರ್ಯಕ್ರಮ ನಿರೂಪಣೆ ಮಾಡಲು ಬರೋಬ್ಬರಿ 1,50,000 ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.