ವೇದಿಕೆಯಲ್ಲಿಯೇ ರಿಷಬ್ ಶೆಟ್ಟಿ ಗೆ ಭರ್ಜರಿ ಆಫರ್ ಕೊಟ್ಟ ಅಲ್ಲೂ ಅರ್ಜುನ್ ತಂದೆ: ಒಂದೇ ನೇರ ಮಾತಿನಲ್ಲಿ ಅಲ್ಲೂ ಅರವಿಂದ್ ಕೊಟ್ಟ ಡೀಲ್ ಹೇಗಿದೆ ಗೊತ್ತೇ??

24

ಎಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್ ನಲ್ಲದೆ ಬೇರೇ ಕಡೆ ಕೂಡ ಸದ್ದು ಮಾಡುತ್ತಿರುವ ಚಿತ್ರ ಎಂದರೆ ನಟ ರಿಷಬ್ ಶೆಟ್ಟಿ ರವರ ‘ಕಾಂತಾರ’ ಈ ಸಿನಿಮಾ ಎಲ್ಲೆಡೆ ವಿಜಯ ಸಾಧಿಸಿರುವುದರಿಂದ ಅಭಿಮಾನಿಗಳು ರಿಶಬ್ ರವರಿಗೆ ಮುಂದೇನು ಎಂಬ ಪ್ರಶ್ನೆಯನ್ನು ಮುಂದೆ ಇಟ್ಟಿದ್ದಾರೆ. ಟಾಲಿವುಡ್‌ನಲ್ಲೂ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಇದೇ ಸಕ್ಸಸ್ ನ ಸಂಭ್ರಮದಲ್ಲಿ ಅಲ್ಲು ಅರವಿಂದ್ ರವರು ಹೈದರಾಬಾದ್‌ ಪ್ರಸಾದ್ ಲ್ಯಾಬ್‌ನಲ್ಲಿ ಪ್ರೆಸ್ ಮೀಟ್ ಅನ್ನು ಆಯೋಜಿಸಲಾಗಿತ್ತು. ಹಾಗಾದರೆ ಸಕ್ಸಸ್ ಪ್ರೆಸ್‌ಮೀಟ್‌ನಲ್ಲಿ ಏನೂ ನಡೆಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಕಾಂತಾರ ಸಿನಿಮಾ ಕನ್ನಡ ಭಾಷೆಯಎಲ್ಲದೆ ತೆಲುಗೂ ಭಾಷೆಗೂ ಅನುವಾದ ಆಗಿ ಶನಿವಾರ ಬಿಡುಗಡೆಯಾಗಿತ್ತು , ಇದರ ವಿತರಣೆಯನ್ನು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ‘ಕಾಂತಾರ’ ಸಿನಿಮಾ ವಿತರಣೆಯ ಹಕ್ಕು ಖರೀದಿಸಿದ್ದರು. ಬಿಡುಗಡೆಯಾದ ನಾಲ್ಕೇ ದಿನದಲ್ಲಿ 20 ಕೋಟಿ ರೂ.ಗೂ ಅಧಿಕ ಹಣ ಗಳಿಸಿದೆ. ಒಂದು ಸಿನಿಮಾವೊಂದು ಡಬ್ ಆಗಿ ಈ ಮಟ್ಟಿಗೆ ಹೆಸರು ಮಾಡುತ್ತಿರುವುದನ್ನು ಕಂಡು ಟಾಲಿವುಡ್ ಮಂದಿ ಆಶ್ಚರ್ಯ ಪಟ್ಟಿದ್ದಾರೆ. ಇದರ ಬೆನ್ನಲ್ಲೇ ಹೈದರಾಬಾದ್‌ ಪ್ರಸಾದ್ ಲ್ಯಾಬ್‌ನಲ್ಲಿ ಸಕ್ಸಸ್ ಮೀಟ್ ಮಾಡಿ ಎಲ್ಲರಿಗೂ ಧನ್ಯವಾದ ತಿಳಿಸಿ, ಕಾಂತಾರ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ನಲ್ಲಿ ‘ಕಾಂತಾರ’ ತೆಲುಗು ಸಕ್ಸಸ್ ಮೀಟ್ ನಲ್ಲಿ ಅಲ್ಲು ಅರವಿಂದ್ ಮಾತನಾಡಿ ಬನ್ನಿ ವಾಸು ರವರು ನನಗೆ ಕಾಂತಾರ ನೋಡಲು ಹೇಳಿದ್ದು, ಚಿತ್ರ ನೋಡಿದ ನನಗೆ ನಿಜಕ್ಕೂ ಅಚ್ಚರಿಯಾಯಿತು. ಚಿತ್ರ ನೋಡಿದ ಕೂಡಲೆ ಚಿತ್ರದ ಬಗ್ಗೆ ಕುರಿತು ರಿಷಬ್ ರವರ ಜೊತೆ ಮಾತನಾಡಿ ಅನುಭವ ಹಂಚಿಕೊಂಡು ನಂತರ ತೆಲುಗು ಭಾಷೆಯ ಅನುವಾದದ ವಿತರಣೆಯನ್ನು ನಾನೇ ವಹಿಸಿಕೊಂಡೆ ಎಂದು ಹೇಳಿ, ಕೊನೆಗೆ ನಾನು ರಿಷಬ್ ಶೆಟ್ಟಿ ಅವರ ಜೊತೆ ನಮ್ಮ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದೇನೆ, ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.