ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿ ಅಬ್ಬರಿಸುತ್ತಿರುವ ದಿನೇಶ್ ಕಾರ್ತಿಕ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ರಿಕ್ಕಿ ಪಾಂಟಿಂಗ್. ಹೇಳಿದ್ದೇನು ಗೊತ್ತೇ??

109

ದಿನೇಶ್ ಕಾರ್ತಿಕ್, ಛಲ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು ಅದಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ ಎಂದು ತೋರಿಸಿಕೊಟ್ಟವರು. ಪ್ರಸ್ತುತ ದಿನೇಶ್ ಕಾರ್ತಿಕ್ ಅವರು ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ. ಬಹಳ ಸಮಯದಿಂದ ಭಾರತ ತಂಡದಿಂದ ದೂರ ಉಳಿದಿದ್ದ ದಿನೇಶ್ ಕಾರ್ತಿಕ್ ಅವರು, ಈ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದರು. ಎಲ್ಲಾ ಸೀರೀಸ್ ಗಳಲ್ಲೂ ಫಿನಿಷರ್ ಆಗಿ ಉತ್ತಮ ಪಾತ್ರ ನಿರ್ವಹಿಸಿರುವ ದಿನೇಶ್ ಕಾರ್ತಿಕ್ ಅವರು ತಮ್ಮ ಕನಸಿನ ಹಾಗೆ ಇಂದು ವಿಶ್ವಕಪ್ ತಂಡದ ಭಾಗವಾಗಿದ್ದಾರೆ.

ದಿನೇಶ್ ಕಾರ್ತಿಕ್ ಅವರು ಮತ್ತೊಮ್ಮೆ ಟೀಮ್ ಇಂಡಿಯಾ ಸೇರಿಕೊಳ್ಳುತ್ತಾರೆ ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಇಂತಹ ಅದ್ಭುತವಾದ ಕಂಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್ ಅವರ ಬಗ್ಗೆ ಅಸ್ಟ್ರೇಲಿಯಾದ ಮಾಜಿ ಅದ್ಭುತ ಆಟಗಾರ ರಿಕ್ಕಿ ಪಾಂಟಿಂಗ್ ಅವರು ಮಾತನಾಡಿದ್ದಾರೆ, “ಇಂಗ್ಲೆಂಡ್ ನಲ್ಲಿ ದಿನೇಶ್ ಕಾರ್ತಿಕ್ ಅವರು ಕಷ್ಟಪಡುವಾಗ ಮತ್ತೆ ಅವರು ಟೀಮ್ ಇಂಡಿಯಾಗೆ ಬರುತ್ತಾರೆ ಎಂದುಕೊಂಡಿರಲಿಲ್ಲ, ಅವರ ಕೆರಿಯರ್ ಇಲ್ಲಿಗೆ ಮುಗಿಯಿತು ಎಂದೇ ಭಾವಿಸಿದ್ದೆ. ಈ ರೀತಿ ಕಂಬ್ಯಾಕ್ ಮಾಡುವುದು ಈಸಿ ಅಲ್ಲ, ಅದಕ್ಕೆ ದೊಡ್ಡ ಮಟ್ಟದಲ್ಲಿ ಡೆಡಿಕೇಶನ್ ಮತ್ತು ಧ್ಯೇಯ ಬೇಕಿರುತ್ತದೆ. ಮೂರು ಸ್ವರೂಪದ ಕ್ರಿಕೆಟ್ ನಲ್ಲೂ ಅವರ ವೃತ್ತಿ ಜೀವನ ಮುಗಿಯಿತು ಎಂದೇ ನಾನು ಭಾವಿಸಿದ್ದೆ. ಕೆಕೆಆರ್ ತಂಡಕ್ಕೆ ಇವರು ಉಳಿದ ಆಟಗಾರ ಆಗಿರಲಿಲ್ಲ.

ಕಾರ್ತಿಕ್ ಅವರು ಟಿ20 ಪಂದ್ಯಗಳ ಅತ್ಯುತ್ತಮ ಫಿನಿಷರ್ ಆಗಿದ್ದಾರೆ. ಆದರೆ ಕಾರ್ತಿಕ್ ಅವರ ಕೆರಿಯರ್ ಈಗ ಮುಗಿಯಿತು, ಕಾಮೆಂಟರಿ ಬಾಕ್ಸ್ ಗೆ ತಮ್ಮನ್ನು ತಾವು ಸೀಮಿತವಾಗಿ ಮಾಡಿಕೊಳ್ಳುತ್ತಾರೇನೋ ಎಂದು ಅನ್ನಿಸಿತ್ತು. ಆದರೆ ಕಳೆದ ಎರಡು ತಿಂಗಳ ಸಮಯದಲ್ಲಿ ಅವರ ವೃತ್ತಿಜೀವನವೇ ಬದಲಾಗಿ, ದೊಡ್ಡ ತಿರುವು ಪಡೆದುಕೊಂಡಿತು. ಇದು ನನಗೆ ಬಹಳ ಸಂತೋಷ ಮತ್ತು ಆಶ್ಚರ್ಯ ಉಂಟು ಮಾಡಿದೆ. ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಮೊದಲ ಪಂದ್ಯ ಆಡಲಿದೆ, ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಆಡುವ ಸಾಧ್ಯತೆ ಹೆಚ್ಚಿದೆ. ಕಾರ್ತಿಕ್ ಅವರು ತಂಡದ ಫಿನಿಷರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ, 6 ಅಥವಾ 7ನೇ ಕ್ರಮಾಂಕಕ್ಕೆ ಸೂಕ್ತವಾಗಿದ್ದಾರೆ. 37ರ ಹರೆಯದಲ್ಲಿ ಕಾರ್ತಿಕ್ ಅವರು ಕಂಬ್ಯಾಕ್ ಮಾಡುವುದು ಸುಲಭದ ವಿಚಾರ ಅಲ್ಲ..” ಎಂದಿದ್ದಾರೆ ರಿಕ್ಕಿ.