ವೇದಿಕೆ ಮೇಲಿಂದ ಅಳುತ್ತಾ ಹೋದ ಅಶ್ವಿನಿ ಅವರನ್ನ ನೋಡಿ ರವಿಚಂದ್ರನ್ ಎಂಥಹ ಕೆಲಸ ಮಾಡಿದ್ದಾರೆ ಗೊತ್ತಾ??

214

ಅಪ್ಪು ಅವರನ್ನು ನೆನೆದರೆ ಇಂದಿಗೂ ಎಲ್ಲರ ಕಣ್ಣಲ್ಲೂ ಕಣ್ಣೀರು ಬರುತ್ತದೆ. ಅಷ್ಟು ಚಿಕ್ಕ ವಯಸ್ಸಿಗೆ ಅಪ್ಪು ಅವರಿಗೆ ಆ ರೀತಿ ಆಗುತ್ತದೆ ಎಂದು ಯಾರು ಕೂಡ ಭಾವಿಸಿರಲಿಲ್ಲ. ಇಂದಿಗೂ ಆ ನೋವು ಎಲ್ಲರಲ್ಲೂ ಕಾಡುತ್ತಿದೆ. ಅಪ್ಪು ಅವರು ಮೃತರಾಗಿ ಈಗ ಒಂದು ವರ್ಷ ಆಗಲಿದೆ, ಆಕ್ಟೊಬರ್ 28ರಂದು ಅಪ್ಪು ಅವರ ಕೊನೆಯ ದೊಡ್ಡ ಕನಸು ಗಂಧದಗುಡಿ ಬಿಡುಗಡೆ ಆಗಲಿದ್ದು, ಅದರ ಪ್ರೀರಿಲಿಸ್ ಇವೆಂಟ್ ನಡೆಯಿತು. ಬೆಂಗಳೂರು ಅರಮನೆ ಮೈದಾನದಲ್ಲಿ ನಿನ್ನೆ ಅದ್ಧೂರಿಯಾಗಿ ನಡೆಯಿತು ಪುನೀತ ಪರ್ವ ಕಾರ್ಯಕ್ರಮ.

ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದ ಸಾಕಷ್ಟು ಕಲಾವಿದರು ನಿನ್ನೆಯ ಕಾರ್ಯಕ್ರಮಕ್ಕೆ ಬಂದಿದ್ದರು. ನಿನ್ನೆ ಎಂಥಹ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಯಿತೋ ಅದೇ ರೀತಿ ಭಾವನಾತ್ಮಕ ಕ್ಷಣಗಳಿಗು ಸಾಕ್ಷಿಯಾಯಿತು. ಇಡೀ ದೊಡ್ಮನೆ ಕುಟುಂಬ ವೇದಿಕೆ ಮೇಲೆ ಬಂದು, ವಿಜಯ್ ಪ್ರಕಾಶ್ ಅವರೊಡನೆ ಬೊಂಬೆ ಹೇಳುತೈತೆ ಹಾಡನ್ನು ಹಾಡಿದ ಆ ಕ್ಷಣ ಎಲ್ಲರೂ ಭಾವುಕರಾದರು. ವೇದಿಕೆ ಮೇಲೆ ಹಾಡುತ್ತಿದ್ದಾಗ, ದೊಡ್ಮನೆ ಸದಸ್ಯರಿಗೂ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಕಣ್ಣೀರು ಹಾಕುತ್ತಲೇ ಅಪ್ಪು ಅವರಿಗಾಗಿ ಹಾಡನ್ನು ಹಾಡಿದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವೇದಿಕೆಯ ಮೇಲೆ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದರು.

ಕಣ್ಣೀರು ಹಾಕುತ್ತಲೇ ಹಾಡು ಕೇಳಿ, ಅಭಿಮಾನಿಗಳಿಗೆ ನಮಸ್ಕರಿಸಿ ವೇದಿಕೆಯಿಂದ ಕೆಳಗಿಳಿದರು. ಅಶ್ವಿನಿ ಅವರು ಭಾವುಕರಾಗಿ ಇದ್ದಿದ್ದನ್ನು ನೋಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಶ್ವಿನಿ ಅವರನ್ನು ಕರೆದು, ಸಮಾಧಾನ ಮಾಡಿ, ಕುಳಿತುಕೊಳ್ಳುವ ಹಾಗೆ ಸೂಚನೆ ನೀಡಿದರು. ರವಿಚಂದ್ರನ್ ಅವರಿಗೆ ಅಪ್ಪು ಅವರು ಮತ್ತು ಅವರ ಕುಟುಂಬದ ಮೇಲಿರುವ ಕಾಳಜಿ ಇಲ್ಲಿ ಗೊತ್ತಾಗುತ್ತದೆ. ಅಷ್ಟೇ ಅಲ್ಲದೆ, ಅಪ್ಪು ಅವರ ವೇದಿಕೆ ಮೇಲೆ ಮಾತನಾಡಿದ ರವಿಚಂದ್ರನ್ ಅವರು, ಅಪ್ಪು ಇಂದ ನಾನು ಅದೃಷ್ಟವಂತನಾದೆ ಎಂದು ಹೇಳಿದರು.