Kannada astrology: ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೇ, ತುಳಸಿ ಗಿಡದ ಜೊತೆ ಈ ಚಿಕ್ಕ ಕೆಲಸ ಮಾಡಿ ಸಾಕು, ಲಕ್ಷ್ಮಿ ತಾಯಿ ಮನೆ ಹುಡುಕಿಕೊಂಡು ಬರುತ್ತಾರೆ.

211

ಪ್ರತಿ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಕಾಣುವುದು ಸರ್ವೇಸಾಮಾನ್ಯ ತುಳಸಿ ಗಿಡವನ್ನು ದೇವರೆಂದು ಭಾವಿಸುವ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪವಿತ್ರ ಸ್ಥಾನವಿದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಗೆ ಹೋಲಿಸಲಾಗಿದೆ ತುಳಸಿ ಗಿಡವು ಲಕ್ಷ್ಮಿ ಸ್ವರೂಪವಾಗಿದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡಕ್ಕೆ ಪ್ರತಿನಿತ್ಯ ಪೂಜೆ ಮಾಡುವುದರಿಂದ ಲಕ್ಷ್ಮಿಯು ಹೊಳಿಯುತ್ತಾಳೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿರುವುದರಿಂದ ಶ್ರೀ ವಿಷ್ಣುವಿನ ಕೃಪೆಯೂ ಲಭಿಸುತ್ತದೆ . ತುಳಸಿ ಗಿಡವನ್ನು ಮನೆ ಮುಂದೆ ಹಾಗೂ ಅಂಗಳದಲ್ಲಿ ಹಾಕುವುದರಿಂದ ಮನೆಯಲ್ಲಿ ನಕಾರಾತ್ಮಕತೆ ತೊಲಗಿ ಸಕಾರಾತ್ಮಕತೆ ಪ್ರಾಪ್ತಿಯಾಗುತ್ತದೆ. ವಿಷ್ಣುವಿನ ಅನೇಕ ರೂಪದಲ್ಲಿ ಒಂದಾದ ಸಾಲಿಗ್ರಾಮವು ತುಳಸಿ ಗಿಡದ ಬೇರುಗಳಲ್ಲಿ ನೆಲೆಸಿರುತ್ತಾನೆ . ಜೋತಿಷ್ಯ ಶಾಸ್ತ್ರ ದಲ್ಲಿ ಸಾಲಿಗ್ರಾಮ ಮತ್ತು ತುಳಸಿ ವಿವಾಹವನ್ನು ಮಾಡಲಾಗಿದೆ ಎಂಬ ಪ್ರತೀತಿ ಇರುವುದರಿಂದ ತುಳಸಿ ಗಿಡದಲ್ಲಿ ಲಕ್ಷ್ಮಿಯ ಅಂಶದ ಜೊತೆಗೆ ವಿಷ್ಣುವಿನ ಕೃಪೆಯು ಇದೆ ಎಂದು ಹೇಳಲಾಗುತ್ತದೆ.

ಮನುಷ್ಯರ ಸಮಸ್ಯೆಗಳಿಂದ ಮುಕ್ತಿ ಹೊಂದಲು ತುಳಸಿ ಗಿಡವನ್ನು ಯಾವ ರೀತಿಯ ಕ್ರಮವನ್ನು ವಹಿಸಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ. ಹಣಕಾಸಿನ ಸಮಸ್ಯೆ ನಿವಾರಿಸಲು ತುಳಸಿ ಗಿಡವನ್ನು ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರೀತಿಯ ಕ್ರಮವನ್ನು ಅನುಸರಿಸಬೇಕು? ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ರೀತಿಯ ಒತ್ತಡಕ್ಕೆ ಒಳಗಾಗಿರುತ್ತಾನೆ ಹಾಗಾದರೆ ಈ ಒತ್ತಡವನ್ನು ನಿಯಂತ್ರಿಸಲು ಹಾಗೂ ಮನಸ್ಸಿನಲ್ಲಿ ಶಾಂತಿ ಮೂಡಿಸಲು ತುಳಸಿ ಗಿಡದ ಬೇರುಗಳನ್ನು ಸಣ್ಣ ಮಾಳೆಯಾಗಿ ಮಾಡಿ ಕೊರಳಿಗೆ ಧರಿಸುವುದರಿಂದ ಒತ್ತಡವನ್ನು ನಿಯಂತ್ರಿಸಿ ಯಾವುದೇ ನಕಾರಾತ್ಮಕ ಶಕ್ತಿ ತಮ್ಮತ್ತ ಸುಳಿಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಈ ತುಳಸಿ ಬೇರಿನ ಮಾಲೆಯನ್ನು ಧರಿಸುವುದರಿಂದ ಆರ್ಥಿಕ ಅಭಿವೃದ್ಧಿ ಸಾಧಿಸಬಹುದು.

ಮನುಷ್ಯನೂ ಎಲ್ಲಾ ಕೆಲಸದಲ್ಲೂ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ ಕೆಲ ಜನರು ತಾವು ಹಾಕಿದ ಎಲ್ಲಾ ಕೆಲಸದಲ್ಲೂ ವೈಫಲ್ಯವನ್ನು ಎದುರಿಸಿರುತ್ತಾರೆ. ಅಂತಹ ಜನರು ತುಳಸಿ ಗಿಡದ ಬೇರುಗಳನ್ನು ತೆಗೆದುಕೊಂಡು ಪವಿತ್ರ ಗಂಗಾಜಲದಲ್ಲಿ ತೊಳೆದು ಅದನ್ನು ಭಕ್ತಿಯಿಂದ ದೇವರ ಮುಂದೆ ಇಟ್ಟು ಧೂಪದಿಂದ ಪೂಜಿಸಿ ಹಳದಿ ಬಟ್ಟೆಯಲ್ಲಿ ಅದನ್ನು ಭದ್ರವಾಗಿ ಕಟ್ಟಿಕೊಂಡು ಯಾವಾಗಲೂ ತಮ್ಮ ಜೊತೆಯಲ್ಲಿ ಇರಿಸಿಕೊಂಡರೆ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು . ಮನುಷ್ಯನ ಜಾತಕದಲ್ಲಿ ಗ್ರಹಗಳು ಚಲಿಸುವುದು ಸರ್ವೇಸಾಮಾನ್ಯ ಕೆಲವು ಸಲ ಗ್ರಹಗಳು ಮನುಷ್ಯನಿಗೆ ವಿರುದ್ಧವಾಗಿರುತ್ತವೆ. ಇಂತಹ ಗ್ರಹಗಳನ್ನು ಸರಿಯಾದ ದಾರಿಗೆ ತಂದು ದೋಷ ಪರಿಹಾರ ಮಾಡುವಲ್ಲಿ ತುಳಸಿ ಬೇರು ಸಹಾಯ ಮಾಡುತ್ತದೆ ತುಳಸಿ ಗಿಡವನ್ನು ಭಕ್ತಿಯಿಂದ ಪೂಜೆ ಮಾಡಿ ನಂತರ ಅದರ ಬೇರಿಗೆ ನೀರು ಹಾಕಿ ಬೇರನ್ನು ತೆಗೆದು ಅದನ್ನು ತಮ್ಮ ಕೊರಳಿನಲ್ಲಿರುವ ತಾಯತ ಅಥವಾ ಕೆಂಪು ಬಣ್ಣದ ಬಟ್ಟೆಗೆ ಹಾಕಿ ಕಟ್ಟಿಕೊಳ್ಳುವುದರಿಂದ ಗ್ರಹಗಳ ದೋಷವನ್ನು ಪರಿಹಾರ ಮಾಡಬಹುದು.

ತುಳಸಿ ಗಿಡವನ್ನು ನೆಟ್ಟಾಗ ಅದರ ಜೊತೆ ಒಮ್ಮೆಯಾದರೂ ಇತರ ಗಿಡಗಳು ಬೆಳೆಯುವುದು ಖಚಿತ ಇಂತಹ ಗಿಡಗಳನ್ನೂ ಏನೂ ಮಾಡಬೇಕು ಎಂಬುದರ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಅದಕ್ಕೆ ಪರಿಹಾರ .
ತುಳಸಿ ಗಿಡ ನೆಟ್ಟ ಜಾಗದಲ್ಲಿ ಬೇರೆ ಗಿಡಗಳು ಬೆಳೆಯುತ್ತವೆ. ಕೆಲವೊಮ್ಮೆ ಮತ್ತೊಂದು ತುಳಸಿ ಗಿಡವೇ ಬೆಳೆಯುತ್ತದೆ. ಇಂತಹ ಸ್ಥಿತಿಯಲ್ಲಿ ಏಕಾದಶಿಯಂದು ದಿನದಂದೂ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿ ಅದರ ಬಳಿ ಇರುವ ಗಿಡವನ್ನು ಕಿತ್ತು ಹರಿಶಿನ ಬಟ್ಟೆಯಲ್ಲಿ ಸುತ್ತಿ ಮನೆಯ ಅಂಗಳದಲ್ಲಿ ಹೂಳುವುದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂಪತ್ತು ಯಾವಾಗಲೂ ಲಭಿಸುತ್ತದೆ. ಜೊತೆಗೆ ಲಕ್ಷ್ಮೀ ವಿಷ್ಣುವಿನ ಕೃಪೆಯು ನಿಮ್ಮ ಮನೆಯ ಮೇಲೆ ಇರುತ್ತದೆ.