ಅಪ್ಪು ಹಾಗೂ ದರ್ಶನ್ ಅಭಿಮಾನಿಗಳಿಗೆ ಒಮ್ಮೆಲೇ ಶಾಕ್ ಕೊಟ್ಟ ಸುದೀಪ್: ಕೊನೆ ಕ್ಷಣದಲ್ಲಿ ಸುದೀಪ್ ಮಾಡಿದ್ದೇನು ಗೊತ್ತೆ??

2,394

ಅಕ್ಟೋಬರ್ 21 ರಂದು ಪುನೀತ್ ರಾಜಕುಮಾರ್ ರವರ ಕನಸಾದ ಗಂಧದ ಗುಡಿ ಪ್ರೀ ರಿಲೀಸ್ ಅನ್ನು ಪುನೀತ ಪರ್ವ ಎಂಬ ಹೆಸರಿನಲ್ಲಿ ಆಯೋಜಿಸುತ್ತಿರುವ ವಿಷಯ ಈಗಾಗಲೇ ಎಲ್ಲೆಡೆ ಸುಳಿದಾಡುತ್ತಿದೆ. ಈ ಆಯೋಜನೆಯ ಎಲ್ಲಾ ಉಸ್ತುವಾರಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರೆ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಇಡೀ ಭಾರತದ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಗಣ್ಯರಿಗೂ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮಕ್ಕೆ ದರ್ಶನ್, ಯಶ್, ಉಪೇಂದ್ರ ಹಾಗೂ ಕಿಚ್ಚ ಸುದೀಪ ರವರನ್ನೂ ಸೇರಿದಂತೆ ಇನ್ನೂ ಹಲವು ನಟರು ಭಾಗಿಯಾಗಲಿದ್ದಾರೆ ಎಂದು ಅಂತ ಅಪ್ಪು ಅಭಿಮಾನಿಗಳು ಹಾಗೂ ಕೆಲ ಮಾದ್ಯಮಗಳು ಇದರ ಬಗ್ಗೆ ಹೇಳಿದ್ದರು. ಆದರೆ ಸುದೀಪ ರವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಬರುವಿಕೆಯ ಬಗ್ಗೆ ಅಭಿಮಾನಿಗಳಿಗೆ ಒಂದು ಶಾಕಿಂಗ್ ನೀಡಿದ್ದಾರೆ. ಹಾಗಾದರೆ ಏನಿದು ಆ ಶಾಕ್ ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ಅದರ ಬಗ್ಗೆ ಮಾಹಿತಿ.

ಹೌದು ಪುನೀತ ಪರ್ವ ಕಾರ್ಯಕ್ರಮಕ್ಕೆ ಬರುವಿಕೆಯ ಬಗ್ಗೆ ಕಿಚ್ಚ ಸುದೀಪ ರವರು ಅಭಿಮಾನಿಗಳಿಗೆ ಒಂದು ಶಾಕ್ ನೀಡಿದ್ದನೀಡಿದ್ದಾರೆ ಕಿಚ್ಚ ಸುದೀಪ ರವರ ಆಸ್ಟ್ರೇಲಿಯಾ ಪ್ರವಾಸ ನಿಗದಿಯಾಗಿದ್ದರಿಂದ ಈ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಅನ್ನೋ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.ಇದೇ ಅಕ್ಟೋಬರ್ 18 ರಂದು ಕಿಚ್ಚ ಸುದೀಪ ಹಾಗೂ ಪ್ರಿಯಾ ರವರು ವೈವಾಹಿಕ ಜೀವನಕ್ಕೆ ಕಾಲಿಟ್ಟು 21 ವರ್ಷಗಳಾಗಿವೆ. ಇದೇ ಮೂಡ್‌ನಲ್ಲಿರುವ ಸುದೀಪ ದಂಪತಿ ವಿದೇಶ ಪ್ರಯಾಣಕ್ಕೆ ಸಜ್ಜಾಗುತ್ತಿರೋ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿರೋ ‘ವಿಕ್ರಾಂತ್ ರೋಣ’ ಒಂದೆಡೆಯಾದರೆ, ಇನ್ನೊಂದು ಕಡೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪುನೀತ ಪರ್ವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುತ್ತಿದ್ದಾರೆ ಅಂತಾನೂ ಹೇಳಲಾಗಿದೆ . ಇಷ್ಟಕ್ಕೂ ಕಿಚ್ಚ ಸುದೀಪ ರವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿರುವುದು ಸತ್ಯವೇ ಎನ್ನುವುದು ಖಚಿತವಿಲ್ಲ.

21ನೇ ವರ್ಷಕ್ಕೆ ಕಾಲಿಟ್ಟಿರುವ ವೈವಾಹಿಕ ಜೀವನದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕಿಚ್ಚ ಸುದೀಪ ಹಾಗೂ ಅವರ ಪತ್ನಿ ಪ್ರಿಯಾ ರವರು ಇದ್ದಾರೆ. ಸ್ನೇಹದಿಂದ ಶುರುವಾದ ಇವರ ಪರಿಚಯ ವಿವಾಹದ ವರೆಗೂ ಕರೆದೊಯ್ಯಿತು. ಅಲ್ಲಿಂದ ಇಲ್ಲಿವರೆಗೂ ಯಶಸ್ವಿಯಾಗಿ ವೈವಾಹಿಕ ಜೀವನವನ್ನು ನಡೆಸಿದ್ದಾರೆ. ಅದರ ಜೊತೆಗೆ ಈ ವರ್ಷ ತೆರೆಕಂಡ ಕನ್ನಡ ಸಿನಿಮಾಗಳ ಪೈಕಿ ಬ್ಲಾಕ್‌ಬಸ್ಟರ್ ಹಿಟ್ ಆಗಿರೋ ಸಿನಿಮಾ ‘ವಿಕ್ರಾಂತ್ ರೋಣ’. ಕಿಚ್ಚನಿಗೆ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಯಶಸ್ಸು ತಂದುಕೊಟ್ಟಿದೆ. ಹೀಗಾಗಿ ಈ ಸಿನಿಮಾದ ಖುಷಿಯ ಸಂಭ್ರಮದಲ್ಲಿದ್ದಾರೆ. ಸುದೀಪ ರವರು ಅವರ ಕುಟುಂಬದ ಜೊತೆ ಸಮಯ ಕಳೆದು ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ ಅನ್ನೋ ಮಾತಿದೆ. ಜೊತೆಗೆ ಅಕ್ಟೋಬರ್ 23ರಂದು ಭಾರತ ಹಾಗೂ ಪಾಕಿಸ್ತಾನ್ ನಡುವಿನ ವಿಶ್ವಕಪ್ ಪಂದ್ಯವನ್ನು ವೀಕ್ಷಣೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಕಿಚ್ಚ ಸುದೀಪ ರವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಬರುವುದಿಲ್ಲ ಅನ್ನೋ ಮಾತು ಹರಿದಾಡುತ್ತಿದೆ. ಆದರೆ. ಇವೆಲ್ಲದರ ಬಗ್ಗೆ ಕಿಚ್ಚ ಸುದೀಪ ರವರ ಅಧಿಕೃತ ಗುಂಪು ಇನ್ನೂ ಸ್ಪಷ್ಟಪಡಿಸಿಲ್ಲ. ಸುದೀಪ್ ಕಾರ್ಯಕ್ರಮಕ್ಕೆ ಬರುವರೊ ಇಲ್ಲವೋ ಇನ್ನೂ ಖಚಿತವಿಲ್ಲ.