ರವಿಚಂದ್ರನ್ ರವರ ಸಹಾಯಕ್ಕೆ ನಿಂತ ಸ್ಯಾಂಡೆಲ್ವುಡ್ ಕರ್ಣ: ಸ್ನೇಹಿತನ ಕಷ್ಟ ಕೇಳಿ ಶಿವಣ್ಣ ಹೇಳಿದ್ದೇನು ಗೊತ್ತೇ?? ಮುಗಿಯಿತು ಕಷ್ಟಕಾಲ

92

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇಂದು ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ, ರವಿಚಂದ್ರನ್ ಅವರು ಇತ್ತೀಚೆಗೆ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಿದರು, ಒಂದೆರಡೇ ವರ್ಷಗಳ ಹಿಂದೆ ಮಗಳ ಮದುವೆಯನ್ನು ಇಡೀ ಚಿತ್ರರಂಗ ತಿರುಗಿ ನೋಡುವ ಹಾಗೆ ಅದ್ಧೂರಿಯಾಗಿ ಮಾಡಿದರು. ಆದರೆ ಈಗ ರವಿಚಂದ್ರನ್ ಅವರು ಕಷ್ಟದಲ್ಲಿದ್ದಾರೆ. ಮಕ್ಕಳ ಮದುವೆ, ಹಾಗು ಇತ್ತೀಚೆಗೆ ರವಿಚಂದ್ರನ್ ಅವರು ಬಹಳಷ್ಟು ಕನಸು ಕಂಡು ರವಿ ಬೋಪಣ್ಣ ಸಿನಿಮಾವನ್ನು ತಾವೇ ನಿರ್ದೇಶನ ಮಾಡಿ ನಿರ್ಮಾಣ ಸಹ ಮಾಡಿದರು.

ಆದರೆ ರವಿಚಂದ್ರನ್ ಅವರ ರವಿ ಬೋಪಣ್ಣ ಸಿನಿಮಾ ನೆಲಕಚ್ಚಿತು, ಯಶಸ್ಸು ಪಡೆಯಲಿಲ್ಲ. ಸಾಲ ಮಾಡಿ ಸಿನಿಮಾ ಮಾಡಿದ್ದ ರವಿಚಂದ್ರನ್ ಅವರನ್ನು ಕಷ್ಟಕ್ಕೆ ದೂಡಿತು. ತಮ್ಮ ಸಿನಿಮಾ ಚೆನ್ನಾಗಿದೆ, ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ ಎಂದುಕೊಂಡಿದ್ದರು, ಆದರೆ ಸಿನಿಮಾ ಸೋಲು ಕಂಡಿತು. ಅದರಿಂದಾಗಿ ಸಾಲ ಮಾಡಿದ್ದ ಕ್ರೇಜಿಸ್ಟಾರ್ ಅವರು ರಾಜಾಜಿನಗರದ ಮನೆಯನ್ನು ಖಾಲಿ ಮಾಡಿ, ಬೇರೆ ಕಡೆಗೆ ಹೋಗುವ ಹಾಗೆ ಆಯಿತು. ಈ ಕಷ್ಟವನ್ನು ಯಾರೊಂದಿಗೂ ಅವರು ಹೇಳಿಕೊಂಡಿರಲಿಲ್ಲ, ಈ ನೋವಿನಿಂದ ಹೆಚ್ಚಾಗಿ ಹೊರಗಡೆ ಸಹ ಕಾಣಿಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ತಮ್ಮ ಕಷ್ಟದ ಬಗ್ಗೆ ಹೇಳಿಕೊಂಡಿದ್ದರು.

ರವಿಚಂದ್ರನ್ ಅವರ ಈ ಕಷ್ಟ ನೋಡಿ, ಅವರ ಬಹುಕಾಲದ ಶಿವ ರಾಜ್ ಕುಮಾರ್ ಅವರು ಬೇಸರ ಮಾಡಿಕೊಂಡು ಮಾತನಾಡಿದ್ದಾರೆ, “ರವಿಚಂದ್ರನ್ ಅವರು ಹಠವಾದಿ, ತಮ್ಮ ಕನಸುಗಳ ಹಾಗೆ ಸಿನಿಮಾ ಕೂಡ ಶ್ರೀಮಂತವಾಗಿರುವ ಹಾಗೆ ಚಿತ್ರೀಕರಣ ಮಾಡುತ್ತಿದ್ದರು. ಅವರಂತಹ, ನಟ, ನಿರ್ದೇಶಕ ಮತ್ತು ನಿರ್ಮಾಪಕ ಮತ್ತೊಬ್ಬರು ಇರಲು ಸಾಧ್ಯವಿಲ್ಲ. ನಮ್ಮ ಕನ್ನಡ ಚಿತ್ರರಂಗ ಪೂರ್ತಿ ಅವರ ಜೊತೆಗೆ ಬೆಂಬಲವಾಗಿ ನಿಂತುಕೊಳ್ಳುತ್ತದೆ. ನಾವೆಲ್ಲರೂ ಅವರ ಜೊತೆಗೆ ನಿಲ್ಲುತ್ತೇವೆ.. ರವಿಚಂದ್ರನ್ ಅವರು ಖಂಡಿತವಾಗಿ ಮತ್ತೊಮ್ಮೆ ಸಿನಿಮಾ ಮಾಡಿ ಗೆಲ್ಲುತ್ತಾರೆ..” ಎಂದಿದ್ದಾರೆ ಶಿವಣ್ಣ. ಶಿವಣ್ಣ ಮತ್ತು ರವಿಚಂದ್ರನ್ ಇಬ್ಬರದ್ದು, 3 ದಶಕಕ್ಕಿಂತ ಹೆಚ್ಚಿನ ಸ್ನೇಹ ಆಗಿದೆ. ಇದೀಗ ಶಿವಣ್ಣ ತಮ್ಮಿಬ್ಬರ ಸ್ನೇಹಕ್ಕಾಗಿ ಇಂದು ರವಿಚಂದ್ರನ್ ಅವರಿಗೆ ಸಹಾಯ ಆಗಿ ನಿಂತಿದ್ದಾರೆ.