ಭಾರತ ತಂಡಕ್ಕೆ ಕೊನೆ ಕ್ಷಣದಲ್ಲಿ ಸಿಹಿ ಸುದ್ದಿ: ತಂಡ ಸೇರಿಕೊಂಡ ಮತ್ತೊಬ್ಬ ಬೆಂಕಿ ಬೌಲರ್. ಆಸ್ಟ್ರೇಲಿಯಾ ದಲ್ಲಿ ಈತನೇ ಕಿಂಗ್. ಯಾರು ಗೊತ್ತೇ??

13,275

ಈಗಾಗಲೇ ಆರಂಭವಾಗಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೂಪರ್ 12 ಹಂತಕ್ಕೆ ಆಯ್ಕೆಯಾಗಿದೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವ ಭಾರತ ತಂಡ, ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಇಂದು ಬುಧವಾರ, ಭಾರತದ ತಂಡದ ಎರಡನೇ ಅಭ್ಯಾಸ ಪಂದ್ಯ ನಡೆಯಲಿದ್ದು, ಈ ಬಾರಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಕ್ಷಣಗಣನೇ ಶುರುವಾಗಿದ್ದು, ಇದೀಗ ಭಾರತ ತಂಡಕ್ಕೆ ಕೊನೆಯ ಕ್ಷಣದಲ್ಲಿ ಮತ್ತೊಬ್ಬ ಬೆಂಕಿ ಬೌಲರ್ ಆಯ್ಕೆಯಾಗಿದ್ದು, ಇದನ್ನು ತಿಳಿದ ಕ್ರಿಕೆಟ್ ಅಭಿಮಾನಿಗಳು ಬಹಳ ಸಂತೋಷಪಟ್ಟಿದ್ದಾರೆ.

ಮೊದಲಿಗೆ ಮುಖ್ಯ ಬೌಲರ್ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣದಿಂದ ವಿಶ್ವಕಪ್ ಇಂದ ದೂರ ಆಗುವ ಜಾಗೆ ಆಯಿತು, ಇದರಿಂದಾಗಿ ಭಾರತ ತಂಡಕ್ಕೆ ಬುಮ್ರ ಅವರ ಬದಲಾಗಿ ಹಿರಿಯ ಅನುಭವಿ ಆಟಗಾರ ಮೊಹಮ್ಮದ್ ಶಮಿ ಆಯ್ಕೆಯಾದರು. ಶಮಿ ಅವರು ಮೊದಲೇ ಮೀಸಲು ಆಟಗಾರರ ಪಟ್ಟಿಯಲ್ಲಿ ಇದ್ದ ಕಾರಣ, ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅವರು ಸ್ಥಾನ ಪಡೆದರು. ಸಿರಾಜ್ ಅವರು ಈಗಾಗಲೇ ಆಸ್ಟ್ರೇಲಿಯಾಗೆ ಹೋಗಿ, ತಂಡದ ನೆಟ್ ಬೌಲರ್ ಆಗಿ ಅಭ್ಯಾಸ ಮಾಡುತ್ತಿದ್ದಾರೆ.

ಸ್ಟ್ಯಾಂಡ್ ಬೈ ಆಟಗಾರರ ಪಟ್ಟಿಯಲ್ಲಿರುವ ಸಿರಾಜ್ ಅವರಿಗೆ ಇದು ಒಳ್ಳೆಯ ಅವಕಾಶ ಆಗಿದ್ದು, 15ರ ಬಳಗದಲ್ಲಿ ಯಾರಿಗಾದರೂ ಗಾಯವಾದರು, ಏನಾದರೂ ತೊಂದರೆ ಆದರೆ ಸಿರಾಜ್ ಅವರಿಗೆ ಅವಕಾಶ ಸಿಗುತ್ತದೆ. ಪ್ರಸ್ತುತ ಸಿರಾಜ್ ಅವರು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ, ಜೊತೆಗೆ, ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಮಾಡಿರುವ ಅನುಭವ ಇರುವ ಸಿರಾಜ್ ಅವರು, ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಸಿರಾಜ್ ಅವರು ಮ್ಯಾಚ್ ಗಳಲ್ಲಿ 11ರ ಬಳಗಕ್ಕೆ ಆಯ್ಕೆಯಾದರೆ, ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನಲಾಗುತ್ತಿದೆ. ಆಸ್ಟ್ರೇಲಿಯಾ ತಲುಪಿ ಅಭ್ಯಾಸ ಮಾಡುತ್ತಿರುವ ಸಿರಾಜ್, ಸೋಷಿಯಲ್ ಮೀಡಿಯಾದಲ್ಲಿ ಸಹ ಆಟಗಾರರ ಜೊತೆಗೆ ಫೋಟೋ ಶೇರ್ ಮಾಡಿದ್ದಾರೆ. ವಿಶ್ವಕಪ್ ನಲ್ಲಿ ಆಕ್ಟೊಬರ್ 23 ರಂದು ಪಾಕಿಸ್ತಾನ್ ವಿರುದ್ಧ ಭಾರತ ತಂಡದ ಮೊದಲ ಪಂದ್ಯ ನಡೆಯಲಿದೆ.