ಕಾಂತಾರ ಸಿನಿಮಾ ಮೂಲಕ ದೇಶವನ್ನೇ ಶೇಕ್ ಮಾಡಿರುವ ಸಪ್ತಮಿ ಗೌಡ ರವರ ನಿಜವಾದ ವಯಸ್ಸು ತಿಳಿದರೆ ನೀವು ನಂಬೋದಿಲ್ಲ. ಎಷ್ಟು ಗೊತ್ತೇ??
ಕಾಂತಾರ ಚಿತ್ರ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ತಯಾರಾದ ಕನ್ನಡ ಸೊಗಡಿನ ಈ ಕಥೆ ಇದೀಗ ಬೇರೆ ಬೇರೆ ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಷಭ್ ಶೆಟ್ಟಿ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಚಿತ್ರದ ಲೀಲಾ ಪಾತ್ರಧಾರಿಯ ನಟನೆ, ಅವರ ಸೌಂದರ್ಯಕ್ಕೆ ಜನ ಮಾರುಹೋಗುತ್ತಿದ್ದಾರೆ. ಕಾಂತಾರ ಚಿತ್ರದ ಲೀಲ ಇದೀಗ ಅಭಿಮಾನಿಗಳ ಫೇವರೆಟ್ ಎನಿಸಿಕೊಂಡಿದ್ದಾರೆ. ಅವರ ಸಹಜ ಸೌಂದರ್ಯಕ್ಕೆ ಜನರು ಮಾರು ಹೋಗಿದ್ದಾರೆ. ಫಾರೆಸ್ಟ್ ಗಾರ್ಡಾಗಿ ನಟಿಸಿರುವ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದ ಹಾಗೆ ಇವರ ನಿಜವಾದ ಹೆಸರು ಸಪ್ತಮಿ ಗೌಡ. ತಂದೆ ಕರ್ನಾಟಕ ಕಂಡ ಜನಪ್ರಿಯ ದಕ್ಷ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಆಗಿದ್ದ ಎಸ್ ಕೆ ಉಮೇಶ್. ಹೌದು, ದಕ್ಷ ಪೊಲೀಸ್ ಅಧಿಕಾರಿಯಾದ ಉಮೇಶ್ ಅವರ ಮಗಳು ಸಪ್ತಮಿ ಗೌಡ. ಅವರ ವಯಸ್ಸು ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಿ.
ಇವರು ರಾಷ್ಟ್ರೀಯ ಮಟ್ಟದ ಈಜು ಪಟು ಆಗಿದ್ದರು. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ವಿದೇಶದಲ್ಲಿ ಎಂಎಸ್ ಮಾಡುವ ಕನಸು ಕಂಡಿದ್ದರು. ಅದರಂತೆ ಪ್ರವೇಶ ಪರೀಕ್ಷೆ ಬರೆದು ಉತ್ತೀರ್ಣರು ಆಗಿದ್ದರು. ಇನ್ನೇನು ತಮ್ಮ ಕನಸಿನ ಬೆನ್ನೇರಿ ವಿದೇಶಕ್ಕೆ ಹಾರಬೇಕು ಎನ್ನುವಷ್ಟರಲ್ಲಿ ಕರೋನ ಮಹಾಮಾರಿ ಬಂದು ಅವರ ವಿದೇಶದ ಓದಿನ ಕನಸು ನನಸಾಗಲಿಲ್ಲ. ಇದೇ ಅವಧಿಯಲ್ಲಿ ನಿರ್ದೇಶಕ ಸೂರಿ ತಮ್ಮ ಮುಂದಿನ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಕಲಾವಿದರ ಹುಡುಕಾಟದಲ್ಲಿದ್ದರು. ಸಪ್ತಮಿಯ ತಂದೆ ಸೂರಿಗೆ ಮೊದಲೇ ಪರಿಚಯ ಇರುತ್ತದೆ. ಹೀಗಾಗಿ ಸೂರಿ ನಿಮ್ಮ ಮಗಳನ್ನು ನನ್ನ ಮುಂದಿನ ಆಯ್ಕೆ ಮಾಡಿದ್ದೇನೆ, ನಿಮ್ಮ ಅಭಿಪ್ರಾಯವೇನು ಎಂದಾಗ ಮೊದಲಿಗೆ ಒಪ್ಪದ ಉಮೇಶ್ ಅವರು ನಂತರ ಗ್ರೀನ್ ಸಿಗ್ನಲ್ ಕೊಟ್ಟರು.

ವಿದೇಶದಲ್ಲಿ ಎಂಎಸ್ ಮಾಡುವ ಕನಸು ಕಂಡ ಸಪ್ತಮಿ ಆಕಸ್ಮಿಕವಾಗಿ ನಟನೆಯ ಕಡೆಗೆ ವಾಲಿದರು. ಸಪ್ತಮಿ ಚಿತ್ರದಲ್ಲಿ ಡಾಲಿ ಧನಂಜಯ ಅವರ ಹೆಂಡತಿಯ ಪಾತ್ರದಲ್ಲಿ ನಟಿಸಿದರು. ಪುಟ್ಟ ಪಾತ್ರವಾದರು ತೆರೆ ಮೇಲೆ ಕಾಣಿಸಿಕೊಂಡ ಅಷ್ಟು ಸಮಯ ಅದ್ಭುತ ನಟನ್ರ ಮೂಲಕ ಜನರಿಗೆ ಇಷ್ಟವಾದರು. ಮುಂದೆ ಅವರಿಗೆ ಕಾಂತಾರ ಚಿತ್ರದಿಂದ ಅವಕಾಶ ಕೇಳಿ ಬಂತು. ಈ ಚಿತ್ರ ಅವರಿಗೆ ದೊಡ್ಡ ಮಟ್ಟದ ಹೆಸರು ನೀಡಿದೆ. ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಅವರದ್ದು ಸಹಜ ಅಭಿನಯ. ಅವರ ನಟನೆಗೆ ಮನಸೋಲದವರೆ ಇಲ್ಲ. ಅಂದಹಾಗೆ ಸಪ್ತಮಿ ಅವರಿಗೆ ಈಗ ವಯಸ್ಸು 26. ಹೌದು ಅಷ್ಟು ವಯಸ್ಸಾದ ಹಾಗೆ ಅವರು ಕಾಣಿಸುವುದಿಲ್ಲ.