ನಿನ್ನೆಯ ಆದೇಶದ ಬಳಿಕ ಮತ್ತೊಂದು ಖಡಕ್ ಆದೇಶ ಕೊಟ್ಟ ಬಿಗ್ ಬಾಸ್: ಒಂದೇ ಆದೇಶದಿಂದ ಇಡೀ ಮನೆನೇ ಶೇಕ್. ಏನಾಗಿದೆ ಗೊತ್ತೇ?

41

ಬಿಗ್ ಬಾಸ್ ಮನೆ ಇತ್ತೀಚೆಗೆ ಒಂದು ರೀತಿಯ ರಣರಂಗವಾಗಿ ಬದಲಾಗಿದೆ. ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ಜಗಳ ಜೋರಾಗಿದೆ. ಪ್ರತಿ ವಾರವು ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕುವ ನಾಮಿನೇಟ್ ಪ್ರಕ್ರಿಯೆ ಕನ್ಫೆಷನ್ ರೂಮ್ನಲ್ಲಿ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಪ್ರಕ್ರಿಯೆ ಇದೀಗ ಸ್ಪರ್ಧಿಗಳ ಎದುರೇ ನಡೆದಿದೆ. ಇದರಿಂದ ದೊಡ್ಮನೆಯಲ್ಲಿ ಜಗಳದ ವಾತಾವರಣ ಸೃಷ್ಟಿಯಾಗಿದ್ದು ಇಡೀ ಮನೆಯ ಚಿತ್ರಣವೇ ಬದಲಾಗಿದೆ. ಬಿಗ್ಬಾಸ್ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರತಿವಾರವೂ ಮನೆಯಿಂದ ಹೊರಹಾಕಲು ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕಾಗುತ್ತದೆ. ಇದು ಉಳಿದ ಸ್ಪರ್ಧಿಗಳಿಗೆ ಗೊತ್ತಾಗದ ಹಾಗೆ ಕನ್ಫೆಷನ್ ರೂಮ್ನಲ್ಲಿ ನಡೆಯುತ್ತದೆ. ಆದರೆ ಬಿಗ್ ಬಾಸ್ ನಾಮಿನೇಟ್ ಪ್ರಕ್ರಿಯೆ ಎದುರು ಬದುರೇ ನಡೆಸುವಂತೆ ಆದೇಶಿಸಿದೆ.

ಈ ಆದೇಶದಿಂದ ಸ್ಪರ್ಧಿಗಳು ಆತಂಕಕ್ಕೆ ಒಳಗಾದರು. ಕೆಲವೊಮ್ಮೆ ಸ್ಪರ್ಧಿಗಳು ತಮ್ಮ ಜೊತೆಗೆ ಚೆನ್ನಾಗಿ ಇರುವ ತಮ್ಮ ಸ್ನೇಹಿತರನ್ನು ನಾಮಿನೇಟ್ ಮಾಡಿ ಬಿಡುತ್ತಿದ್ದರು. ಆದರೆ ಬಿಗ್ ಬಾಸ್ ಈ ಸಲ ನಿಂತಲ್ಲಿಯೇ ಅವರಿದ್ದ ಜಾಗದಲ್ಲೇ ನಾಮಿನೇಟ್ ಮಾಡುವಂತೆ ಆದೇಶಿಸಿತ್ತು. ಈ ಮೂಲಕ ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದೆ. ಹೀಗಾಗಿ ಈ ಸಲ ನಾಮಿನೇಟ್ ಪ್ರಕ್ರಿಯೆ ಎಲ್ಲರ ಮುಂದೆಯೇ ನಡೆದಿದ್ದರಿಂದ, ಯಾರು ಯಾರನ್ನು ನಾಮಿನೇಟ್ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿಯಿತು. ಎಲ್ಲವೂ ಕಣ್ಣಮುಂದೆ ನಡೆಯಿತು. ಇದರಿಂದಾಗಿ ಮನೆಯಲ್ಲಿ ಸಿಟ್ಟು ಅಸಮಾಧಾನ ಸೃಷ್ಟಿಯಾಗಿದೆ. ಎಷ್ಟೋ ಜನರು ಮುಂದೆ ಒಂದು ರೀತಿ, ಹಿಂದೆ ಒಂದು ರೀತಿ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಈಗ ಮುನಿಸು ಶುರುವಾಗಿದೆ.

ಬಿಗ್ ಬಾಸ್ ಮನೆ ಬೂದಿ ಮುಚ್ಚಿದ ಕೆಂಡದಂತೆ ಬದಲಾಗಿದೆ. ಈ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಬಂದಿದ್ದಾರೆ. ದರ್ಶ್ ಗೂ ಮೊದಲು ಐಶ್ವರ್ಯ, ನವಾಜ್ ದೊಡ್ಮನೆಯಿಂದ ಹೊರಬಂದಿದ್ದರು. ಮುಂದಿನ ವಾರ ಮನೆಯಿಂದ ಯಾರು ಹೊರ ನಡೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಇನ್ನು ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರ ನಡೆಯುವ ಮೊದಲು ದರ್ಶ್ ಚಂದ್ರಪ್ಪ ರೂಪೇಶ್ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ದೀಪಿಕಾ ದಾಸ್ ಕ್ಯಾಪ್ಟನ್ ಆಗಿದ್ದರಿಂದ ಅವರಿಗೆ ಇದರಿಂದ ಮುಕ್ತಿ ದೊರೆಯಿತು. ದೀಪಿಕಾ ಅವರನ್ನು ನಾಮಿನೇಟ್ ಮಾಡುವಂತಿರಲಿಲ್ಲ. ಕೊನೆಗೆ ಗುರೂಜಿ, ನೇಹಾ ಗೌಡ, ರೂಪೇಶ್ ಶೆಟ್ಟಿ, ಮಯೂರಿ, ಪ್ರಶಾಂತ್ ಸಂಬರಗಿ, ಸಾನಿಯಾ, ಕಾವ್ಯಶ್ರೀ ನಾಮಿನೇಟ್ ಆಗಿದ್ದಾರೆ. ನಾಲ್ಕನೇ ವಾರದ ಆಟದಲ್ಲಿ ಯಾರು ಮನೆಯಿಂದ ಹೊರ ನಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.