ಸ್ನೇಹಿತ ರವಿಚಂದ್ರನ್ ಅವರ ಕಷ್ಟ ಕೇಳಿ ಶಿವಣ್ಣ ಎಂಥಹ ಕೆಲಸ ಮಾಡಿದ್ದಾರೆ ನೋಡಿ. ಹೇಳಿದ್ದೇನು ? ಚಿತ್ರರಂಗ ಶಾಕ್

258

ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕವನ್ನು ಸೃಷ್ಟಿಸಿದ ಖ್ಯಾತಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ ಸಲ್ಲುತ್ತದೆ. ಕನ್ನಡ ಸಿನಿಮಾಲೋಕದಲ್ಲಿ ವಿಭಿನ್ನವಾದ ಪ್ರೇಮಕಥೆಯನ್ನು ಹಣೆಯುವ ಮೂಲಕ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಮಗನ ಮದುವೆಯನ್ನೂ ಇತ್ತೀಚಿಗಷ್ಟೇ ಅದ್ದೂರಿಯಾಗಿ ನೆರವೇರಿಸಿರುವ ರವಿಚಂದ್ರನ್, ಕೆಲವೇ ದಿನಗಳಲ್ಲಿ ಮನೆಯನ್ನು ಖಾಲಿ ಮಾಡಿದ್ದಾರೆ. ಈ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದ್ರೆ ಈ ಕುರಿತು ಖುದ್ದು ರವಿಚಂದ್ರನ್ ಅವರೇ ಜಿ ಕನ್ನಡ ವೇದಿಕೆಯಲ್ಲಿ ಸ್ಪಷ್ಟನೆಯನ್ನು ನೀಡಿದ್ದರು. ತಮ್ಮ ಸಿನಿಮಾಗಳು ಸೋಲುತ್ತಿರುವುದರ ಕುರಿತು ನೋವು ಹಂಚಿಕೊಂಡರು. ಇದಕ್ಕೆ ಇದೀಗ ಶಿವಣ್ಣ ಪ್ರತಿಕ್ರಿಯಿಸಿ ರವಿಚಂದ್ರನ್ ಅವರಿಗೆ ಧೈರ್ಯ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ರವಿಚಂದ್ರನ್‌ ಕುಟುಂಬ ಸಾಕಷ್ಟು ವರ್ಷಗಳಿಂದಲೂ ರಾಜಾಜಿನಗರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಏಕಾಏಕಿ ಆ ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಶಿಫ್ಟ್ ಆಗಿದ್ದಾರೆ. ಇದರ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡತೊಡಗಿದ್ದವು. ಇದರ ಬಗ್ಗೆ ಕಳೆದ ರವಿಚಂದ್ರನ್ ಅವರೇ ಸ್ಪಷ್ಟನೆ ನೀಡಿದ್ದರು. ಇದರ ಬಗ್ಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳ ವೇದಿಕೆಯಲ್ಲಿ ಮೊದಲ ಬಾರಿ ಮಾತನಾಡಿ ಭಾವುಕರಾಗಿದ್ದರು. ಒಂದು ತಿಂಗಳ ಹಿಂದೆ ರಾಜಾಜಿನಗರದಲ್ಲಿರುವ ಮನೆಯನ್ನು ಖಾಲಿ ಮಾಡಿದ್ದೇನೆ.ದುಡ್ಡು ಕಳೆದುಕೊಂಡು ಮನೆ ಮಾರಿದ ಎಂದು ಎಲ್ಲರು ಮಾತನಾಡಿಕೊಂಡರು. ಆದರೆ, ನಾನು ದುಡ್ಡನ್ನು ಇಂದು ಕಳೆದಿದ್ದಲ್ಲ. 30 ವರ್ಷದಿಂದಲೂ ಕಳೆದುಕೊಂಡೆ ಬಂದಿದ್ದೇನೆ. ಕಳೆದುಕೊಂಡೇ ನಗುತ್ತಾ ಬಂದಿದ್ದೇನೆ.

ಆದರೆ, ಈವರೆಗೂ ನಿಮಗೆ ಯಾರಿಗೂ ಅರ್ಥವಾಗಿಲ್ಲ. ನಾನು ಕಳೆದುಕೊಂಡಿರುವುದೆಲ್ಲ ನಿಮಗಾಗಿ. ನಿಮ್ಮ ಮನಸ್ಸನ್ನು ಗೆಲ್ಲುವುದಕ್ಕಾಗಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೇನೆ. ಆದರೆ, ನನಗೆ ಬೇಸರ ಇಲ್ಲ. ಮತ್ತೆ ಗೆಲ್ಲುತ್ತೇನೆ ಎಂಬ ಆವೇಶ ಎಂದಿಗೂ ಕಡಿಮೆ ಆಗುವುದಿಲ್ಲ ಎಂದಿದ್ದರು. ಇನ್ನೂ ಒಂದು ತಿಂಗಳಿಂದ ನನ್ನನ್ನು ನಾನು ಬದಲಾಯಿಸಿಕೊಳ್ಳಬೇಕು ಅನಿಸಿದೆ. ಸಿನಿಮಾ ಸೋತಿದ್ದರಿಂದ ನನಗೆ ಬೇಜಾರಾಯಿತು ಅಂತ ನಿಮಗೆ ಅನಿಸಿದರೆ ಅದು ಸುಳ್ಳು. ನಾನು ನಿಮ್ಮನ್ನು ಮೆಚ್ಚಿಸಲು ಆಗಲಿಲ್ಲ ಎಂದು ನನಗೆ ಬೇಸರವಾಗುತ್ತದೆ. ನನ್ನ ಸಿನಿಮಾಗೆ ನಿಮಗೆಲ್ಲಾ ನುಗ್ಗಿ ಅಭ್ಯಾಸ. ಆ ತರಹದ ಸಿನಿಮಾ ಮಾಡೇ ಮಾಡುತ್ತೀನಿ. ಆಗ ನೀವೆಲ್ಲ ನನ್ನ ಸಿನಿಮಾಕ್ಕೆ ನುಗ್ಗಿಯೇ ನುಗ್ಗುತ್ತೀರ ಎಂದು ಖಡಕ್‌ ಆಗಿ ಹೇಳಿದ್ದಾರೆ. ಇದಕ್ಕೆ ಚಿತ್ರರಂಗದ ರವಿಚಂದ್ರನ್ ಅವರ ಬಹುಕಾಲದ ಗೆಳೆಯ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿ “ರವಿ ಒಬ್ಬ ಅದ್ಭುತ ನಟ, ನಿರ್ದೇಶಕ ಎನ್ನುವುದನ್ನು ಯಾವಾಗಲೋ ಸಾಬೀತು ಮಾಡಿದ್ದಾರೆ. ಈಗ ಮತ್ತೆ ಸಾಬೀತು ಮಾಡಬೇಕಿಲ್ಲ. ನೀವು ಮೊದಲಿನಂತೆಯೇ ಚಿತ್ರಗಳನ್ನು ತೆಗೆಯಬಲ್ಲಿರಿ. ನಿಮ್ಮೊಂದಿಗೆ ನಾನಿದ್ದೇನೆ ಚಿತ್ರರಂಗ ಇದೆ” ಎಂದು ಹೇಳಿದ್ದಾರೆ.