ತೆಲುಗಿನಲ್ಲಿ ದಾಖಲೆಗಳನ್ನು ಪುಡಿ ಪುಡಿ ಮಾಡುತ್ತಿರುವ ಕಾಂತಾರ ಬಗ್ಗೆ ರಾಜಮೌಳಿ ಹೇಳಿದ್ದೆ ಬೇರೆ. ನಿರ್ದೇಶಕನ ಕಣ್ಣಿನಲ್ಲಿ ಕಾಂತಾರ ಹೇಗೆ ಕಂಡಿದೆ ಗೊತ್ತೇ??
ಕಳೆದ ಕೆಲ ದಿನಗಳಿಂದ ಎಲ್ಲಿ ನೋಡಿದರೂ ಕಾಂತಾರ ಚಿತ್ರದ್ದೇ ಮಾತು. ಕನ್ನಡ ನೆಲದ ಕಲೆಯನ್ನು ದೊಡ್ಡ ಪರದೆಯಲ್ಲಿ ಇಡೀ ಭಾರತವೇ ಮೆಚ್ಚಿಕೊಂಡಿದೆ. ಕನ್ನಡದಿಂದ ಶುರುವಾಗಿ ಇದೀಗ ಚಿತ್ರವು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ತೆರೆಕಂಡು ಲೂಟಿ ಮಾಡುತ್ತಿದೆ. ಬಹುಶಃ ಚಿತ್ರ ತಂಡಕ್ಕಾಗಲಿ, ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗಾಗಲಿ ಕಾಂತಾರ ಇಷ್ಟು ದೊಡ್ಡ ಮಟ್ಟದ ಜನಪ್ರಿಯತೆ, ಕಲೆಕ್ಷನ್ ತಂದುಕೊಡುತ್ತದೆ ಎಂಬ ಊಹೆಯೂ ಇರುವುದಿಲ್ಲ. ಅಷ್ಟರಮಟ್ಟಿಗೆ ಚಿತ್ರ ಬಾಕ್ಸಾಫೀಸ್ ಲೂಟಿ ಮಾಡುತ್ತಿದೆ.ದೊಡ್ಡ ದೊಡ್ಡ ಸ್ಟಾರ್ ನಟರು ನಿರ್ದೇಶಕರುಗಳು ಈ ಚಿತ್ರ ನೋಡಿ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಚಿತ್ರದ ತೆಲುಗು ಅವತರಿಣಿಕೆ ಇದೆ ಸೆಪ್ಟೆಂಬರ್ 15 ರಂದು ತೆರೆಕಂಡಿದ್ದು ಚಿತ್ರವನ್ನು ಖ್ಯಾತ ನಿರ್ದೇಶಕ ರಾಜಮೌಳಿ ಅವರು ವೀಕ್ಷಿಸಿದ್ದಾರೆ. ತಮ್ಮ ಇಡೀ ಕುಟುಂಬದ ಜೊತೆಗೆ ಚಿತ್ರವನ್ನು ನೋಡಿ ಅವರು ಮೆಚ್ಚಿಕೊಂಡಿದ್ದಾರೆ.
ಕಾಂತಾರ ಚಿತ್ರ ಇದೀಗ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಕಿಚ್ಚ ಸುದೀಪ್, ಪ್ರಭಾಸ್ ಸೇರಿದಂತೆ ದೊಡ್ಡ ದೊಡ್ಡ ನಟರು ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನಾಡಿದ್ದಾರೆ. ಇತ್ತೀಚೆಗೆ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್, ತಮಿಳು ನಟ ಧನುಷ್ ಚಿತ್ರ ವೀಕ್ಷಿಸಿ ಆಶ್ಚರ್ಯವಾಗುವಂತೆ ಚಿತ್ರದ ಬಗ್ಗೆ ಟ್ವೀಟ್ ಮಾಡಿ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದರು. ಅಲ್ಲದೆ ನಟ ಪ್ರಭಾಸ್ ಎರಡು ಬಾರಿ ಚಿತ್ರ ನೋಡಿ ಹೊಗಳಿದ್ದರು. ಕಾಂತಾರ ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಕನ್ನಡ ನಾಡಿನ ಕಲೆಯನ್ನು ಬೆಳ್ಳಿ ಪರದೆಯ ಮೇಲೆ ತರುವಲ್ಲಿ ಚಿತ್ರತಂಡ ಗೆದ್ದಿದೆ. ಇಂತಹ ಚಿತ್ರಗಳಿಗೂ ಜನರಿದ್ದಾರೆ ಎಂಬುದನ್ನು ಕಾಂತಾರ ಸಾಬೀತುಪಡಿಸಿದೆ. ಇದೀಗ ಚಿತ್ರ ವೀಕ್ಷಿಸಿ ನಿರ್ದೇಶಕ ರಾಜಮೌಳಿ ಕೊಂಡಾಡಿದ್ದಾರೆ. ತಮ್ಮ RRR ಚಿತ್ರವನ್ನು ಇದು ಮೀರಿಸುತ್ತದೆ ಎಂದಿದ್ದಾರೆ.

ಚಿತ್ರದ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಾವಳಿ ಚಿತ್ರ ನೋಡಿದ ನಂತರವೂ ವೀಕ್ಷಕರ ತಲೆಯಲ್ಲಿ ಗಿರ್ ಎನ್ನುವಂತೆ ಕುಳಿತುಬಿಡುತ್ತದೆ. ಅಷ್ಟರಮಟ್ಟಿಗೆ ದೈವವನ್ನು ಆವಾಹಿಸಿಕೊಂಡವರಂತೆ ರಿಷಭ್ ಅಭಿನಯಿಸಿದ್ದಾರೆ. ಕಾಂತಾರ ಸಿನಿಮಾ ನಾಯಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕನಸಿನ ಸಿನಿಮಾನೇ ಆಗಿದೆ. ಇಂತಹ ಈ ಚಿತ್ರ ರಿಷಬ್ ಚಿತ್ರ ಜೀವನದಲ್ಲಿ ವಿಶೇಷ ಮೈಲುಗಲ್ಲಾಗಿಯೇ ನಿಲ್ಲುತ್ತಿದೆ. ಇಲ್ಲಿವರೆಗೂ ಇದ್ದ ಸಿನಿಮಾಗಳ ಲೆಕ್ಕ ಬೇರೆ ಇತ್ತು. ಆದರೆ ಕಾಂತಾರ ಅದನ್ನೆಲ್ಲ ಮೀರಿಸುತ್ತಿದೆ. ಕಾಂತಾರ ಸಿನಿಮಾದ ಕಥೆ ಎಲ್ಲೆಡ ಹೋಗಬೇಕು. ಇದು ಎಲ್ಲರಿಗೂ ರೀಚ್ ಆಗಬೇಕು ಅನ್ನೋ ಕನಸು ರಿಷಬ್ ಶೆಟ್ಟಿಯವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತಯಾರಾಗಬೇಕು ಅಂತಲೂ ರಿಷಬ್ ಶೆಟ್ಟಿ ಕನಸು ಕಂಡಿದ್ದರು. ಅದರಂತೆ ಚಿತ್ರ ಬೇರೆ ಬೇರೆ ಭಾಷೆಗಳಲ್ಲಿ ತೆರೆ ಕಂಡಿದೆ. ಚಿತ್ರ ವೀಕ್ಷಿಸಿದ ರಾಜಮೌಳಿ ಚಿತ್ರ ಮೆಚ್ಚಿಕೊಂಡಿದ್ದಾರೆ. ತಮ್ಮ ನೆಲದ ಕಥೆಯನ್ನು ಹೇಳುವಲ್ಲಿ ಕನ್ನಡ ಮತ್ತು ಮಲಯಾಳಂ ಚಿತ್ರಗಳು ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತವೆ. ಕಾಂತಾರ ನಿಜಕ್ಕೂ ಅದ್ಭುತ. ನಮ್ಮದೇ ಚಿತ್ರ ವಾದ RRR ಆಸ್ಕರ್ ರೇಸ್ ಅಲ್ಲಿದೆ. ಕಾಂತಾರ ಚಿತ್ರವು ನಮ್ಮ ಚಿತ್ರ ಮೀರಿಸಿ ಆಸ್ಕರ್ ಪಡೆದರೆ ಆಶ್ಚರ್ಯವೇನು ಇಲ್ಲ. ಅಷ್ಟರಮಟ್ಟಿಗೆ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.