ಅಪ್ಪಿ ತಪ್ಪಿಯೂ ಎಂತಹ ಪರಿಸ್ಥಿತಿಯಲ್ಲಯೂ ಕೂಡ ದೀಪಾವಳಿ ಸಮಯದಲ್ಲಿ ಈ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತರಬೇಡಿ. ಲಕ್ಷ್ಮಿ ಕೋಪಗೊಳ್ಳುತ್ತಾಳೆ.

46

ಇದೇ ಅಕ್ಟೋಬರ್ 24ರಂದು ದೇಶವ್ಯಾಪಿ ದೀಪಾವಳಿ ಹಬ್ಬ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬ ಸಂಪತ್ತು ಹಾಗೂ ಸಮೃದ್ಧಿಯ ಪ್ರತೀಕವಾಗಿದೆ. ಈ ವರ್ಷ ಅಕ್ಟೋಬರ್ 23 ರಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಚಿನ್ನ, ಬೆಳ್ಳಿಯಂತಹ ವಸ್ತುಗಳನ್ನು ಕೊಂಡರೆ ಲಕ್ಷ್ಮಿ ವರ್ಷವಿಡಿ ಮನೆಯಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಲಕ್ಷ್ಮಿ ಕಟಾಕ್ಷ ಮನೆಯಲ್ಲಿ ಇರುತ್ತದೆ ಎಂಬ ನಂಬಿಕೆಯಲ್ಲಿ ಜನರು ಚಿನ್ನ, ಬೆಳ್ಳಿ ಖರೀದಿಸುತ್ತಾರೆ. ಆದರೆ ಜನರಿಗೆ ತಿಳಿಯದ ಅದೆಷ್ಟೋ ವಿಷಯಗಳಿವೆ. ಅವರಿಗೆ ಗೊತ್ತಾಗದಂತೆ ಕೆಲವು ವಸ್ತುಗಳನ್ನು ದೀಪಾವಳಿ ಎಂದು ಮನೆಗೆ ತರುತ್ತಾರೆ. ಆದರೆ ಇದರಿಂದ ಲಕ್ಷ್ಮಿ ಕೃಪೆ ಹೊರಟು ಹೋಗುತ್ತದೆ. ಜೊತೆಗೆ ಸಂಪತ್ತು, ಹಣ ಕಡಿಮೆಯಾಗ ತೊಡಗುತ್ತದೆ. ದೀಪಾವಳಿ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಅದೃಷ್ಟ ಕೈ ಬಿಟ್ಟು ಹೋಗಲಿದೆ. ಅಂತಹ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕಬ್ಬಿಣವನ್ನು ಕೊಳ್ಳಬೇಡಿ: ಲೋಹ ಕೊಂಡರೆ ಅದೃಷ್ಟ ಎಂದು ಹೇಳಲಾಗುತ್ತದೆ. ಆದರೆ ದೀಪಾವಳಿಯಂದು ಕಬ್ಬಿಣ ಕೊಳ್ಳಬಾರದು. ಇದನ್ನು ಕೊಳ್ಳುವುದರಿಂದ ಬಡತನ ಬರಲಿದೆ. ಶನಿವಾರ ಹಾಗೂ ದೀಪಾವಳಿಯಂದು ಕಬ್ಬಿಣ ಕೊಂಡರೆ ಶನಿದೇವ ಕೋಪಗೊಳ್ಳುತ್ತಾನೆ. ದಾನ ಮಾಡುವ ಉದ್ದೇಶದಿಂದ ಬೇಕಾದರೆ ಕಬ್ಬಿಣ ಖರೀದಿಸಬಹುದು. ಪ್ಲಾಸ್ಟಿಕ್ ವಸ್ತುಗಳನ್ನು ತರಬೇಡಿ: ಪ್ಲಾಸ್ಟಿಕ್ ವಸ್ತುವನ್ನಾದರೂ ಹಬ್ಬದ ದಿನ ಕೊಳ್ಳಬೇಕು ಎಂದು ಜನರು ಭಾವಿಸುತ್ತಾರೆ. ಆದರೆ ಈ ದಿನ ಕೊಂಡ ವಸ್ತುಗಳನ್ನು ತಾಯಿ ಲಕ್ಷ್ಮಿ ಪೂಜೆಗೆ ಬಳಸಬೇಕು ಎನ್ನಲಾಗುತ್ತದೆ. ಹೀಗಿರುವಾಗ ಪ್ಲಾಸ್ಟಿಕ್ ಕೊಳ್ಳುವುದು ದೇವಿ ಲಕ್ಷ್ಮಿಯ ಕೋಪಕ್ಕೆ ಕಾರಣವಾಗಬಹುದು.

ಕಾರು ಅಥವಾ ಮನೆ ಖರೀದಿ ಮಾಡಬಾರದು: ದೀಪಾವಳಿಯಂದು ಚಿನ್ನ ಬೆಳ್ಳಿ ಕೊಳ್ಳುವುದು ಶುಭಕರ, ಆದರೆ ಈ ದಿನ ಮನೆ, ಅಂಗಡಿ, ಕಾರು ಇಂತಹ ದೊಡ್ಡ ವಸ್ತುಗಳ ಖರೀದಿ ಮಾಡಬಾರದು. ಇಂಥದ್ದನ್ನು ಬೇರೊಂದು ದಿನ ಮಾಡಬೇಕು. ದೊಡ್ಡ ಮೊತ್ತದ ಹೂಡಿಕೆಯನ್ನು ತಪ್ಪಿಸಬೇಕು. ಚೂಪಾದ ಉಪಕರಣಗಳು ಒಳ್ಳೆಯದಲ್ಲ: ಈ ದೀಪಾವಳಿಯಂದು ಮಹಿಳೆಯರು ಸಾಮಾನ್ಯವಾಗಿ ಅಡುಗೆ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳುತ್ತಾರೆ. ಅದೃಷ್ಟವೆಂದು ತಿಳಿದು ಚಮಚ, ಚಾಕು, ಕತ್ತರಿ ಅಂತಹ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಇದರಿಂದ ಮನೆಯಲ್ಲಿ ಜಗಳದ ವಾತಾವರಣ ಸೃಷ್ಟಿ ಆಗುವುದಲ್ಲದೆ, ಲಕ್ಷ್ಮಿ ಕೋಪಗೊಳ್ಳುತ್ತಾಳೆ.

ಕೃತಕ ಆಭರಣಗಳನ್ನು ತರಬೇಡಿ: ಚಿನ್ನ, ಬೆಳ್ಳಿ ಜೊತೆಗೆ ಈ ದಿನ ಜನರು ಕೃತಕ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಇದು ಅಶುಭ. ಖರೀದಿಸಿದ ವಸ್ತುಗಳನ್ನು ಲಕ್ಷ್ಮಿ ಪೂಜೆಗೆ ಒಪ್ಪಿಸುವುದರಿಂದ ಕೃತಕ ಆಭರಣಗಳು ತಾಯಿಗೆ ಇಷ್ಟವಾಗುವುದಿಲ್ಲ. ಇದು ಲಕ್ಷ್ಮಿಗೆ ಕೋಪ ತರಿಸುತ್ತದೆ. ಹೀಗಾಗಿ ಕೃತಕ ಆಭರಣಗಳನ್ನು ಕೊಳ್ಳಬೇಡಿ.