ಕೆ ಎಲ್ ರಾಹುಲ್ ಮಾಡಿದ ಕೆಲಸಕ್ಕೆ ದಂಗಾದ ರೋಹಿತ್ ಶರ್ಮ: ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಗೆ ಶಾಕ್ ನೀಡಿದ ರಾಹುಲ್.

4,690

ಐಸಿಸಿ ಟಿ20 ವಿಶ್ವಕಪ್ನ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಆಸ್ಟ್ರೇಲಿಯ ವಿರುದ್ಧದ ಭಾರತ ತಂಡವು ತನ್ನ ಅಭ್ಯಾಸ ಪಂದ್ಯದ ವೇಳೆ ಅದ್ಭುತ ಪ್ರದರ್ಶನ ತೋರಿದೆ. ಅದರಲ್ಲೂ ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ ನಿಜಕ್ಕೂ ಅಬ್ಬರದ ಆಟವಾಡಿದರು. ಟಾಸ್ ಸೋತರೂ ಮೊದಲಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಭರ್ಜರಿ ಬ್ಯಾಟಿಂಗ್ ಶುರು ಮಾಡಿದ ಕೆ ಎಲ್ ರಾಹುಲ್ ತಂಡಕ್ಕೆ ಸ್ಪೋಟಕ ಆರಂಭ ನೀಡಿದರು. ಇವರ ಸ್ಪೋಟಕ ಆಟ ಕಂಡು ನಾಯಕ ರೋಹಿತ್ ಶರ್ಮಾ ದಂಗಾದವರಂತೆ ಕಂಡರು. ಹಿಟ್ ಮ್ಯಾನ್ ಎಂದೇ ಕರೆಸಿಕೊಳ್ಳುವ ರೋಹಿತ್ ರನ್ ಗಳಿಕೆ ಶುರು ಮಾಡುವ ಮೊದಲಿಗೆ ಕೆ ಎಲ್ ರಾಹುಲ್ ಅರ್ಧ ಶತಕದತ್ತ ಸಾಗಿದ್ದರು. ಕೇವಲ 27 ಎಸೆತಗಳಲ್ಲಿ ಅವರು ಅರ್ಧಶತಕ ಕಲೆ ಹಾಕುವ ಮೂಲಕ ತಮ್ಮ ಫಾರ್ಮ್ ಖಚಿತಪಡಿಸಿದ್ದರು.

ರೋಹಿತ್ ಶರ್ಮಾ 1 ರನ್ ಗಳಿಸುವಷ್ಟರಲ್ಲಿ ಕೆ ಎಲ್ ರಾಹುಲ್ ತಮ್ಮ ಹಾಫ್ ಸೆಂಚುರಿ ಪೂರೈಸಿದ್ದರು. ರೋಹಿತ್ ಖಾತೆ ತೆರಿಯುವ ಮೊದಲೇ ಕನ್ನಡಿಗ ಕೆ ಎಲ್ ರಾಹುಲ್ ಅದ್ದೂರಿ 3 ಸಿಕ್ಸ್, ಭರ್ಜರಿ 6 ಫೋರ್ ನೊಂದಿಗೆ ಇಷ್ಟು ಮೊತ್ತ ಕಲೆ ಹಾಕಿದ್ದರು. ಅಂತಿಮವಾಗಿ ರಾಹುಲ್ ಒಟ್ಟು 33 ಎಸೆತಗಳಲ್ಲಿ 3 ಸಿಕ್ಸ್ ಮತ್ತು 6 ಫೋರ್ ಸೇರಿದಂತೆ ಬರೋಬ್ಬರಿ 57 ರನ್ ಗಳಿಸಿದರು. ಆದರೆ ರೋಹಿತ್ 14 ಎಸೆತದಲ್ಲಿ ಕೇವಲ 15 ರನ್ ಗಳಿಸಿದರು. ಪಂದ್ಯದ ಮೊದಲ ಬ್ಯಾಟಿಂಗ್ ಮಾಡಿದ್ದು ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್. ಇವರಿಬ್ಬರ ನೆರವಿನಿಂದ ತಂಡವು ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಪತನಕ್ಕೆ 186 ರನ್ ಕಲೆ ಹಾಕಿತು. ಈ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ತನ್ನ ನಾಯಕ ಆರೋನ್ ಫಿನ್ಚ್ ಅವರ ಅದ್ಭುತ ಆರಂಭದ ಮೂಲಕ ಒಳ್ಳೆಯ ರನ್ ಕಲೆ ಹಾಕಿತು.

ಆರಂಭದಿಂದಲೇ ಭಾರತ ತಂಡದ ಬೌಲರ್ ಗಳನ್ನು ದಂಡಿಸಲು ಶುರು ಮಾಡಿದರು. ಆದರೆ ಅವರಿಗೆ ಮತ್ತೊಂದು ಭಾಗದಿಂದ ಒಳ್ಳೆಯ ಸಾಥ್ ಸಿಗಲಿಲ್ಲ. ಇಷ್ಟೆಲ್ಲ ಸಾಹಸಗಳ ನಂತರ ಕೊನೆಯಲ್ಲಿ ಆಸ್ಟ್ರೇಲಿಯಾ ತಂಡವು ಗೆಲ್ಲಲು 11 ರನ್ಗಳನ್ನು ಸಿಡಿಸಬೇಕಿತ್ತು. ಆಗ ದಾಳಿಗಿಳಿದ ಮೊಹಮ್ಮದ್ ಶಮಿ ಅವರ ಆರಂಭಿಕ ಎರಡು ಎಸತೆಗಳಲ್ಲಿ ಪ್ಯಾಟ್ ಕಮಿನ್ಸ್ ಎರಡೆರಡು ರನ್ ಓಡಿದರು. ಮೂರನೇ ಎಸೆತಕ್ಕೆ ಭರ್ಜರಿ ಹೊಡೆತ ಬಾರಿಸಿದ ಅವರು ಸಿಕ್ಸ್ ನಿರೀಕ್ಷೆಯಲ್ಲಿದ್ದರು, ಆದರೆ ಆಗಿದ್ದೆ ಬೇರೆ. ಲಾಂಗ್ ಆನ್ ನಲ್ಲಿ ಫೀಲ್ಡಿಂಗ್ ಅಲ್ಲಿದ್ದ ವಿರಾಟ್ ಕೊಹ್ಲಿ ಜಿಗಿದು ಚೆಂಡು ಹಿಡಿದರು. ಕೊನೆಯ 3 ಎಸೆತಗಳಲ್ಲಿ ಒಂದು ರನ್ ಔಟ್ , ಎರಡು ವಿಕೆಟ್ ಕಬಳಿಸುವ ಮೂಲಕ ಮಹಮದ್ ಶಮಿ ಆರ್ಭಟಿಸಿದರು. ಇದರಿಂದ ಭಾರತ ತಂಡ 6 ರನ್ ಗಳ ರೋಚಕ ಗೆಲುವಿನಿಂದ ಬೀಗಿತು.