ಬುಮ್ರಾಗೆ ವಿಶ್ವಕಪ್ ಗಿಂತ ಅದುವೇ ಮುಖ್ಯವಾಗಿದೆ.ಇರುವುದನ್ನು ನೇರವಾಗಿ ಹೇಳಿಬಿಟ್ಟ ರೋಹಿತ್. ಏನಂತೆ ಗೊತ್ತೆ?? ತಪ್ಪಿಸಿಕೊಂಡದ್ದು ಅದಕ್ಕೇನಾ??

7,755

ಇದೇ ತಿಂಗಳ 23 ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಬಹುಕಾಲದ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಳಿತ ಇದಕ್ಕೂ ಮುನ್ನ ಭಾರತ ತಂಡವು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 17ರಂದು ಆಸ್ಟ್ರೇಲಿಯಾ ಮತ್ತು ಅಕ್ಟೋಬರ್ 19ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವು ತನ್ನ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಟಿ – 20 ವಿಶ್ವಕಪ್ ಶುರುವಾಗಿದೆ. ಅಕ್ಟೋಬರ್ 16 ರಿಂದ 22 ರವರೆಗೆ 8 ತಂಡಗಳ ನಡುವಿನ ಗುಂಪು ಹಂತವು ನಡೆಯಲಿದೆ. ಸೂಪರ್ 12 ರ ಮುಖ್ಯ ಹಂತ 22 ರಿಂದ ಆರಂಭವಾಗಲಿದೆ. ಇದೇ ತಿಂಗಳ 23 ರಂದು ಭಾರತ ತನ್ನ ಮೊದಲ ಪಂದ್ಯವನ್ನು ಬಹುಕಾಲದ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಭಾರತ ತಂಡವು ಇದಕ್ಕೂ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಅಕ್ಟೋಬರ್ 17ರಂದು ಆಸ್ಟ್ರೇಲಿಯಾ ಮತ್ತು ಅಕ್ಟೋಬರ್ 19ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವು ತನ್ನ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಭಾರತದ ಸ್ಟಾರ್ ಬೌಲರ್ ಆದ ಅವರು ಬೆನ್ನುಮೂಳೆಯ ಒತ್ತಡದಿಂದಾಗಿ ಮೆಗಾ ಪಂದ್ಯಾವಳಿಯನ್ನು ಮಿಸ್ ಮಾಡಿಕೊಂಡರು. ಟಿ20 ವಿಶ್ವಕಪ್ನ ಮುಖ್ಯ ತಂಡದಲ್ಲಿ ಬುಮ್ರಾ ಜಾಗಕ್ಕೆ ಮೊಹಮ್ಮದ್ ಶಮಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಟಿ20 ವಿಶ್ವಕಪ್ ಆರಂಭಕ್ಕೂ ಮೊದಲು 16 ನಾಯಕರೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಮ್ರಾ ಬಗ್ಗೆ ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಶ್ವಕಪ್ ಗಿಂತ ಬುಮ್ರಾ ಅವರ ಕೆರಿಯರ್ ಮಹತ್ವವಾಗಿದೆ ಎಂದು ಅವರು ತಿಳಿಸಿದ್ದಾರೆ. ಟಿ20 ವಿಶ್ವಕಪ್ ಅಲ್ಲಿ ಆಡಲು ಗಾಯಗೊಂಡಿರುವ ಬುಮ್ರಾ ಅವರಿಂದ ಆಗುವುದಿಲ್ಲ ಎಂದು ಅವರು ಹೇಳಿದರು. ಬುಮ್ರಾಗೆ ಈಗ ವಿಶ್ರಾಂತಿ ಮತ್ತು ಆರೈಕೆಯ ಅವಶ್ಯಕತೆ ಇದೆ ಎಂದು ರೋಹಿತ್ ತಿಳಿಸಿದ್ದಾರೆ. ಅವರು ಚೇತರಿಸಿಕೊಂಡರೆ, ಹುಷಾರಾದರೆ ಅವರು ಅಂತಹ ಅನೇಕ ಪಂದ್ಯದಲ್ಲಿ ಆಡುತ್ತಾರೆ ಎಂದಿದ್ದಾರೆ. 2007 ರಲ್ಲಿ ಮೊದಲ ಸಲ ಟಿ 20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡ ಮೇಲೆ ಇಲ್ಲಿವೆರೆಗೂ ಭಾರತ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಸಲವಾದರೂ ಟ್ರೋಫಿ ಗೆಲ್ಲಲೇಬೇಕೆಂಬ ಹಠದಲ್ಲಿ ಭಾರತ ತಂಡ ಅಖಾಡಕ್ಕಿಳಿದಿದೆ.