ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ರವಿಚಂದ್ರನ್ ಕಷ್ಟ ಕೇಳಿ ನೋಡಲು ಓಡೋಡಿ ಬಂದ ಖುಷ್ಬೂ. ಏನು ಮಾಡಿದರೆ ಗೊತ್ತೇ?? ಒಮ್ಮೆಲೇ ಎಲ್ಲರೂ ಶಾಕ್.

1,257

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗ ಬಹಳ ಬೇಸರದ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಈಗಾಗಲೇ ಎಲ್ಲರಿಗು ತಿಳಿದಿದೆ. ಕೆಲ ದಿನಗಳ ಹಿಂದೆ ರವಿಚಂದ್ರನ್ ಅವರು ತಾವು ಹುಟ್ಟಿಬೆಳೆದ ಮನೆಯನ್ನು ಖಾಲಿ ಮಾಡಿ ಬೇರೆ ಮನೆಗೆ ಫ್ಯಾಮಿಲಿ ಜೊತೆಗೆ ಶಿಫ್ಟ್ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು, ಅದರ ಬಗ್ಗೆ ಸ್ವತಃ ರವಿಚಂದ್ರನ್ ಅವರೇ ಜೀಕನ್ನಡ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಭಾವುಕರಾಗಿ ಮಾತನಾಡಿದ್ದರು. ರವಿಚಂದ್ರನ್ ಅವರು ತಂದೆ ತಾಯಿ ಜೀವನ ಮಾಡಿದ ಮನೆಯಿಂದ ಹೊರಬಂದಿದ್ದು ನಿಜ, ಜನರಿಗಾಗಿ ಸಿನಿಮಾ ಮಾಡಿದೆ, ಎಲ್ಲಾ ಹಣವನ್ನು ಸಿನಿಮಾಗೆ ಹಾಕಿದೆ. ಆದರೆ ಜನರಿಗೆ ನನ್ನ ಸಿನಿಮಾ ಇಷ್ಟ ಆಗಲಿಲ್ಲ.

ಜನರನ್ನ ಮೆಚ್ಚಿಸಲು ನನ್ನಿಂದ ಸಾಧ್ಯ ಆಗಲಿಲ್ಲ ಅಂತ ನನಗೆ ಬೇಸರ ಇದೆ. ಮುಂದೆ ಮತ್ತೆ ಸಿನಿಮಾ ಮಾಡುತ್ತೇನೆ, ವಾಪಸ್ ಬರುತ್ತೇನೆ ಜನರಿಗೆ ಇಷ್ಟ ಆಗುವಂಥ, ಜನರು ಥಿಯೇಟರ್ ಗೆ ಬರುವಂಥ ಸಿನಿಮಾವನ್ನೇ ಮಾಡುತ್ತೇನೆ ಎಂದು ರವಿಚಂದ್ರನ್ ಅವರು ಹೇಳಿದ್ದರು. ಕ್ರೇಜಿಸ್ಟಾರ್ ಈ ರೀತಿ ಕಷ್ಟದಲ್ಲಿರುವ ಗೊತ್ತಾಗಿ ಅಬರ ಆತ್ಮೀಯರಾಗಿರುವ ನಟಿ ಖುಷ್ಬೂ ಅವರು ರವಿಚಂದ್ರನ್ ಅವರ ಮನೆಗೆ ಓಡೋಡಿ ಬಂದಿದ್ದಾರೆ. ಇತ್ತೀಚೆಗಷ್ಟೇ ಖುಷ್ಬೂ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು, ಬೆನ್ನಿನ ಸಮಸ್ಯೆ ಇಂದ ಖುಷ್ಬೂ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅದರ ಟ್ವೀಟ್ ಮಾಡಿ, ಒಂದೆರಡು ದಿನಗಳಲ್ಲಿ ಚೇತರಿಸಿಕೊಂಡು, ನಾರ್ಮಲ್ ಲೈಫ್ ಗೆ ಮರಳುವುದಾಗಿ ಹೇಳಿದ್ದರು.

ರವಿಚಂದ್ರನ್ ಅವರು ಮನೆ ಖಾಲಿ ಮಾಡಿ, ಸಾಲ ಮಾಡಿಕೊಂಡು ಕಷ್ಟದಲ್ಲಿ ಇರುವ ವಿಚಾರ ತಿಳಿದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣವೇ ಖುಷ್ಬೂ ಅವರು ರವಿಚಂದ್ರನ್ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದು, ಅವರ ಹೊಸ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ, “ರವಿ ಸರ್ ನೀವು ಈ ಸಮಯದಲ್ಲಿ ಧೈರ್ಯವಾಗಿರಬೇಕು, ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುವೆ ಅಪಾರ, ನನ್ನಂಥ ಎಷ್ಟೋ ಕಲಾವಿದರಿಗೆ ಬೆಳೆಯಲು ಪ್ರೋತ್ಸಾಹ ನೀಡಿದವರು ನೀವು, ನಿಮ್ಮಿಂದ ಅದೆಷ್ಟೋ ಜನ ಇಂದು ಅನ್ನ ತಿನ್ನುತ್ತಿದ್ದಾರೆ. ಕನ್ನಡ ಜನರು ನಿಮ್ಮ ಕೈಬಿಡುವುದಿಲ್ಲ. ನಾವು ಯಾವಾಗಲೂ ನಿಮ್ಮ ಜೊತೆಗಿರುತ್ತೇವೆ.. ಧೈರ್ಯವಾಗಿರಿ..” ಎಂದು ಹೇಳಿದ್ದಾರೆ ನಟಿ ಖುಷ್ಬೂ.