ಬಿಗ್ ಬಾಸ್ ಇತಿಹಾಸದಲ್ಲಿ ಕಿಚ್ಚನ ಮೇಲೆ ಮೊದಲ ಬಾರಿಗೆ ರೊಚ್ಚಿಗೆದ್ದ ಫ್ಯಾನ್ಸ್: ಆರ್ಯವರ್ಧನ್ ಪರ ನಿಂತು ಏನು ಹೇಳಿದ್ದಾರೆ ಗೊತ್ತೇ??

652

ಕನ್ನಡದ ಬಿಗ್ಬಾಸ್ 9ನೇ ಸೀಸನ್ ಭರ್ಜರಿಯಾಗಿ ನಡೆಯುತ್ತಿದೆ. ಇದೇ ಮೊದಲ ಬಾರಿ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಇದ್ದ ಸೀನಿಯರ್ಸ್ ಗಳನ್ನು ಕರೆಸಿ ಸೀನಿಯರ್ ಜೂನಿಯರ್ ರೀತಿಯ ಹಣಹಣಿ ನಡೆಯುತ್ತಿದೆ. ಇದೀಗ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ಇಂದಿನ ಸಂಚಿಕೆ ಪ್ರೊಮೋದಲ್ಲಿ ಆರ್ಯವರ್ಧನ್ ಗುರೂಜಿ ಹೀಗೆ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಕೇಳಿ ಕೋಪಗೊಂಡಿರುವ ಕಿಚ್ಚ ಸುದೀಪ್ ಅವರು ಆರ್ಯವರ್ಧನ್ ಗುರೂಜಿ ಮೇಲೆ ಕೆಂಡಮಂಡಲರಾಗಿದ್ದಾರೆ. ಆದರೆ ಕಲರ್ಸ್ ಕನ್ನಡದ ಪೇಜ್ ನಲ್ಲಿ ಗುರೂಜಿ ಪರವಾಗಿ ನೆಟ್ಟಿಗರು ಬ್ಯಾಟ್ ಬೀಸಿದ್ದು ಅವರು ಹೇಳಿದ್ದೆ ಸರಿಯಾಗಿದೆ ಎಂದು ಬರೆದಿದ್ದಾರೆ.

ಸೂಪರ್ ಸಂಡೆ ವಿತ್ ಸುದೀಪ ಸಂಚಿಕೆಯಲ್ಲಿ ಸುದೀಪ್ ಅವರು ಈ ಸೀಸನ್ ಟಾಪ್ ಎರಡು ರಲ್ಲಿ ಯಾವ ಸ್ಪರ್ಧಿಗಳು ಬರಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಆಗ ಎಲ್ಲಾ ಸ್ಪರ್ಧಿಗಳು ಒಬ್ಬೊಬ್ಬರ ಹೆಸರು ಹೇಳಿದ್ದಾರೆ. ಅನುಪಮಾ ಅವರ ಹೆಸರು ಹೇಳಿ ಬಿಗ್ ಬಾಸ್ ಗೆ ಕೂಡ ಅನುಪಮಾ ಅವರು ಒಳಗೆ ಬರಬೇಕು ಎನ್ನುವ ಆಸೆ ಇತ್ತು ಎಂಬ ಅರ್ಥದಲ್ಲಿ ಗುರೂಜಿ ಮಾತನಾಡಿದ್ದಾರೆ. ಇದಕ್ಕೆ ಕೋಪಗೊಂಡ ಕಿಚ್ಚ ಸುದೀಪ್ ಹಾಗೆಲ್ಲ ಮಾತನಾಡಬೇಡಿ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗುರೂಜಿ ಗೋಲ್ಡ ಟಾಸ್ಕ್ ಅಲ್ಲಿ ಎಷ್ಟು ಗೋಲ್ಡ್ ಇದೆ ಎಂದು ಗೊತ್ತಿದ್ದರೂ ಕೂಡ ಅನುಪಮಾ ಅವರನ್ನು ಯಾಕೆ ಒಳಗೆ ಬಿಡಲಾಯಿತು ಎಂದು ಪ್ರಶ್ನಿಸಿದ್ದಾರೆ. ಆಗ ಸುದೀಪ್ ಉಳಿದ ಸ್ಪರ್ಧಿಗಳನ್ನು ನಿಮಗೆ ಹಾಗೆ ಅನಿಸಿತಾ ಎಂದು ಕೇಳಿದ್ದಾರೆ. ಆಗ ಎಲ್ಲಾ ಸ್ಪರ್ಧಿಗಳು ಇಲ್ಲ ಎಂದು ಉತ್ತರಿಸಿದ್ದಾರೆ. ಇದಕ್ಕೆ ಮತ್ತಷ್ಟು ಕೋಪಗೊಂಡ ಸುದೀಪ್ ಮಾತಿನ ಮೇಲೆ ನಿಗಾ ಇರಲಿ, ಏನು ಹೇಳುತ್ತಿದ್ದೇನೆ ಅನ್ನುವ ಪ್ರಜ್ಞೆ ಇರಲಿ. ಏನೇನು ಹೇಳಬೇಡಿ ಎಂದು ಗುರೂಜಿಯವರಿಗೆ ಹೇಳಿದ್ದಾರೆ. ಅದಕ್ಕೆ ಮತ್ತೆ ಗುರೂಜಿ ಯೋಚನೆ ಮಾಡಿ ಹೇಳಬೇಕಲ್ಲ ಸರ್ ಹಾಗಾಗಿ ಹೇಳುತ್ತಿದ್ದೇನೆ, ಏನೇನೋ ಹೇಳುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಕಿಚ್ಚ ಸುದೀಪ್ ಅವರು ಮ್ಯಾಚ್ ಫಿಕ್ಸಿಂಗ್ ಅಂದರೆ ಏನು? ಇಲ್ಲಿರುವ ಆಟಗಾರರಿಗೆ ಯೋಗ್ಯತೆ ಇಲ್ಲವಾ, ಅವರು ಆಡಲಿಕ್ಕೆ ಬಂದಿರುವುದು ಹೀಗೆಲ್ಲ ದೊಡ್ಡವರಾಗಿ ನೀವು ಮಾತನಾಡಬಾರದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರ್ಯವರ್ಧನ್ ಗುರೂಜಿ ನಾನು ಜನರಲ್ ಆಗಿ ಹೇಳಿದ್ದು ಸರ್ ಎಂದು ಹೇಳಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡಿದರೆ ಇಷ್ಟು ದೊಡ್ಡ ಉತ್ತರ ಕೊಡುತ್ತೀರಿ. ಬಿಗ್ ಬಾಸ್ ಬಗ್ಗೆ ಮಾತನಾಡಿದರೆ ನಾನು ಸುಮ್ಮನೆ ಇರಲ್ಲ. ನಮ್ಮ ಈ ವೇದಿಕೆ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ, ನನಗೂ ನಿಮಗೂ ಇಲ್ಲೇ ಕೊನೆಯಾಗುತ್ತೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರೊಮೋ ಇದೀಗ ಕಲರ್ಸ್ ಕನ್ನಡ ಪೇಜ್ ನಲ್ಲಿ ಹಾಕಲಾಗಿದ್ದು ಗುರುಜಿ ಅವರ ಮಾತುಗಳನ್ನು ವೀಕ್ಷಕರು ಸಮರ್ಥಿಸಿಕೊಂಡಿದ್ದಾರೆ. ಹೌದು ಬಿಗ್ ಬಾಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಇದೆ, ಇಲ್ಲಿ ಮೋಸ ಮಾಡಲಾಗುತ್ತದೆ. ಅವರ ಇಷ್ಟದ ಸ್ಪರ್ಧಿಗಳಿಗೆ ಬೇಕಾದಂತೆ ಇವರು ಎಲ್ಲವನ್ನು ನಡೆಸುತ್ತಾರೆ ಎಂದೆಲ್ಲಾ ಆರೋಪಿಸಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಆರ್ಯವರ್ಧನ್ ಗುರೂಜಿ ಮಾತಿಗೆ ಸಾಕಷ್ಟು ಜನರು ಒಪ್ಪಿಗೆ ಸೂಚಿಸಿದ್ದಾರೆ.