ಮುಂದೆ ಆದ್ರೂ ನೆಮ್ಮದಿಯಿಂದ ಬದುಕೋಣ ಎಂದು ವಿಚ್ಚೇದನ ಪಡೆದುಕೊಂಡಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಎಲ್ಲರ ಜೀವನದಲ್ಲಿ ಕೂಡ ಒಂದೇ ಬಾರಿ ಆಗುವುದು. ಈ ಮಾತು ಕೇವಲ ಜನಸಾಮಾನ್ಯರಿಗಷ್ಟೇ ಸೀಮಿತವಾಗಿದೆ. ಸೆಲೆಬ್ರಿಟಿಗಳು ಈಗಾಗಲೆ ನಿಮಗೆ ತಿಳಿದಿರುವಂತೆ ಮದುವೆಯಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಮತ್ತೊಮ್ಮೆ ಮರು ಮದುವೆಯಾಗುವುದು ಕಾಮನ್ ಆಗಿಬಿಟ್ಟಿದೆ. ಇಂದಿನ ಲೇಖನಿಯಲ್ಲಿ ನಾವು ಯಾವೆಲ್ಲ ದಕ್ಷಿಣ ಭಾರತ ಚಿತ್ರರಂಗದ ನಟಿಯರು ಮದುವೆಯಾದ ನಂತರ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎಂಬುದರ ಕುರಿತಂತೆ ತಿಳಿಯೋಣ ಬನ್ನಿ.
ಸೋನಿಯಾ ಅಗರ್ವಾಲ್; ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಸೋನಿಯಾ ಅಗರವಾಲ್ ಅವರು ತಮಿಳಿನ ಖ್ಯಾತ ನಿರ್ಮಾಪಕ ಆಗಿರುವ ಸೆಲ್ವರಾಘವನ್ ಅವರನ್ನು 2006 ರಲ್ಲಿ ಮದುವೆಯಾಗುತ್ತಾರೆ. ನಂತರ ಇವರ ದಾಂಪತ್ಯದಲ್ಲಿ ತಲೆದೋರಿದಂತಹ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರು 2010 ರಲ್ಲಿ ವಿವಾಹ ವಿಚ್ಛೇದನಕ್ಕೆ ಶರಣಾಗುತ್ತಾರೆ.

ಮಾನ್ಯ ನಾಯ್ಡು; ಸೌತ್ ಇಂಡಿಯನ್ ನಟಿಯಾಗಿರುವ ಮಾನ್ಯ ನಾಯ್ಡುರವರು 2008 ರಲ್ಲಿ ಸತ್ಯ ಪಟೇಲ್ ಎನ್ನುವವರನ್ನು ಮದುವೆಯಾಗುತ್ತಾರೆ. ಇವರಿಂದ ವಿವಾಹ ವಿಚ್ಛೇದನವನ್ನು ಪಡೆದು 2013 ರಲ್ಲಿ ವಿಕಾಸ್ ಬಾಜಪೇಯಿ ಎನ್ನುವವರನ್ನು ಮತ್ತೊಮ್ಮೆ ಮದುವೆಯಾಗುತ್ತಾರೆ.
ಮೀರಾ ಜಾಸ್ಮಿನ್; ಮೀರ ಜಾಸ್ಮಿನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡಿಗರಿಗಂತೂ ಇವರು ಫೇವರೆಟ್ ನಟಿ. ಮೀರಾ ಜಾಸ್ಮಿನ್ ರವರು ಅನಿಲ್ ಜಾನ್ ಟೈಟೆಸ್ ರವರನ್ನು ಮದುವೆಯಾಗುತ್ತಾರೆ. ನಂತರ ಇವರಿಂದ ಡೈವರ್ಸ್ ಪಡೆದು ಇದು ಒಂಟಿಯಾಗಿ ಜೀವಿಸುತ್ತಿದ್ದಾರೆ.
ಅಮಲ ಪೌಲ್; ಮಲಯಾಳಂ ಮೂಲದ ಅಮಲಪೌಲ್ ಕನ್ನಡಿಗರಿಗೆ ಪರಿಚಿತರಾಗಿದ್ದು ಕಿಚ್ಚ ಸುದೀಪ್ ನಟನೆ ಹೆಬ್ಬುಲಿ ಚಿತ್ರದ ಮೂಲಕ. ಇವರು ತಮಿಳಿನ ಖ್ಯಾತ ನಿರ್ದೇಶಕ ಆಗಿರುವ ವಿಜಯ್ ರವರನ್ನು 2014 ರಲ್ಲಿ ಮದುವೆಯಾಗುತ್ತಾರೆ. ಆದರೆ ಪ್ರೀತಿಸಿ ಮದುವೆಯಾಗಿದ್ದ ಇವರಿಬ್ಬರು ಎರಡೇ ವರ್ಷದಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಾರೆ.
ಹೇಮ ಪ್ರಭಾಥ್; ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿ ಇದ್ದಂತಹ ಹೇಮಾ ಪ್ರಭಾತ್ ರವರು ಸ್ವಮೇಂದ್ರ ಪಂಚಮುಖಿ ಯನ್ನುವರನ್ನು ಮದುವೆಯಾಗಿದ್ದರು. ಇವರಿಂದ ವಿಚ್ಛೇದನವನ್ನು ಪಡೆದುಕೊಂಡ ನಂತರ ಕನ್ನಡದ ನಟನಾಗಿರುವ ಗೋಪಾಲ ಶಾಸ್ತ್ರಿಯವರನ್ನು ಮದುವೆಯಾಗಿದ್ದಾರೆ.

ಪ್ರೇಮಾ; ನಟಿ ಪ್ರೇಮಾ ರವರು 2006 ರಲ್ಲಿ ಜೀವನ್ ಅಪ್ಪಚ್ಚು ರವರನ್ನು ಮದುವೆಯಾಗುತ್ತಾರೆ. ನಂತರ 2016 ರಲ್ಲಿ ಇವರಿಬ್ಬರು ಪರಸ್ಪರ ಭಿನ್ನಾಭಿಪ್ರಾಯಗಳಿಂದಾಗಿ ಡೈವರ್ಸ್ ಪಡೆದುಕೊಳ್ಳುತ್ತಾರೆ. ಶೃತಿ; ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಶ್ರುತಿ ರವರು ನಿರ್ದೇಶಕ ಎಸ್ ಮಹಿಂದ್ರ ರವರನ್ನು ವಿವಾಹವಾಗುತ್ತಾರೆ. ನಂತರ ಇವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಪತ್ರಕರ್ತ ಚಕ್ರವರ್ತಿ ಚಂದ್ರಚುಡ್ ರವರನ್ನು ಮದುವೆಯಾಗುತ್ತಾರೆ. ನಂತರ ಇವರಿಗೂ ಕೂಡ ವಿಚ್ಛೇದನವನ್ನು ನೀಡಿ ಈಗ ಒಂಟಿ ಆಗಿದ್ದಾರೆ.
ಸಮಂತ; ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಜನಪ್ರಿಯರಾಗಿರುವ ನಟಿ ಸಮಂತಾ ರವರು ನಾಗಚೈತನ್ಯ ರವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈಗ ಅವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವುದು ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. ಇವರೇ ಮದುವೆಯಾದ ನಂತರ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯರು.