ಬರುತ್ತಿದೆ ಶುಕ್ರ ದೆಸೆ: ಶುಕ್ರ ದೇವ ಮೂರು ರಾಶಿಗಳಿಗೆ ನೀಡಲಿದ್ದಾನೆ ವಿಶೇಷ ಅದೃಷ್ಟ: ಈ ವರ್ಷ ಇನ್ನು ನಿಮಗೆ ಸೋಲೇ ಇಲ್ಲ. ಹಣ ಬರುವುದು ಯಾರಿಗೆ ಗೊತ್ತೇ??

3,308

ಶುಕ್ರನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತು, ವೈಭವ, ಐಶ್ವರ್ಯ ಮತ್ತು ಸಂತೋಷಕಾರಕ ಎಂದು ನಂಬಲಾಗಿದೆ. ಶುಕ್ರನ ಸ್ಥಾನ ಬಲವಾಗಿರುವ ಜಾತಕದವರಿಗೆ ಯಾವ ಕೊರತೆಯೂ ಇರುವುದಿಲ್ಲ. ಈ ತಿಂಗಳಲ್ಲಿ ಶುಕ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನ ಬದಲಿಸಲಿದ್ದಾನೆ. ಶುಕ್ರನ ಈ ಚಲನೆ ಅನೇಕ ರಾಶಿಯವರಿಗೆ ತೊಂದರೆ ಉಂಟು ಮಾಡಬಹುದಾದ ಸಾಧ್ಯತೆ ಇದೆ. ಶುಕ್ರನು ಈ ಬಾರಿ ಅಕ್ಟೋಬರ್ 18ರಂದು ಕನ್ಯಾ ರಾಶಿಯಿಂದ ತುಲಾ ರಾಶಿಗೆ ತನ್ನ ಸ್ಥಾನ ಬದಲಿಸಿಕೊಳ್ಳುತ್ತಿದ್ದು ಅಷ್ಟೇ ಅಲ್ಲದೆ ಮುಂಬರುವ ನವೆಂಬರ್ 11ರ ವರೆಗೆ ಆತ ಅಲ್ಲಿಯೇ ವಿರಾಜಮಾನಾಗಲಿದ್ದಾನೆ. ಈ ಸ್ಥಾನ ಪಲ್ಲಟ ಯಾವ ರಾಶಿಯವರಿಗೆ ಅದೃಷ್ಟ ಮತ್ತು ಯಾವ ರಾಶಿಯವರಿಗೆ ನಷ್ಟ ಎಂಬುದರ ಮಾಹಿತಿ ಇಲ್ಲಿದೆ.

ಕನ್ಯಾ ರಾಶಿ: ಶುಕ್ರನ ಈ ಸ್ಥಾನ ಪಲ್ಲಟ ಕನ್ಯಾ ರಾಶಿಯವರಿಗೆ ಒಳ್ಳೆಯ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಒಳ್ಳೆಯ ಸ್ಥಾನ, ಗೌರವ ಪಡೆಯಲಿದ್ದೀರಿ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನ ನೆರವು ಸಿಗಲಿದೆ. ನೀವು ಮಾಡಿದ ಹೂಡಿಕೆ ನಿಮಗೆ ಲಾಭ ತಂದು ಕೊಡಲಿದೆ. ಈ ಅವಧಿಯಲ್ಲಿ ನೀವು ಕೈಗೊಳ್ಳುವ ಕೆಲಸ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ.

ತುಲಾ ರಾಶಿ: ಶುಕ್ರ ರಾಶಿಸಂಚಾರವು ತುಲಾ ರಾಶಿಯವರ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ಶುಕ್ರನನ್ನು ತುಲಾ ರಾಶಿಯ ಅಧಿಪತಿಯಂತೆ ನಂಬಲಾಗಿದೆ. ಅಲ್ಲದೆ ಈ ಬಾರಿ ಶುಕ್ರ ತುಲಾ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಶುಕ್ರನು ಈ ರಾಶಿಯವರಿಗೆ ವಿಶೇಷ ಲಾಭ, ರಾಜಯೋಗ ತರಲಿದ್ದಾನೆ. ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲಿದೆ. ಹಣಕಾಸು ಇನ್ನಷ್ಟು ಹರಿದು ಬರಲಿದೆ.

ಮಕರ ರಾಶಿ: ಈ ರಾಶಿಯವರು ಶುಕ್ರ ರಾಶಿ ಸಂಚಾರದ ಅವಧಿಯಲ್ಲಿ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬಾರದು. ಕೆಲವು ಕೆಲಸಗಳಿಗೆ ಅಡಚಣೆ ಎದುರಾಗಬಹುದು. ಹೂಡಿಕೆಗಳನ್ನು ಮಾಡದಿರುವುದು ಒಳಿತು. ಕಠಿಣ ಪರಿಶ್ರಮದಿಂದ ಮಾತ್ರವೇ ಯಶಸ್ಸು ಪ್ರಾಪ್ತಿಯಾಗುವುದು.