ಮದುವೆಗೂ ಮುನ್ನ ಕಡ್ಡಿಯಂತೆ ಇರುವ ಹುಡುಗಿಯರು ಕೂಡ ಮದುವೆಯಾಗಿ ಆಂಟಿ ಆದ ಕೂಡಲೇ ದಪ್ಪಗಾಗುವುದು ಯಾಕೆ ಗೊತ್ತೇ?? ಕಾರಣ ಕೇಳಿದರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಬರುತ್ತೆ
ನಮಸ್ಕಾರ ಸ್ನೇಹಿತರೇ ಮದುವೆ ಅನ್ನುವುದು ಹೆಣ್ಣಾಗಲಿ ಗಂಡಾಗಲಿ ಇಬ್ಬರ ಜೀವನದಲ್ಲಿ ಬರುವಂತಹ ಒಂದು ಸಂತೋಷಮಯ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಆದರೆ ಇದು ಕೇವಲ ಮಾನಸಿಕ ಬದಲಾವಣೆಯನ್ನು ಮಾತ್ರವಲ್ಲದೆ ಶಾರೀರಿಕ ಬದಲಾವಣೆಯನ್ನು ಕೂಡ ತರುತ್ತದೆ. ಅದರಲ್ಲೂ ಪ್ರಮುಖವಾಗಿ ಹೆಣ್ಣು ಮಕ್ಕಳು ಮದುವೆಯಾದ ನಂತರ ಕ್ರಮೇಣವಾಗಿ ದಪ್ಪ ವಾಗುವುದನ್ನು ನೀವು ಗಮನಿಸಿರುತ್ತೀರಿ. ಇದರ ಹಿಂದಿರುವ ನಿಜವಾದ ವೈಜ್ಞಾನಿಕ ಕಾರಣ ಏನು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
ಹೌದು ಸಾಮಾನ್ಯವಾಗಿ ಮದುವೆಯಾದ ನಂತರ ಮಹಿಳೆಯರು ಮದುವೆ ಆಗುವುದಕ್ಕಿಂತ ಮುಂಚೆ ಇದ್ದಕ್ಕಿಂತ ದಪ್ಪವಾಗಿ ಇರುತ್ತಾರೆ. ಮಾನಸಿಕವಾಗಿ ಬದಲಾವಣೆ ಕಂಡುಬರುವುದು ಸರ್ವೇಸಾಮಾನ್ಯವಾಗಿದೆ ಆದರೆ ಇದೇನಿದು ಮದುವೆಯಾದ ತಕ್ಷಣ ದೇಹದಲ್ಲಿ ಬದಲಾವಣೆ ಹೇಗೆ ಸಾಧ್ಯ ಎನ್ನುವುದಾಗಿ ನೀವು ಯೋಚಿಸಬಹುದು. ಮದುವೆ ಆಗುವುದಕ್ಕೂ ಹಾಗೂ ಮದುವೆಯಾದ ನಂತರ ಮಹಿಳೆಯರು ಗಾತ್ರದಲ್ಲಿ ದಪ್ಪ ವಾಗುವುದರಲ್ಲಿ ಯಾವ ಸ್ವಾಮ್ಯತೆ ಇದೆ ಎಂಬುದಾಗಿ ನೀವು ಯೋಚಿಸಬಹುದು ಅದಕ್ಕೆ ಕೂಡ ಕಾರಣವಿದೆ ಬನ್ನಿ ತಿಳಿಯೋಣ.

ನೀವು ಗಮನಿಸಿರಬಹುದು ಮದುವೆಯಾದ ನಂತರ ಗಂಡು ಹಾಗೂ ಹೆಣ್ಣು ಇಬ್ಬರೂ ಕೂಡ ಸ್ವೇಚ್ಚಾಚಾರವಾಗಿ ಎಲ್ಲೆಂದರಲ್ಲಿ ತಮಗೆ ಬೇಕಾದಂತಹ ಸ್ಥಳಗಳಿಗೆ ಹೋಗಿ ಬರಬಹುದಾಗಿದೆ. ಈ ಸಂದರ್ಭದಲ್ಲಿ ಚಿಂತೆ ಸಮಸ್ಯೆಗಳು ತಲೆಯಿಂದ ದೂರವಾಗಿರುವುದು ಇವರ ದೇಹಕ್ಕೆ ಹಾಗೂ ಮನಸ್ಸಿಗೆ ಎರಡಕ್ಕೂ ಕೂಡ ಶಾಂತಿ ಹಾಗೂ ರಿಲ್ಯಾಕ್ಸೇಶನ್ ಅನ್ನು ನೀಡುತ್ತದೆ. ಬೇಕೆಂದು ಜಾಗದಲ್ಲಿ ಬೇಕಾದಂತಹ ಆಹಾರ ಪದಾರ್ಥಗಳನ್ನು ತಿನ್ನುವ ಸ್ವಾತಂತ್ರ್ಯ ಕೂಡ ಈ ಸಂದರ್ಭದಲ್ಲಿ ಅವರಿಗಿರುತ್ತದೆ. ಒಟ್ಟಾರೆಯಾಗಿ ಈ ಸಂದರ್ಭದಲ್ಲಿ ಅವರು ಯಾವುದೇ ಒತ್ತಡ ಅಥವಾ ಸಮಸ್ಯೆಗಳಿಗೆ ಸಿಲುಕದೆ ಆರಾಮವಾಗಿ ಯಾವುದೇ ಜಂಜಾಟದ ತೊಂದರೆ ಇಲ್ಲದೆ ಹಾರಾಡುವ ಪಕ್ಷಿಗಳಂತೆ ಇರುತ್ತಾರೆ.
ಮದುವೆಯಾದ ನಂತರ ಗಂಡ ಹೆಂಡತಿ ಒಟ್ಟಿಗೆ ಉತ್ತಮ ಸ್ಥಳದಲ್ಲಿ ಉತ್ತಮ ಆಹಾರವನ್ನು ತಿನ್ನುವ ಪ್ರಯತ್ನವನ್ನು ಮಾಡುತ್ತಾರೆ. ಹೀಗಾಗಿ ಇಂಥದ್ದೆ ಆಹಾರವನ್ನು ತಿನ್ನಬೇಕು ಎನ್ನುವ ನಿರ್ದಿಷ್ಟ ನಿಯಮ ಅವರಲ್ಲಿ ಇರುವುದಿಲ್ಲ. ಮನಸೋಇಚ್ಛೆ ಬೇಕಾದಂತಹ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಅದರಲ್ಲೂ ಪ್ರಮುಖವಾಗಿ ಮದುವೆಯಾದ ಮೇಲೆ ಮಹಿಳೆಯರಿಗೆ ತಮ್ಮ ದೈಹಿಕ ಆರೋಗ್ಯ ಅಥವಾ ಬಾಹ್ಯ ಸೌಂದರ್ಯದ ಕುರಿತಂತೆ ಹೆಚ್ಚಿನ ತಲೆಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಯಾಕೆಂದರೆ ಮದುವೆಯಾದ ಮೇಲೆ ನಮ್ಮನ್ನು ಇನ್ಯಾರು ನೋಡುತ್ತಾರೆ ಎನ್ನುವ ಮನೋಭಾವನೆ ಅವರಲ್ಲಿ ತುಂಬಿಕೊಂಡಿರುತ್ತದೆ. ಹೀಗಾಗಿ ದೈಹಿಕ ಹಾಗೂ ಬಾಹ್ಯ ಸೌಂದರ್ಯದ ಕುರಿತಂತೆ ಅಷ್ಟೊಂದು ವಿಚಾರ ಮಾಡುವುದಕ್ಕೆ ಹೋಗುವುದಿಲ್ಲ.
ಸ್ವಿಟ್ಜರ್ಲ್ಯಾಂಡ್ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದು ನಡೆಸಿರುವಂತಹ ಸಮೀಕ್ಷೆ ಪ್ರಕಾರ ಇದರ ವೈಜ್ಞಾನಿಕ ಕಾರಣ ತಿಳಿದುಬಂದಿದೆ. ಅದೇನೆಂದರೆ ಸಾಮಾನ್ಯವಾಗಿ ವ್ಯಾಯಾಮ ಹಾಗೂ ನಿರ್ದಿಷ್ಟ ಆಹಾರ ಪದ್ಧತಿಯನ್ನು ಅನುಸರಿಸಿದರೆ ಮಾತ್ರ ತಮ್ಮ ದೈಹಿಕ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಆದರೆ ಮದುವೆಯಾದ ನಂತರ ಮಹಿಳೆಯರು ಈ ಕುರಿತಂತೆ ವಿಚಾರವನ್ನು ಮಾಡುವುದಿಲ್ಲ. ಮಕ್ಕಳನ್ನು ಸಾಕುವುದರಲ್ಲಿ ವ್ಯಸ್ತರಾಗಿ ಬಿಡುತ್ತಾರೆ. ಇನ್ನು ಮಕ್ಕಳು ತಿಂದುಬಿಟ್ಟ ಆಹಾರವನ್ನು ಕೂಡ ಅವರ ತಿನ್ನುತ್ತಾರೆ. ಯಾವುದೇ ವ್ಯಾಯಾಮ ಹಾಗೂ ದೈಹಿಕ ಕಸರತ್ತನ್ನು ಮಾಡಲು ಹೋಗುವುದಿಲ್ಲ. ಹೀಗಾಗಿ ಅವರು ಮದುವೆಯಾದ ಮೇಲೆ ದಪ್ಪ ಆಗುವುದು ಸರ್ವೇಸಾಮಾನ್ಯವಾಗಿದೆ.

ಅರ್ಥಪೂರ್ಣವಾಗಿ ಹೇಳುವುದಾದರೆ ಗಂಡ ಹಾಗೂ ಮನೆ ಮತ್ತು ಮಕ್ಕಳ ಸುಖ ಸಂತೋಷಕ್ಕಾಗಿ ತಾನು ಮದುವೆಯಾಗುವುದಕ್ಕಿಂತ ಮುಂಚೆ ಮಾಡಿಕೊಂಡು ಬಂದಿದ್ದ ಅಲಂಕಾರ ಸೌಂದರ್ಯ ಹಾಗೂ ದೈಹಿಕ ಆರೋಗ್ಯದ ಕುರಿತಂತೆ ಎಲ್ಲಾ ಅಭ್ಯಾಸ ಕ್ರಮಗಳನ್ನು ಕೂಡ ಮದುವೆಯಾದ ನಂತರ ಮಹಿಳೆ ಬಿಟ್ಟು ಬಿಡುತ್ತಾಳೆ. ಹಾಗು ತನ್ನ ಸಂಪೂರ್ಣ ಆಸಕ್ತಿಯನ್ನು ಹಾಗೂ ಸಮಯವನ್ನು ತನ್ನ ಗಂಡ ಹಾಗೂ ಮಕ್ಕಳು ಮತ್ತು ಪರಿಹಾರಕ್ಕಾಗಿ ಮೀಸಲಿಡುತ್ತಾರೆ. ಹೀಗಾಗಿಯೇ ಮದುವೆಯಾದ ನಂತರ ಅವರು ದಪ್ಪವಾಗುತ್ತಾರೆ. ಹೀಗಾಗಿ ಮದುವೆಯಾದ ನಂತರ ಆಕೆ ದಪ್ಪ ಆಗಿದ್ದಾಳೆ ಎನ್ನುವ ಕಾರಣಕ್ಕಾಗಿ ಅವಳ ಕುರಿತಂತೆ ತೋರುವುದು ನಿಜಕ್ಕೂ ಕೂಡ ಉಚಿತವಲ್ಲ. ಆ ಸಂದರ್ಭದಲ್ಲಿ ಈ ವಿಚಾರಗಳನ್ನು ನೀವು ತಲೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.