ಕೊನೆಗೂ ನಿಟ್ಟುಸಿರು ಬಿಟ್ಟ ಒಂದು ಕಾಲದ ಟಾಪ್ ನಟಿ: ಇಷ್ಟು ದಿನಕ್ಕೆ ಸಿಕ್ತು ಕೊಂಚ ನೆಮ್ಮದಿಯ ಸುದ್ದಿ. ದಿವ್ಯ ಬಾಳಲ್ಲಿ ಏನಾಗಿದೆ ಗೊತ್ತೇ??

83

ಒಂದು ಕಾಲದ ಸೂಪರ್ ಹಿಟ್ ಧಾರಾವಾಹಿ ಆಕಾಶದೀಪದ ಜನಪ್ರಿಯ ನಟಿ ದಿವ್ಯ ಶ್ರೀಧರ್ ಕೆಲವು ದಿನಗಳ ಹಿಂದೆ ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ ಎಂಬ ವಿಡಿಯೋ ಮಾಡಿ ಸುದ್ದಿ ಆಗಿದ್ದರು. ಇತ್ತೀಚೆಗಷ್ಟೇ ತಮ್ಮ ಮದುವೆಯ ವಿಚಾರವನ್ನು ಬಹಿರಂಗಗೊಳಿಸಿದ್ದ ಅವರು ತಾನು ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ತನ್ನ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ ವಿಡಿಯೋ ವೈರಲ್ ಆಗಿದ್ದು, ತಾನು ಗರ್ಭಿಣಿ ಎನ್ನುವುದನ್ನು ನೋಡದೆ ನನ್ನ ಹೊಟ್ಟೆಗೆ ಒದೆದಿದ್ದಾರೆ, ಥಳಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ತನಗೆ ಆದ ಅನ್ಯಾಯಕ್ಕೆ ಕಾನೂನು ಹೋರಾಟ ಮಾಡುವೆ ಎಂದು ಹೇಳಿಕೊಂಡಿದ್ದ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಅವರ ಪತಿ ಅರ್ನವ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಹೌದು. ಸದ್ಯ ತಮಿಳು ಸೀರಿಯಲ್ ಗಳಲ್ಲಿ ಬ್ಯುಸಿ ಇರುವ ನಟಿ ದಿವ್ಯ ಶ್ರೀಧರ್ ಅವರ ವೈಯಕ್ತಿಕ ಜೀವನ ಅತಂತ್ರವಾಗಿದೆ. ತನ್ನ ಪತಿ ತನಗೆ ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದೀಗ ದಿವ್ಯ ಶ್ರೀಧರ್ ದೂರನ್ನು ಆಧರಿಸಿ ತಮಿಳುನಾಡು ಪೊಲೀಸರು ನಟ ಅರ್ನವ್ ರನ್ನು ಬಂಧಿಸಿದ್ದಾರೆ. ದಿವ್ಯ ಶ್ರೀಧರ್ ತಮ್ಮ ಪತಿಯ ವಿರುದ್ಧ ಬೆದರಿಕೆ, ಹಿಂಸೆ, ದೈಹಿಕ ಹಲ್ಲೇ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಆ ದೂರಿನ ಅನ್ವಯ ಪೊಲೀಸರು ನೋಟಿಸ್ ಜಾರಿ ಮಾಡುವ ಮೂಲಕ ವಿಚಾರಣೆಗೆ ಹಾಜರಾಗುವಂತೆ ಆರ್ನವ್ ಅವರನ್ನು ಕೋರಿದರು. ಆದರೆ ತಾನು 18ನೇ ತಾರೀಕು ವಿಚಾರಣೆಗೆ ಬರುವುದಾಗಿ ಅರ್ನವ್ ಸಮಯ ಕೇಳಿದರಂತೆ, ಇದಕ್ಕೆ ಒಪ್ಪದ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.

ತನ್ನ ಕಣ್ಣಿಗೆ ಪೆಟ್ಟು ಬಿದ್ದಿದೆ, ಚಿಕಿತ್ಸೆ ಪಡೆದುಕೊಳ್ಳಬೇಕು. ಹೀಗಾಗಿ 18 ನೇ ತಾರೀಕು ವಿಚಾರಣೆಗೆ ಬರುತ್ತೇನೆ ಎಂದು ಆರ್ನವ್ ಪೊಲೀಸ್ ನೋಟಿಸ್ ಗೆ ಉತ್ತರಿಸಿ ಸಮಯ ಕೇಳಿದ್ದಾರೆ. ಆದರೆ ಅವರ ಮನವಿಯನ್ನು ತಿರಸ್ಕರಿಸಿರುವ ಪೊಲೀಸರು ನಿನ್ನೆ ಸಂಜೆ 5 ಗಂಟೆಯೊಳಗೆ ಖುದ್ದು ಹಾಜರಾಗಬೇಕು ಎಂದು ತಿಳಿಸಿದ್ದರು. ಇಷ್ಟು ಕಟ್ಟುನಿಟ್ಟಾಗಿ ಸೂಚಿಸಿದ ಮೇಲೂ ಅವರು ವಿಚಾರಣೆಗೆ ಹಾಜರಾಗದೆ, ಕಣ್ಣಿಗೆ ಪೆಟ್ಟು ಬಿದ್ದಿರುವುದರ ನೆಪ ಹೇಳಿದ್ದಲ್ಲದೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಹೀಗಾಗಿ ತಮಿಳುನಾಡು ಪೊಲೀಸರು ವಿಚಾರಣೆಗೆ ಬಾರದೆ ಇದ್ದ ಅರ್ನವ್ ಅವರನ್ನು ಚಿತ್ರೀಕರಣದ ಸ್ಪಾಟ್ ಗೆ ಹೋಗಿ ಬಂಧಿಸಿದ್ದಾರೆ.